
ಚನ್ನಮ್ಮನ ಕಿತ್ತೂರು,ಏ 15: ಇಂದು ಭಾರತ ಗಟ್ಟಿಯಾಗಿದೆ ಎಂದರೆ ಅದು ಅಂಬೇಡ್ಕರ ರವರಿಂದ ಅವರ ಕೊಟ್ಟ ಕೊಡುಗೆಯಿಂದಲೇ ಈ ಜಗತ್ತು ನಡೆದಿದೆ ಎಂದು ಪ್ರೌಢಶಾಲಾ ಶಿಕ್ಷಕ ಮಹಾಂತೇಶ್ ಕಾಳೆ ಹೇಳಿದರು.
ತಾಲೂಕ ಆಡಳಿತ, ತಾಪಂ, ಪಪಂ ಕಿತ್ತೂರು, ಪಪಂ ಎಂ ಕೆ ಹುಬ್ಬಳ್ಳಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಯುಕ್ತಶ್ರಯದಲ್ಲಿ ಪಪಂ ಆವರಣದಲ್ಲಿ ಹಮ್ಮಿಕೊಂಡಿದ್ದ 132ನೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ಈ ದೇಶಕ್ಕೆ ನೀಡಿದ ಕೊಡುಗೆ ಎಲ್ಲರಿಗೂ ಮಾದರಿ ಅವುಗಳನ್ನು ಎಲ್ಲರೂ ಅನುಸರಿಸಿದ್ದೆ ಆದರೆ ನಮ್ಮ ದೇಶ ರಾಮ ರಾಜ್ಯವಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಸೂರ್ಯ- ಚಂದ್ರರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೂ ಅಂಬೇಡ್ಕರ್ ಇರುತ್ತಾರೆ.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು ಗಣ್ಯರನ್ನು ಪೌರಕಾರ್ಮಿಕರನ್ನು ಸತ್ಕರಿಸಲಾಯಿತು.
ಈ ವೇಳೆ ತಾಲೂಕ ದಂಡಾಧಿಕಾರಿ ರವೀಂದ್ರ ಹಾದಿಮನಿ, ಪಿಡಬ್ಲ್ಯೂಡಿ ಅಭಿಯಂತರ ಪ್ರವೀಣ ಹುಲಜಿ, ಪಪಂ ಅಧಿಕಾರಿ ಪ್ರಭಾಕರ್ ದೊಡಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‍ಟಿ ಬಳಿಗಾರ, ಪಾಪಂ ಇಂಜಿನಿಯರ್ ವೆಂಕಟೇಶ್ ಕಾಮಣ್ಣವರ, ಸಿಪಿಐ ನಿತ್ಯಾನಂದ ಪಂಡಿತ್, ಪಿಎಸ್‍ಐ ರಾಜು ಮಾಮದಾಪುರ್ ಎಫ್ ಎಂ ಜಕಾತಿ ಫಕೀರಪ್ಪ ಜಯಂತಿ ಮಡಿವಾಳಪ್ಪ ವಕ್ಕುಂದ್, ಜಿಎಸ್ ಪಾಟೀಲ್, ರೂಪ ಜ್ಯೋತಿ, ಎಂಎಸ್ ಪಾಟೀಲ್, ರಮೇಶ್ ತುರಮಂದಿ , ಆಯ್. ಜಿ. ಶಿವಪೂಜಿ ಮಠ, ಬಾಳೇಶ್ ಸೇರಿದಂತೆ ತಾಲೂಕ ಮಟ್ಟದ ಎಲ್ಲಾ ಅಧಿಕಾರಿ, ಸಾರ್ವಜನಿಕರು, ದಲಿತ ಮುಖಂಡರು ಉಪಸ್ಥಿತರಿದ್ದರು.
ಸ್ವಾಗತ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಕಲಾವತಿ ದೇಶನೂರ, ನಿರೂಪಣೆ ಅಕ್ಬರ್ ಮುಜಾವರ, ವಂದನಾರ್ಪಣೆ ಮಂಜುನಾಥ ತೋಟಗಿ ನೆರವೇರಿಸಿದರು.