ಡಾ.ಅಂಬೇಡ್ಕರರ 65ನೇ ಮಹಾಪರಿನಿರ್ವಾಣದಿನಾಚರಣೆ

ಕಲಬುರಗಿ:ಡಿ.6: ರಿಪಬ್ಲಿಕನ್ ಯೂತ್ ಫೆಡರೇಶನ್ ಕಲಬುರಗಿ ವತಿಯಿಂದ ಕಲಬುರಗಿ ನಗರದ ಎಸ್.ವಿ.ಪಿ ವೃತ್ತದಲ್ಲಿ ಬಾಬಾಸಾಹೇಬ ಡಾ:ಬಿ ಆರ್ ಅಂಬೇಡ್ಕರ್ ರವರ 65ನೆ ಮಹಾಪರಿ ನಿರ್ವಾಣದ ಅಂಗವಾಗಿ ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನೀಯರಾದ ಸುರೇಶ ಶರ್ಮಾ ರವರಿಂದ ಬಾಬಾಸಾಹೇಬ ಡಾ:ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಸ್ಟೇಶನ್ ಬಜಾರ ಪೆÇಲೀಸ್ ಠಾಣೆಯ ವೃತ್ತ್ ನಿರಿಕ್ಷಕರಾದ ಸಿದ್ರಾಮೇಶ ಗಡದ ಅವರಿಂದ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಿಪಬ್ಲಿಕನ್ ಯೂತ್ ಫೆಡರೇಶನ್ ನ ಗೌರವ ಸಂಚಾಲಕರಾದ ಸಂತೋಷ ಮೇಲ್ಮನಿ, ನಗರ ಸಂಚಾಲಕರಾದ ಶಿವಕುಮಾರ ಜಾಲವಾದ, ಮಿಲಿಂದ ಸನಗುಂದಿ, ಸಿದ್ಧು ಬೆಲಸೂರ, ದಶರಥ ತಳಕೇರಿ, ರುಕ್ಮೇಶ ಭಂಡಾರಿ, ಅಶೋಕ ಕಪನೂರ, ಸಂಜು ಮೇಲಿನಮನಿ, ಧರ್ಮಣ್ಣ ಜೈನಾಪುರ, ಧರ್ಮಣ್ಣ ಕೋಣೆಕರ್, ವಿನೋಧ ಉದಯಕರ್, ಶರಣು ಸುತಾರ, ರವಿ ಡೋಣಿ, ಮಲ್ಲು ಹೊಸಮನಿ, ವಿಘ್ನೇಶ ಟೈಗರ್, ವಿಶಾಲ ಡಿಪ್ಟಿ, ಸುನೀಲ ದಿಗ್ಸಂಗಿ, ಹುಸೇನಿ ತಳಕೇರಿ, ಗೌತಮ ಬೆಡಜೆವರ್ಗಿ, ಶ್ರೀಧರ ಇಂಗನಕಲ್, ಸಂದೇಶ ವಾಗ್ಮೋರೆ ಇದ್ದರು.