ಚಿಂಚೋಳಿ,ಜೂ.6- ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವಮಾನವ. ವಿದೇಶಗಳಲ್ಲಿ
ಅವರ ವಿಚಾರಗಳು ಅನುಕರಣೆಯಾಗುತ್ತಿವೆಹಾಗೂ ವರ್ಷವಿಡೀ ಜಯಂತಿ ಆಚರಿಸಲಾಗುತ್ತಿದೆ.
ಸೂರ್ರ-ಚಂದ್ರ ಇರುವವರೆಗೆ ಅವರ ಹೆಸರುಜರಾಮರ ಎಂದು ದೆಹಲಿ ಭಾರತೀಯ ಬೌದ್ಧ
ಸಂಸ್ಥೆ ಅಧ್ಯಕ್ಷರು ಹಾಗೂ ಡಾ| ಬಿ.ಆರ್. ಅಂಬೇಡ್ಕರ್ ವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದರು.
ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಡಾ| ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಜಾಪ್ರಭುತ್ವ ಮತ್ತು ಲೋಕತಂತ್ರ ಡಾ|ಅಂಬೇಡ್ಕರ್ ವಿಚಾರ, ನಂಬಿಕೆ ಯಾರಿಂದಲೂ
ತಡೆಯಲು ಸಾಧ್ಯವಿಲ್ಲ. ಆದರೆ ಕೆಲವು ಶಕ್ತಿಗಳು ಜಾತಿ-ಧರ್ಮಗಳ ಮಧ್ಯೆ ದ್ವೇಷ ಹುಟ್ಟು ಹಾಕಿ ಅಶಾಂತಿಯನ್ನುಂಟು ಮಾಡುತ್ತಿವೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುದಿಲ್ಲ. ಆದರೆ ಅವರನ್ನು ನಡೆಸುತ್ತಿರುವ ಅವರ ಕಂಪನಿ ಆರ್ ಎಸ್ ಎಸ್‍ನ ನಡೆಯ ವಿರೋಧವಿದೆ ಎಂದರು.
ಕರ್ನಾಟಕದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅನೇಕರು ಸೀರೆ, ಹಣ, ಕೋಳಿ ಹಂಚಿಕೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ಆದರೆ ಅವುಗಳನ್ನು ಜನರು ಬಿಸಾಕಿದ್ದಾರೆ. ಹಿಜಾಬ್, ಹಲಾಲ್ ವಿರೋಧಿಸುವ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ.ಎಂದರು.
ಪ್ರತಿಯೊಬ್ಬ ಪ್ರಜೆಗೆ ಸಂವಿಧಾನದಲ್ಲಿ ಮತದಾನಹಕ್ಕು ಮಾಡುವ ಅಧಿಕಾರ ಅಂಬೇಡ್ಕರ್ ನೀಡಿದ್ದಾರೆ ಅವರಿಂದ ಭಾರತ ದೇಶದ ಜನರು ದೇಶದಲ್ಲಿ ಸ್ವಚ್ಛತಾ ಅಭಿಯಾನ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ
ಬಿಜೆಪಿ ಸದಸ್ಯರನ್ನು ಹೊರ ಹಾಕುವ ಮೂಲಕ ಸ್ವಚ್ಛತೆ
ಮಾಡಿ ಸಂವಿಧಾನ ಉಳಿಸಿ ಎಂದು ರಾಜರತ್ನ ಅಂಬೇಡ್ಕರ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸುಭಾಷ ರಾಠೋಡ, ಮಾವಳ್ಳಿ ಶಂಕರ, ಜಯಂತೋತ್ಸವ ಅಧ್ಯಕ್ಷರಾದ ಗೋಪಾಲ ರಾಂಪುರೆ, ಬಸಣ್ಣ ಸಿಂಗೆ, ಜಿ. ಕೆ. ಗೋಖಲೆ, ಪ್ರವೀಣ ಟಿ. ಟಿ, ಶಾಮರಾವ
ಕೊರವಿ, ಆನಂದ ಟೈಗರ್, ಆರ್ ಗಣಪತ್ ರಾವ, ಗೌತಮ್ ಬೊಮ್ನಳ್ಳಿ, ಸಂತೋಷ ಗುತ್ತೇದಾರ, ವಾಮನರಾವ್ ಕೊರವಿ, ವಿಶ್ವನಾಥ ಹೋಡಬೀರನಳ್ಳಿ, ಇಂದುಮತಿ ಮನೋಹರ್ ದೇಗಲಮಡಿ, ಸುಲೋಚನ ಜಗನ್ನಾಥ್ ಕಟ್ಟಿ, ಅಮರ್ ಲೋಡನೋರ,ಶಿವಯೋಗಿ ರುಸ್ತಂಪುರ, ಮನೋಹರ್ ಕೊರವಿ, ಬಸವರಾಜ ಮಾಲಿ, ಅಬ್ದುಲ್ ಬಾಸಿತ, ಲಕ್ಷ್ಮಣ ಅವುಟ್ಟಿ, ಪಾಂಡುರಂಗ ಲೋಡನೋರ, ಉಲ್ಲಾಸ್ ಕೆರಳ್ಳಿ, ಜಗದೇವ ಗೌತಮ, ಕೆ ಮಹೇಶ್, ರಾಜಶೇಖರ್ ಹೊಸಮನಿ, ಜಗನ್ನಾಥ್ ನಂದ, ದೇವೇಂದ್ರಪ್ಪ ಹೋಳರ, ಮಾರುತಿ ಗಂಜಗಿರಿ, ಅಶೋಕ ಹೂವಿನಬಾವಿ ಸುರೇಶ ಕೊರವಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರಭುಲಿಂಗ
ಬುಳ್ಳ, ಪುರಸಭೆ ಅಧಿಕಾರಿಗಳಾದ ಕಾಶಿನಾಥ ಧನಿ, ಮತ್ತು ಅನೇಕ ಚಿಂಚೋಳಿ ತಾಲೂಕಿನ ವಿವಿಧ ಗ್ರಾಮದ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.