ಡಾ. ಅಂಬೇಡ್ಕರ್‍ರವರ ಜನ್ಮದಿನಾಚರಣೆ

ಬಾಗಲಕೋಟೆ,ಏ17: ಡಾ. ಬಿ. ಆರ್. ಅಂಬೇಡ್ಕರ್ ಯುವಕ ಸಂಘ ಬೆನಕಟ್ಟಿ ಇವರ ವತಿಯಿಂದ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರ 132 ನೇ ವರ್ಷದ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಾಬಾಸಾಹೇಬರ ಭಾವಚಿತ್ರಕ್ಕೆ ಪೂಜಾ ಕೈಂಕಾರವನ್ನು ಹಾಗೂ ಪುಷ್ಪಾರ್ಚನೇ ಮಾಡುವ ಮುಖಾಂತರ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಗೆ ಬೆನಕಟ್ಟಿ ಗ್ರಾಪಂ ಪ್ರಥಮ ಪ್ರಜೆ ವೇಮರಡ್ಡಿ ಪಾಂಡಪ್ಪ ಯಡಹಳ್ಳಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಮಹಿಳೆಯರಿಂದ ನೂರಾರು ಕುಂಭಮೇಳ ಹಾಗೂ ಹಲಗೆ ಮಜಲು ವಿವಿಧ ವಾದ್ಯಗಳ ಮೂಲಕ ನೃತ್ಯವನ್ನು ಮಾಡುತ್ತಾ ಬೆನಕಟ್ಟಿ ಗ್ರಾಮದ ಪ್ರಮುಖ ಬೀದಿಗಳಾದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮಮಾಂಬೆ ಬೀದಿಯ ಮೂಲಕ ಸಂಚರಿಸುತ್ತಾ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಶ್ರೀ ಯಲ್ಲಾಲಿಂಗ ಮಹಾರಾಜರ ದೇವಸ್ಥಾನದ ಮೂಲಕ ಸರಳ ರೀತಿಯಲ್ಲಿ ನಡೆದ ವಿಶ್ವಜ್ಞಾನಿ ಮೆರವಣಿಗೆ ಡಾ. ಬಿ ಆರ್ ಅಂಬೇಡ್ಕರ್ ಅವರ ವೃತ್ತಕ್ಕೆ ಬಂದು ತಲುಪಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಿಂಗಪ್ಪ ಚಲವಾದಿ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ವೇಮರೆಡ್ಡಿ ಪಾಂಡಪ್ಪ ಯಡಹಳ್ಳಿ ಉದ್ಘಾಟಿಸಿದರು. ಉಪನ್ಯಾಸಕರ ಭಾಷಣವನ್ನು ಬಾಗಲಕೋಟೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಾಂಡುರಂಗ ಸನ್ನಪ್ನನವರ ಮಾತನಾಡಿ ಅಂಬೇಡ್ಕರ್ ಅವರ ಬೆಳೆದು ಬಂದ ಹಾದಿ ಸಾಧನೆಯ ಶಿಖರದಂತಿದೆ. ಅಂಬೇಡ್ಕರ್ ಅವರ ಕೊಡುಗೆ ಭಾರತ ದೇಶಕ್ಕೆ ಅಪಾರವಾದದ್ದು ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಪ್ರತಿಭಾನ್ವಿತಾ ವಿದ್ಯಾರ್ಥಿಗಳಾದ ಶ್ರೀನಿಧಿ ವಿನೋದ್ ನಂದನೂರ, ಹಣಮಂತ ಪರಸಪ್ಪ ಮಾದರ, ಗಣೇಶ ಪರಸುರಾಮ ನವಲಿ, ಈ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಚಲವಾದಿ ಸ್ವಾಗತವನ್ನು ಶಿಕ್ಷಕ ಜಗದೀಶ ಚಲವಾದಿ ವಂದನೆಯನ್ನು ಶಿಕ್ಷಕ ಹುಲಗಪ್ಪ ಚಲವಾದಿ ನೆರವೇರಿಸಿದರು.
ನಿವೃತ್ತ ಶಿಕ್ಷಕ ಸಿ. ಎನ್. ಬಾಳ್ಕನವರ ಗ್ರಾಪಂ ಸದಸ್ಯರಾದ ರೇಣವ್ವ ಆಲೂರ ಲಕ್ಷ್ಮೀಬಾಯಿ ಗೋರ್ಜಿನಾಳ ಯಲ್ಲಪ್ಪ ಚಲವಾದಿ ವೆಂಕಟೇಶ ದಾಸಪ್ಪನವರ ಶಂಕ್ರಪ್ಪ ಕುದುರಿ ಮಲ್ಲಪ್ಪ ಗುಳೇದ ಸಿದ್ದಪ್ಪ ಪಾದನಕಟ್ಟಿ, ಭೀಮಪ್ಪ ಚಲವಾದಿ, ಯಮನಪ್ಪ ಚಲವಾದಿ, ಚಂದಪ್ಪ ಚಲವಾದಿ, ಲೇಶಪ್ಪ ಚಲವಾದಿ ಭಾಗಿಯಾಗಿದ್ದರು.