ಡಾ.ಅಂಬೇಡ್ಕರರ 130ನೇ ಜಯಂತ್ಯೋತ್ಸವ

ಮುದ್ದೇಬಿಹಾಳ :ಎ.15:ಪಟ್ಟಣದ ವಿವೇಕಾನಂದ ವಿದ್ಯಾ ಪ್ರಸಾರ ಸಮಿತಿಯ ಅಡಿಯಲ್ಲಿ ನಡೆಯುವ ಜ್ಞಾನ ಭಾರತಿ ವಿದ್ಯಾಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್”ರವರ 130ನೇ ಜನ್ಮ ಜಯಂತ್ಯೋತ್ಸವವನ್ನು ಆಚರಿಸಲಾಯಿತು.

ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ ಹೆಗಡೆಯವರು ಮಾತನಾಡಿ ಮಹಾನಾಯಕರುಗಳ ದೂರದೃಷ್ಠಿ ಕಾರ್ಯರೂಪಕ್ಕೆ ಬಂದಿರುವುದರಿಂದಲೇ ನಾವು ಪ್ರಜಾಪ್ರಭುತ್ವದ ಪ್ರಯೋಜನ ಸದಾಕಾಲ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಅಲ್ಲದೆ ವಿಶ್ವದಲ್ಲೇ ಬೃಹತ್ ಜನಸಂಖ್ಯೆ ಹೊಂದಿದ ಪ್ರಜಾಪ್ರಭುತ್ವ ಗಣರಾಜ್ಯ ಮಾದರಿಯ ನಮ್ಮ ಭಾರತದಲ್ಲಿ ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದು ಸಂವಿಧಾನದ ಮೇಲೆ.

      ಅಲ್ಲದೆ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಕೊಡುಗೆ ಅವಿಸ್ಮರಣೀಯ. ನಾವು ಅದನ್ನು ಗೌರವಿಸಿಕೊಂಡು ನಡೆಸಿಕೊಂಡು, ಹೋಗುವುದರೊಂದಿಗೆ, ನಮ್ಮ ಭಾರತ ಸಮೃದ್ಧ ಮತ್ತು ಶಾಂತಿಯುತ  ಹಾಗೂ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಬೇಕಾದಲ್ಲಿ ನಮ್ಮೆಲ್ಲರ ಪ್ರಯತ್ನ ಅವಶ್ಯಕ, ಅಲ್ಲದೆ "ಮನುಷ್ಯ ಜ್ಞಾನದಿಂದ ಗುರುತಿಸಿಕೊಂಡಲ್ಲಿ ಶ್ರೇಷ್ಠ ಮತ್ತು ಅಮರನಾಗುತ್ತಾನೆಂದು ಹೇಳಿದರು.

10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ರಾಧಿಕಾ ಗುಂಡಕನಾಳ ಡಾ.ಬಿ.ಆರ್.ಅಂಬೇಡ್ಕರ್ ರವರ ಬಾಲ್ಯ ಮತ್ತು ಜೀವನ ಸಾಧನೆಯ ಬಗ್ಗೆ ವಿಸ್ತಾರವಾಗಿ ವಿಷಯ ಮಂಡಿಸಿದಳು. ಶಿಕ್ಷಕ ಎಸ್.ಎಚ್. ತೊಂಡಿಹಾಳರವರು ಮಾತನಾಡಿದರು. ವಿದ್ಯಾರ್ಥಿನಿಯರಾದ ಕುಮಾರಿ ಭಾವನಾ ತುರಡಗಿ ಸ್ವಾಗತಿಸಿದರು. ಕುಮಾರಿ ಆಯಿಷಾ ಪಿಂಜಾರ ವಂದಿಸಿದರು, ಕುಮಾರಿ ಪ್ರತಿಕ್ಷಾ ಝಿಂಗಾಡೆ ನಿರೂಪಿಸಿದರು ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿರ್ಗದವರು ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಮತ್ತು ಸರಕಾರಿ ನಿಯಮ ಪಾಲಿಸುವದರೊಂದಿಗೆ ಹಾಜರಿದ್ದರು.