ಡಾ.ಅಂಬೇಡ್ಕರವರ ಕನಸನ್ನು ನನಸು ಮಾಡಿದವರೇ ಮೋದಿ: ಬಡಿಗೇರ

ಕಲಬುರಗಿ. ಸೆ, 22- ದೇಶದ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಸ್ತ್ರೀ ಸಮಾನತೆ ಮತ್ತು ಮಹಿಳಾ ಮೀಸಲಾತಿ ತರಲು ಹಿಂದೂ ಕೋಡ್ ಬಿಲ್ ಅನ್ನು ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದರು. ಆದರೆ ಅವತ್ತು ಮನುವಾದಿಗಳು ಅದನ್ನು ಒಪ್ಪಲಿಲ್ಲ. ಇವತ್ತು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ತರುವುದರ ಜೊತೆಗೆ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಹೇಳಿದರು.
ಅವರು, ಇಂದು ನಗರದ ಆರಾಧನಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ಹಾಗೂ ಕಿರಣ ಗ್ರಾಮೀಣ ಅಭಿವೃದ್ದಿ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಕಾಸ ದಿನದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಈ ಕಾರ್ಯಕ್ರಮವನ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂ ಸೇವಕರಾದ ಶ್ರೀ ಲೋಹಿತ ಪಾಟೀಲ ರವರು ಉದ್ಘಾಟಿಸಿದರು, ಮುಖ್ಯ ಅಥಿತಿಗಳಾಗಿ ಶ್ರೀ ವಿಜಯಸೂರ್ಯ ಸಂಖ್ಯೆ ಶಾಸ್ತ್ರಜ್ಞರು, ವಹಿಸಿದರು, ಅಧ್ಯಕ್ಷತೆಯನ್ನು ಆರಾಧನಾ ಪಿ,ಯು ಕಾಲೇಜು ಕಾರ್ಯದರ್ಶಿಗಳಾದ ಶ್ರೀ ಚೇತನಕುಮಾರ ಗಾಂಗಜೀ ರವರು ವಹಿಸಿದರು, ಪ್ರಾಸ್ತಾವಿಕ ನುಡಿಯನ್ನು ಕಿರಣ ಗ್ರಾಮೀಣಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷರಾದ ಮಂಜುನಾಥ ನಾಲವಾರಕರ್ ರವರು ಮಾತನಾಡಿದರು,