ಡಾ.ಅಂಬೇಡ್ಕರ್ ಓದು ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಚಿಂಚೋಳಿ,ನ.11- ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಬುರಗಿ ಹಾಗೂ ಸರಕಾರಿ ಕನ್ಯಾ ಪದವಿ ಪೂರ್ವ ಕಾಲೇಜು ಹಾಗೂ ಪದ್ಮಾ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಓದು ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಉಪನಿರ್ದೆಶಕರು ದತ್ತಪ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಂಚೋಳಿ ತಾಲೂಕಾ ಸಮಾಜಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳಾ. ತಾಲೂಕಿನ ಪಶು ವೈದ್ಯ ಅಧಿಕಾರಿ ಡಾ.ಧನರಾಜ ಬೊಮ್ಮ. ವೀರಣ್ಣ ಸುಗಂಧಿ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಉತ್ತಮ ದೊಡ್ಡಮನಿ. ಜಗದೇವ ಗೌತಮ. ಕಾಲೇಜಿನ ಪ್ರಾಚಾರ್ಯರಾದ ಅಶೋಕಕುಮಾರ ಭಾವಗಿ. ಸಿದ್ದಣ ಬೇನೂರ. ಉಪನ್ಯಾಸಕರಾದ ಎನ್ ಎಸ್ ಪಾಟೀಲ. ಶಾಂತವೀರ ಹೀರಾಪೂರ ಉಪನ್ಯಾಸಕಿರಾದ ಮೀನಾಕ್ಷಿ ಚವ್ಹಾಣ ಕವಿತಾ. ಇದ್ದರು ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ರವರ ವಿಷಯಗಳ ಬಗ್ಗೆ ಮೇಲೆ ಎರಡು ಕಾಲೇಜು ಮಟ್ಟದಲ್ಲಿ ಆಶುಭಾಷಣ, ಕವನ,ರಸಪ್ರಶ್ನೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ತೃತೀಯ ಸ್ಥಾನವನ್ನು ಪಡೆದಿದ್ದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು.