ಡಾ. ಅಂಬೇಡ್ಕರ್‍ರು ಬರೆದ ಸಂವಿಧಾನ ಭಾರತ ದೇಶಕ್ಕೆ ದಾರಿ ದೀಪ : ಡಾ. ಹನುಮಂತ

ಬೀದರ:ಸೆ.8:ಕರ್ನಾಟಕ ಸಾಹಿತ್ಯ ಸಂಘ ಬೀದರ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕ ಘಟಕ ಮತ್ತು ಜನಜನಿತ ಕಲಾ ಪ್ರದರ್ಶನ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಎಸ್ ಬಿ ಕೂಚಬಾಳ ವಿರಚಿತ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ನಾಟಕ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಹನುಮಂತರಾವ್ ದೊಡ್ಡಮನಿಯವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತಾಯಿ ಭೀಮಬಾಯಿ ಕೊಡುಗೆ ತುಂಬಾ ಮಹತ್ವ ಪೂರ್ಣವಾಗಿದೆ. ಹದಿನಾಲ್ಕು ಮಕ್ಕಳ ಪಡೆದ ಆ ತಾಯಿಯ ಸ್ಮರಣೆ ಮರೆಯಬಾರದು ಎನ್ನುತ್ತಾ ಅವರು ಬರೆದ ಸಂವಿಧಾನ ಭಾರತ ದೇಶಕ್ಕೆ ದಾರಿ ದೀಪವಾಗಿದೆ. ಜೊತೆಗೆ ಚಲನಚಿತ್ರ ನಟ ಯಶವಂತ ಕುಚಬಾಳರ ಮಗ ಚಿರಂಜೀವಿ ಅಥರ್ವ್ ಕುಚಬಾಳ ಎರಡನೇ ಹುಟ್ಟುಹಬ್ಬಕಾಗಿ ಶುಭ ಹಾರೈಸಿದರು. ನಾಟಕ ಕೃತಿ ಕುರಿತು ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರು ಡಾ. ಜಯದೇವಿ ಗಾಯಕವಾಡರವರು ನಮ್ಮ ದೇಶದ ರಾಜಕೀಯ ಧುರೀಣರು ಅನ್ಯ ದೇಶದಲ್ಲಿರುವ ಪಂಡಿತ ಪಾಮರರನ್ನು ಭಾರತ ಸಂವಿಧಾನವನ್ನು ಬರೆಯಲು ಕೇಳಿಕೊಂಡರು ಹಾಗೂ ಹಲವು ಜಾತಿ ಧರ್ಮಗಳಿಂದ ಕುಡಿದ್ದ ಪ್ರಬುದ್ಧರು ವಿದ್ವಾಂಸರು ಈ ಸಂವಿಧಾನ ರಚನೆಯನ್ನ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ನೀಡಿರಿ ಎಂದರು. ಆಗ ಡಾ. ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಸಂವಿಧಾನ ರಚನೆಯಲ್ಲಿ ಡಾ.ಅಂಬೇಡ್ಕರ್ ಪಟ್ಟ ಕಷ್ಟಗಳನ್ನು ಅವರು ಎದುರಿಸಿದ ಅವಮಾನಗಳನ್ನು ಇಂಚಿಂಚು ಬಿಚ್ಚಿ ಹೇಳಿದರು . ಜೊತೆಗೆ ರಾಮಜಿ ಸಕ್ಪಾಲ್ ಅವರ ಅಂತಿಮ ನಮನ ರಮಾ ತಾಯಿಯ ಅಗಲುವಿಕೆ ಈ ನಾಟಕದಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.ಕಲ್ಬುರ್ಗಿಯ ಹಿರಿಯ ಸಾಹಿತಿಗಳು ಡಾ. ಗವಿಸಿದ್ದಪ್ಪ ಪಾಟೀಲ ಹಾಗೂ ಡಾ. ಜಗನ್ನಾಥ ಹೆಬ್ಬಾಳೆ ಸಂವಿಧಾನದ ಕುರಿತು ಮಾತನಾಡಿದರು. ಪ್ರಾರಂಭದಲ್ಲಿ ಪ್ರಕಾಶ್ ಕುಚಬಾಳ ಭೀಮ ಗೀತೆ ಯಶವಂತ್ ಕುಚಬಾಳ ಸ್ವಾಗತ ಗೀತೆ ಹಾಡಿದರು.ಜಾನಪದ ಪರಿಷತ್ತು ತಾಲೂಕ ಅಧ್ಯಕ್ಷ ಎಸ್ ಬಿ ಕುಚಬಾಳ ಅವರಿಂದ ಸ್ವಾಗತ ಹಾಗೂ ಪ್ರಾಸ್ತವಿಕ ಜರುಗಿತು. ಜೊತೆಗೆ ದಮ್ಮದಾನಿ ಹಾಗೂ ಕಲಬುರ್ಗಿಯ ಅಧೀಕ್ಷಕ ಅಭಿಯಂತರರು ಸಣ್ಣ ನೀರಾವರಿ ಇಲಾಖೆ ಡಾ. ಸುರೇಶ್ ಶರ್ಮಾ ಅವರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಯ ಪ್ರಾದಾಧಿಕಾರಿಗಳು ಹಾಗೂ ಕುಚುಬಾಳರವರ ಬಂಧು ಭಗಿನಿಯರು ಹಾಜರಿದ್ದು ಚಿರಂಜೀವಿ ಅಥರ್ವ್ ಕುಚಬಾಳನ ಎರಡನೇ ವರ್ಷದ ಹುಟ್ಟುಹಬ್ಬ ವಿಜೃಂಭಣೆಯಿಂದ ಆಚರಿಸಲಾಯಿತು. ಶಿವಾನಂದ ಮೇತ್ರೆ ತಹಶೀಲ್ದಾರರು ಹುಲಸೂರ್ ಬಕ್ಕಪ್ಪ ತಾರೆ ನಿಜಲಿಂಗಪ್ಪ ತಗಾರೆ ಮುಂತಾದವರಿಗೆ ಅವರ ಸಾಹಿತ್ಯ ಸೇವೆಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಚಂದ್ರಶೇಖರ್ ಹೆಬ್ಬಾಳಯವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಡಾ. ರಾಜಕುಮಾರ ಹೆಬ್ಬಾಳೆ ನಡೆಸಿಕೊಟ್ಟರು. ಕೊನೆಯದಾಗಿ ಸ್ನೇಹ ಕುಚಬಾಳ ವಂದೆನೆಗಳೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.