
“ರತ್ನನ್ ಪ್ರಪಂಚ” ಚಿತ್ರದ ಯಶಸ್ಸಿನ ಬಳಿಕ ಡಾಲಿ ಧನಂಜಯ ಕೆಆರ್ಜಿ ಸ್ಟುಡಿಯೋ ಸಂಸ್ಥೆ ಜೊತೆ “ಗುರುದೇವ್ ಹೊಯ್ಸಳ” ದಲ್ಲಿ ಕೈಜೋಡಿಸಿದ್ದಾರೆ.
ಸೂಕ್ಷ್ಮ ಘಟನೆಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ವಿಜಯ್ ಎನ್. ಚಿತ್ರಕ್ಕೆ ಆಕ್ಷನ್‍ಕಟ್ ಹೇಳಿದ್ದಾರೆ. ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಬಂಡವಾಳ ಹಾಕಿದ್ದಾರೆ.
ಟೀಸರ್ ಬಿಡುಗಡೆ ವೇಳೆ ಮಾತಿಗಿಳಿದ ನಟ ಧನಂಂಜಯ, ಇದುವರೆಗೂ ನಟಿಸಿರುವ ಎಲ್ಲಾ ಮಾದರಿಯ ಚಿತ್ರ ಸೇರಿ ಹೊಯ್ಸಳ 25ನೇ ಚಿತ್ರ. ಹೀಗಾಗಿ ಒಂದಷ್ಟು ಜವಾಬ್ದಾರಿ ಹೆಚ್ಚಿದೆ. ಪ್ರತಿ ಭಾರಿ ಸಿನಿಮಾ ಮಾಡಿದಾಗ ಸಮಾಜಕ್ಕೆ ಏನು ಹೇಳುತ್ತಾರೆ ಎನ್ನುವ ನಿರೀಕ್ಷೆ ಇರುತ್ತದೆ. ಈ ನಿಟ್ಟಿನಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.
ಹೊಯ್ಸಳ ,ಗಂಭೀರವಾದ ವಿಷಯದ ಸುತ್ತ ನಡೆಯಲಿದೆ. ಕಮರ್ಷಿಯಲ್ ಅಂಶಗಳು ಇರುವ ಚಿತ್ರ.ಖಡಕ್ ಪೆÇಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ಇದವುವರೆಗಿನ ವಿಭಿನ್ನ ಶೀರ್ಷಿಕೆಗಳ ಪಟ್ಟಿಗೆ ಹೊಯ್ಸಳ ಕೂಡ ಸೇರ್ಪಡೆಯಾಗಿದೆ. ಇದು ಖುಷಿಯ ಸಂಗತಿ ಎಂದರು.
ಹೊಯ್ಸಳ ಚಿತ್ರಕ್ಕೆ ಮತ್ತೊಬ್ಬರು ಅಡ್ಡಗಾಲು ಇಟ್ಟಿದ್ದಾರೆ ಇದಕ್ಕೆ ಪರಿಹಾರ ಏನು ಅಂದರೆ ಸೂಕ್ತ ಪರಿಹಾರ ಕೊಟ್ಟರೆ ಸಮಸ್ಯೆ ಬಗೆಹರಿಸೋಣ ಎಂದರು, ನಮ್ಮಲ್ಲಿ ಪರಿಹಾರ ಕೊಡುವ ಪದ್ದತಿ ಇಲ್ಲ. ಚಿತ್ರದಲ್ಲಿ ನನ್ನ ಪಾತ್ರ ಗುರುದೇವ್ ಹೊಯ್ಸಳ. ಹೀಗಾಗಿ ಚಿತ್ರವನ್ನೂ ಅದೇ ಹೆಸರಲ್ಲಿ ತೆರೆಗೆ ತರಲಾಗುವುದು ಎಂದರು.
ಕನ್ನಡಕ್ಕೆ ಇತ್ತೀಚೆಗೆ ಗೌರವ ಕೊಡುತ್ತಾರೆ.ಆದರೆ ಹೊಸಬರ ಸಿನಿಮಾಗಳು ಇನ್ನೂ ಕಷ್ಟದಲ್ಲಿಯೇ ಇವೆ. ಆ ಸಿನಿಮಾಗಳನ್ನು ಯಾರೂ ಖರೀದಿಯೂ ಮಾಡುತ್ತಿಲ್ಲ ಇದು ಬೇಸರದ ಸಂಗತಿ.“ಮುಂದೊಂದು ದಿನ ಕಂಡಿತಾ ಐತಿಹಾಸಿಕ ಪಾತ್ರ ಮಾಡುತ್ತೇನೆ. ಕೆಳದಿ ಶಿಪ್ಪಪ್ಪನಾಯಕ, ಮದಕರಿ ನಾಯಕ ಸೇರಿದಂತೆ ಅನೇಕ ಕಥೆಗಳು ನಮ್ಮ ಮುಂದೆ ಇವೆ. ಯಾವ ಕಥೆ ಆಗುತ್ತದೆಯೋ ನೋಡೋಣ ಎಂದು ಮಾಹಿತಿ ಹಂಚಿಕೊಂಡರು.
ನಾಯಕಿ ಅಮೃತ ಅಯ್ಯಂಗಾರ್, ರತ್ನನ್ ಪ್ರಪಂಚ ಧನಂಜಯ ಜೊತೆ ಮೂರನೇ ಚಿತ್ರ.ಚಿತ್ರದಲ್ಲಿ ಗಂಗಾ ಪಾತ್ರ ಮಾಡಿದ್ದೇನೆ. ಭರತ ನಾಟ್ಯ ಕಲಾವಿದೆ ಎಂದರು.
ನಿರ್ದೇಶಕ ವಿಜಯ್ ಮಾತನಾಡಿ ಹೊಯ್ಸಖ ಪವರ್ ಫುಲ್ ಶೀರ್ಷಿಕೆ. ಸೂಕ್ಷ್ಮ ಕಥೆ ಹೊಂದಿರುವ ಹಿನ್ನೆಲೆಯಲ್ಲಿ ಕಥೆಯ ಎಳೆ ಬಿಟ್ಟುಕೊಡುವ ಹಾಗಿಲ್ಲ. ನಮ್ಮ ನಿಮ್ಮೆಲರ ನಡುವೆ ನಡೆಯುವ ಕಥೆ, ಚಿತ್ರ ನೋಡಿದ ಮಂದಿಗೆ ಇಷ್ಟವಾಗಲಿದೆ ಎಂದರು. ನಟ ನವೀನ್ ಶಂಕರ್ ಖಳನಟನ ಪಾತ್ರ ಮಾಡಿದ್ದೇನೆ. ಎಮೋಷನ್ ಜರ್ನಿ ಎಂದರೆ ಮತ್ತೊಬ್ಬ ಖಳನಟ ಅವಿನಾಶ್ ಉತ್ತಮ ಪಾತ್ರ ಸಿಕ್ಕಿದೆ ಸಹಕಾರ ಇರಲಿ ಎಂದು ಕೇಳಿಕೊಂಡರು.
ಕನ್ನಡದಲ್ಲಿ ಬಿಡುಗಡೆ
ಈ ತಿಂಗಳ 30 ರಂದು ಕನ್ನಡದಲ್ಲಿಯೇ ಜಗತ್ತಿನಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಕನ್ನಡ ಭಾಷೆಗೆ ಇತ್ತೀಚೆಗೆ ಹೆಚ್ಚು ಬೆಲೆ ಬಂದಿರುವುದು ಖುಷಿಯ ಸಂಗತಿ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಹಂಚಿಕೊಂಡರು ನಿರ್ಮಾಪಕ ನಿರ್ಮಾಪಕ ಯೋಗಿ ಜಿ ರಾಜ್.