ಡಾ.ಅಂಬೇಡ್ಕರವರ ಆದರ್ಶ ಮೈಗೂಡಿಸಿಕೊಳ್ಳಲು ಯುವಕರಿಗೆ ಕರೆ

ವಿಜಯಪುರ, ಎ.17-ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಾಬಾಸಾಹೇಬ ಅಂಬೇಡ್ಕರವರ 130ನೇ ಜಯಂತ್ಯೋತ್ಸವನ್ನು ಸರಳವಾಗಿ ಕೋವಿಡ್-19 ಮುನ್ನೆಚ್ಚರಿಕೆಯನ್ನು ಕೈಗೊಂಡು ಅಂಬೇಡ್ಕರ ಯುವ ಸೇನೆ (ರಿ) ವತಿಯಿಂದ ಆಚರಿಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಜಯಂತಿಗೆ ಚಾಲನೆ ನೀಡಲಾಯಿತು. ಅಂಬೇಡ್ಕರ್ ಯುವ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆದಿತ್ಯಾ ಚಲವಾದಿ ಮಾತನಾಡುತ್ತ, ಡಾ.ಬಿ.ಆರ್. ಅಂಬೇಡ್ಕರವರು 14 ಎಪ್ರೀಲ್ 1891 ರಲ್ಲಿ ಜನಿಸಿ, ಇವರು ಜನಿಸಿದ ಸಂದರ್ಭದಲ್ಲಿ ಜಾತಿ-ಬೇಧ ಪದ್ದತಿಯಂತಹ ಕಾಲದಲ್ಲಿ ಇಂತಹ ಕಠಿಣ ಸಂದರ್ಭದಲ್ಲಿ ಶಿಕ್ಷಣವನ್ನು ಕಲಿತು ನಮ್ಮ ಸಮಾಜಕ್ಕೆ ಹಾಗೂ ದೇಶಕ್ಕೆ ಸಂವಿಧಾನದಂತಹ ಉನ್ನತ ಮಟ್ಟದ ಕಾನೂನು ರಚನೆ ಮಾಡಿ ಯಾರು ಮರೆಯದ ಕೊಡುಗೆಯನ್ನು ನೀಡಿದವರು ಅಂಬೇಡ್ಕರವರು. ಇದು ಅಲ್ಲದೇ ಅಂಬೇಡ್ಕರವರು ಹೆಣ್ಣಿಗೆ ಗೌರವ ಮತ್ತು ಸಮಾನತೆಯನ್ನು ಕೊಡಿಸಿದರು. ಇಂತಹ ಮಹಾನ ನಾಯಕನ ಜಯಂತಿಯನ್ನು ಆಚರಿಸುತ್ತಿರುವ ನಾವುಗಳು ಪುಣ್ಯಜೀವಿಗಳು. ಅಂಬೇಡ್ಕರವರ ತಮ್ಮ ಕಷ್ಠಗಳನ್ನು ಬದಿಗಿಟ್ಟು, ಆದರ್ಶಪ್ರಾಯ ಜೀವನ ನಡೆಸಿದವರು. ಇಂತಹ ಮಹಾನಾಯಕನ ಆದರ್ಶಗಳನ್ನು ಹಾಗೂ ಶಿಕ್ಷಣ ಪದ್ದತಿಯನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಭಾಸ್ಕರ ದೊಡಮನಿ, ರಾಕೇಶ ಹೊಸಮನಿ, ಪರಶುರಾಮ ಹೊಸಮನಿ, ರಾವುತ್ ಹೊಸಮನಿ, ವಿಲಾಸ ಕುಮಟಗಿ, ಅಮೋಘಿ ಮದಬಾವಿ, ಅಭಿಷೇಕ ಹರಿಜನ, ಆಕಾಶ ಹೊಸಮನಿ, ಹಾಗೂ ಅಂಬೇಡ್ಕರ್ ಯುವಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು