ಡಾ. ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಡಿಎಸ್ಎಸ್ ಮುಖಂಡರ  ಆಕ್ರೋಶ

Oplus_0


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.04 ಬಾಬು ಜಗಜೀವನ್ ರಾಮ್ ಮತ್ತು ಡಾ.. ಬಿ ಆರ್  ಅಂಬೇಡ್ಕರ್  ಜಯಂತೋತ್ಸವ ಅಂಗವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಡಿಎಸ್ಎಸ್ ಮುಖಂಡರು ತಮ್ಮ ಅಕ್ರೋಶವನ್ನು ಹೊರ ಹಾಕಿದರು.
 ಪಟ್ಟಣದ ತಾಲೂಕ ಪಂಚಾಯಿತಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ತಾಲೂಕ ಆಡಳಿತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಮಾತನಾಡಿ ಏ.5ರಂದು  ಚುನಾವಣಾ ನಿಮಿತ್ತ ಅಧಿಕಾರಿಗಳ ಸಭೆ ಇರುವುದರಿಂದ
ಬಾಬು ಜಗಜೀವನ್ ರಾಮ್ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಒಟ್ಟಿಗೆ ಆಚರಿಸಲು ಸಲಹೆ ಅಭಿಪ್ರಾಯ ಕೇಳುತ್ತಿದ್ದಂತೆಯೇ ಡಾ. ಬಿಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್ ದೊಡ್ಡಬಸಪ್ಪ ಮಾತನಾಡಿ ಪ್ರತಿ ವರ್ಷ ಜಯಂತಿಯ ಸಂದರ್ಭದಲ್ಲಿ ಏನಾದರೂ ಒಂದು ಅಡ್ಡಿ ಆತಂಕಗಳು ಬರುತ್ತಲೇ ಇವೆ. ನೆಪ ಮಾತ್ರಕ್ಕೆ  ಸರ್ಕಾರಿ ವೇದಿಕೆಗೆ ಸೀಮಿತಗೊಳಿಸಿ ಜಯಂತಿ ಆಚರಿಸಲಾಗುವುದು. ಆದರೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಬಾಬೂಜಿ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಬೇಕು.. ಈ ಒಂದು ಪೂರ್ವಭಾವಿ ಸಭೆಗೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜೂರಾಗಿದ್ದಾರೆ. ಉಳಿದ ಅಧಿಕಾರಿಗಳು ಗೈರಾಗಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು ಅಂಬೇಡ್ಕರ್ ಅವರಿಗೆ ಅಗೌರವ ತೋರದೇ ಜಯಂತಿಯನ್ನು ಆಚರಿಸಲು ಮುಂದಾಗಬೇಕು. ಚಿಂತ್ರಪಳ್ಳಿ ಅಂಬೇಡ್ಕರ್ ಭವನದಲ್ಲಿ ಏಪ್ರಿಲ್ 14ರಂದು ಈ ಇಬ್ಬರ ಮಹನೀಯರ ಜಯಂತಿ ಅರ್ಥಪೂರ್ಣವಾಗಿ ಆಚರಿಸಬೇಕು  ಎಂದರು.
 ಡಿಎಸ್ಎಸ್ ಸಂಚಾಲಕ ಮಾದೂರು  ಮಹೇಶ್ ಮಾತನಾಡಿ ಇಬ್ಬರ ಮಹನೀಯರ ಜಯಂತಿಯನ್ನು ಒಟ್ಟಿಗೆ ಆಚರಿಸುವುದು ಸರಿಯಲ್ಲ. ಬಾಬು ಜಗಜೀವನ್ ರಾಮ್ ಜಯಂತಿಯನ್ನು ನಿಗದಿಪಡಿಸಿದ ದಿನಾಂಕವೇ ನಡೆಯಬೇಕು. ಕಾಟಾಚಾರಕ್ಕೆ ಜಯಂತಿ ಮಾಡುತ್ತಿರುವುದು ಶೋಭೆಯಲ್ಲ. ದೇಶಕ್ಕೆ ಸಂವಿಧಾನ ನೀಡಿದ  ಮಹಾತ್ಮರ ಜಯಂತಿಯ ಪೂರ್ವಭಾವಿ ಸಭೆಗೆ ಪ್ರತಿ ಬಾರಿಯೂ ಅಧಿಕಾರಿಗಳು ಗೈರಾದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅವರಿಗೆ ಜಯಂತಿಯ ಬಗ್ಗೆ ಮನದಟ್ಟ ಮಾಡಬೇಕಾಗಿದೆ. ನಾವು ಯಾವುದೇ ಸಮಸ್ಯೆ ಹೇಳಿಕೊಳ್ಳಲು ಈ ಒಂದು ಸಭೆಗೆ ಮಾತ್ರ ಅವಕಾಶವಿರುತ್ತದೆ. ಪ್ರತಿ ಬಾರಿಯೂ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ ಎಂದು  ವ್ಯಕ್ತಪಡಿಸಿದರು.
ಈ  ಸಂದರ್ಭದಲ್ಲಿ ಮುಖಂಡರಾದ ಹೆಗ್ದಾಳ್ ರಾಮಣ್ಣ, ಕಹಳೆ ಬಸವರಾಜ್, ಎಚ್ ಪ್ರಭಾಕರ ಕೋಗಳಿ ಉಮೇಶ್, ಪೂಜಾರ್ ಸಿದ್ದಪ್ಪ, ಮಹೇಶ್, ದುರ್ಗಪ್ಪ ಮೈಲಾಪ್ಪ, ದೇವೇಂದ್ರ, ತಾ ಪಂ ಇ ಒ ಜಿ ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆಯ ಎ ಡಿ ಹೆಚ್ ಆಂಜನೇಯ ಹುಲ್ಲಾಳ್, ಬಿಇಒ ಮೈಲೇಶ್ ಬೇವೂರ್ ಇತರರಿದ್ದರು