ಡಾ. ಅಂಬೇಡ್ಕರ್ ಜಯಂತಿ ಆಚರಣೆ

ನವಲಗುಂದ,ಏ14 : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಇವರ ಭಾವಚಿತ್ರಕ್ಕೆ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಸಂತೋಷ ಹುಬ್ಬಳ್ಳಿ ಮಾತನಾಡಿ ಭಾರತೀಯ ಇತಿಹಾಸದಲ್ಲಿ ಅನೇಕ ಸ್ವಾತಂತ್ರ ಹೋರಾಟಗಾರರು, ಸಮಾಜ ಸುಧಾರಕರು ತಮ್ಮ ಕೊಡುಗೆಗಳನ್ನು ನೀಡಿದ್ದು ಅದರಲ್ಲಿ ತಮ್ಮ ಹೋರಾಟದ ಮುಖಾಂತರ ಶೋಷಿತರನ್ನು,ದೀನ ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದ ಡಾ ಬಾಬಾ ಸಾಹೇಬ ಅಂಬೇಡ್ಕರ್ ಯಾವಾಗಲೂ ಮಾದರಿಯಾಗಿ ಉಳಿಯುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಎಂ ಬಿ ಬಾಗಡಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಇವರ ಜೀವನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದ್ದು ಎಲ್ಲರೂ ಅವರ ತತ್ವಗಳನ್ನು ಪಾಲಿಸಲು ಸಲಹೆ ನೀಡಿದರು.

ಡಾ ನಾಗರತ್ನ ಕುರಡೇಕರ, ಬಸವರಾಜ ಸೂಡಿ, ಬಿ ವಿ ಏಣಗಿ, ಡಾ ಸುಗುಣ ಡಿ ವಿ, ಶ್ರೀಧರ್ ಲೋನಕರ, ರವಿ ಬ್ಯಾಹಟ್ಟಿ, ವೀರಭದ್ರಪ್ಪ ಮರಡಿ, ಪ್ರತಿಭಾ ಮುಂತಾದವರು ಇದ್ದರು.