ಡಾ. ಅಂಬೇಡ್ಕರ್‍ರ 130ನೇ ಜಯಂತಿ ಅಂಗವಾಗಿ 7 ದಿನ ವಿವಿಧ ಸ್ಪರ್ಧೆಗಳು

ಬೀದರ, ಏ. 08ಃ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‍ರವರ 130 ನೇ ಜನ್ಮದಿನೋತ್ಸವ ಸಮಿತಿ ವತಿಯಿಂದ ಡಾ. ಭೀಮರಾವ ರಾಮಜೀ ಅಂಬೇಡ್ಕರ್‍ರ 130ನೇ ಜಯಂತಿ ಅಂಗವಾಗಿ ದಿನಾಂಕ 8 ರಿಂದ 14ರವರೆಗೆ 7 ದಿನಗಳ ಕಾಲ ಜನವಾಡಾ ರಸ್ತೆಯ ಅಂಬೇಡ್ಕರ್ ಭವನದಲ್ಲಿ ರಂಗೋಲಿ, ಭಾಷಣ, ಚಿತ್ರಕಲಾ, ವಾಲಿವಾಲ್, ಕವಿಗೋಷ್ಠಿ, ವಿಚಾರಗೋಷ್ಠಿ ಮತ್ತು ಭಜನಾ ಸ್ಪರ್ಧಾ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ದಿನಾಂಕ 8 ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 2,000, ದ್ವಿತೀಯ 1,000 ರೂಪಾಯಿ ನಗದು ಬಹುಮಾನ ನೀಡಲಾಗುವುದು.

ದಿನಾಂಕ 9 ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನ ವಿಷಯ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 2,000, ದ್ವಿತೀಯ 1,000 ರೂಪಾಯಿ ನಗದು ಬಹುಮಾನ ನೀಡಲಾಗುವುದು. ದಿನಾಂಕ 9 ರಂದು ಮಧ್ಯಾಹ್ನ 12 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ಪ್ರಥಮ 2,000, ದ್ವಿತೀಯ 1,000 ನಗದು ಬಹುಮಾನ ನೀಡಲಾಗುವುದು.

ದಿನಾಂಕ 10 ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದ ಆವರಣಲ್ಲಿ ವಾಲಿಬಾಲ್ ಸ್ಪರ್ಧೆ ಏರ್ಪಡಿಸಲಾಗಿದೆ. ವಿನ್ನರ್ ತಂಡಕ್ಕೆ 5,000, ರನ್ನರ್‍ಪ ತಂಡಕ್ಕೆ 3,000 ರೂಪಾಯಿ ನಗದು ಬಹುಮಾನ ನೀಡಲಾಗುವುದು.

ದಿನಾಂಕ 11 ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಕವಿಗೋಷ್ಠಿ ನಡೆಯಲಿದೆ. ಈ ಕವಿಗೋಷ್ಠಿಯಲ್ಲಿ 130 ಜನ ಕವಿಗಳು ಅಂಬೇಡ್ಕರ್‍ರವರ ಕುರಿತು ಕವನಗಳು ವಾಚನ ಮಾಡುವರು. ನಂತರ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ದೇಶದ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅಂಬೇಡ್ಕರ್‍ರವರ ಪಾತ್ರ, ಕಾರ್ಮಿಕರ ಅಭ್ಯುದಯಕ್ಕಾಗಿ ಅಂಬೇಡ್ಕರ್‍ರವರ ಕಾಯ್ದೆ ಹಾಗೂ ಕಾನೂನುಗಳು ಮತ್ತು ಅಂಬೇಡ್ಕರ್ ಹಾಗೂ ಮೀಸಲಾತಿ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ದಿನಾಂಕ 12 ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಅಂಬೇಡ್ಕರ್‍ರವರ ಕುರಿತು ಭಜನಾ ಪದಗಳೇ ಹಾಡಬೇಕು. ವಿಜೇತರಿಗೆ ಪ್ರಥಮ 5,000, ದ್ವಿತೀಯ 3,000 ನಗದು ಬಹುಮಾನ ನೀಡಲಾಗುವುದು.

ರಂಗೋಲಿ, ಭಾಷಣ, ಚಿತ್ರಕಲಾ, ಭಜನಾ ಸ್ಪರ್ಧೆಗಳು ಸೇರಿದಂತೆ ಕವಿಗೋಷ್ಠಿ, ವಿಚಾರಗೋಷ್ಠಿ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಸಕ್ತರು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‍ರವರ 130 ನೇ ಜನ್ಮದಿನೋತ್ಸವ ಸಮಿತಿಯ ಸಂಯೋಜಕರಾದ ಮಹೇಶಕುಮಾರ ಗೋರನಾಳಕರ್-9945153539 ಮತ್ತು ಪ್ರಧಾನ ಕಾರ್ಯದರ್ಶಿ ಮಾರುತಿ ಕಂಟಿ-9986160731 ಮೊಬೈಲ್ ಸಂಖ್ಯೆಗಳಿಗೆ ಸಂರ್ಪಕಿಸಬೇಕು ಎಂದು ಎಂದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‍ರವರ 130 ನೇ ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷರಾದ ರಾಜಕುಮಾರ ಮೂಲಭಾರತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.