ಡಾ. ಅಂಬೇಡ್ಕರ್ ಜಯಂತಿ: ಕ್ರೀಡಾಕೂಟಕ್ಕೆ ಚಾಲನೆ

ಬೀದರ್: ಏ.5:ಮೂಲನಿವಾಸಿ ಫೌಂಡೇಷನ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಕ್ರೀಡಾಕೂಟಕ್ಕೆ ಈಚೆಗೆ ಚಾಲನೆ ದೊರೆಯಿತು.
ಉದ್ಘಾಟನೆ ನೆರವೇರಿಸಿದ ಆಣದೂರಿನ ಭಂತೆ ಸಂಘರಖ್ಖಿತ ಅವರು, ಕ್ರೀಡೆಯಲ್ಲಿ ಗೆಲುವು-ಸೋಲು ಸ್ವಾಭಾವಿಕ. ಕ್ರೀಡಾಪಟುಗಳು ಎರಡನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಹೇಳಿದರು.
ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿರುವ ಕ್ರೀಡಾಕೂಟದಲ್ಲಿ 100 ಮೀಟರ್, 200 ಮೀಟರ್, 400 ಮೀಟರ್, 800 ಮೀಟರ್ ಓಟದ ಸ್ಪರ್ಧೆ, ಕಬಡ್ಡಿ, ವಾಲಿಬಾಲ್, ಕುಸ್ತಿ, ಟೇಬಲ್ ಟೆನಿಸ್ ಸ್ಪರ್ಧೆಗಳು ನಡೆಯಲಿವೆ. ಏಪ್ರಿಲ್ 7 ರಂದು ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭ ಜರುಗಲಿದೆ ಎಂದು ಕ್ರೀಡಾಕೂಟದ ಸಂಯೋಜಕ ವಿನೋದಕುಮಾರ್ ಅಪ್ಪೆ ತಿಳಿಸಿದರು.
ಮುಖಂಡರಾದ ವೈಜಿನಾಥ ಸೂರ್ಯವಂಶಿ, ವಿಠ್ಠಲದಾಸ್ ಪ್ಯಾಗೆ ಮಾತನಾಡಿದರು. ಮುಖಂಡ ಬಾಬುರಾವ್ ಪಾಸ್ವಾನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಸಾಗರ್ ದಾಂಡೇಕರ್, ಕ್ರೀಡಾಕೂಟದ ಸಂಯೋಜಕರಾದ ವಿನಯ್ ಮಾಳಗೆ, ವಿನೋದ್ ಬಂದಗೆ, ಸೂರ್ಯಕಾಂತ ಸಾಧುರೆ, ಪವನ್ ಮಿಠಾರೆ, ಸೋಮನೋರ, ಪ್ರದೀಪ್ ನಾಟೇಕರ್ ಮತ್ತಿತರರುಸ ಇದ್ದರು.