ಡಾಲಿ’ ಧನಂಜಯ್ಅರ್ನಾಲ್ಡ್ ಫಿಟ್ನೆಸ್’ ನ ಬ್ರಾಂಡ್ ಅಂಬಾಸಿಡರ್

ಮೈಸೂರು, ನ.21: ಮೈಸೂರಿನ ಪ್ರಮುಖ ಫಿಟ್ನೆಸ್ ಸೆಂಟರ್ ಆದ ಅರ್ನಾಲ್ಡ್ ಫಿಟ್ನೆಸ್ ತನ್ನದೇ ಆದ ಹೊಚ್ಚ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಇಂದು ನಗರದಲ್ಲಿ ಬಿಡುಗಡೆಗೊಳಿಸಿದರು.
ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್ನಲ್ಲಿ ಲಭ್ಯವಿರುವ ಅರ್ನಾಲ್ಡ್ ಫಿಟ್ನೆಸ್’ ಮೊಬೈಲ್ ಆಪ್ ಅನ್ನು ನಟಡಾಲಿ’ ಧನಂಜಯ ಅವರು ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ, ಟಗರು’ ಖ್ಯಾತಿಯ ನಟನನ್ನು ವಿಜಯನಗರ ಮತ್ತು ನಗರದ ಸಿದ್ದಾರ್ಥ ನಗರದಲ್ಲಿ ಶಾಖೆಗಳನ್ನು ಹೊಂದಿರುವ ಫಿಟ್ನೆಸ್ ಕೇಂದ್ರದಬ್ರಾಂಡ್ ಅಂಬಾಸಿಡರ್’ ಆಗಿ ಘೋಷಿಸಲಾಯಿತು.
ಕರೋನ ದಿಂದಾಗಿ ಬಹಳ ದಿನಗಳಿಂದ ಮುಚ್ಚಿದ ಜಿಮ್ ಮತ್ತು ಫಿಟ್ನೆಸ್ ಕೇಂದ್ರಗಳು ಎಷ್ಟೋ ದೇಹದಾಢ್ರ್ಯ ಪಟುಗಳಿಗೆ ಹಾಗು ಜಿಮ್ ಆಸಕ್ತಿಉಳ್ಳವರಿಗೆ ಪೆಟ್ಟು ನೀಡಿತ್ತು. ಇದನ್ನು ಅರಿತುಕೊಂಡ ‘ಅರ್ನಾಲ್ಡ್ ಫಿಟ್ನೆಸ್’ ಡಿಜಿಟಲ್ ಹೋಗುವ ಉದ್ದೇಶದಿಂದ ಮತ್ತು ಜನರು ತಮ್ಮ ಮೊಬೈಲ್ ನಲ್ಲೆ ತಮ್ಮ ದೈನಂದಿನ ತಾಲೀಮು ದಿನಚರಿಯನ್ನು ಯೋಜಿಸಲು ಸಹಾಯ ಮಾಡಲು ಮತ್ತು ಆಹಾರ ಪದ್ಧತಿಗಳನ್ನು ಉತ್ತಮವಾಗಿ ಅನುಸರಿಸಲು ಈ ಹೊಸ ಅಪ್ಲಿಕೇಶನ್ ಅನುಕೂಲವಾಗಲಿದೆ. ಅದಲ್ಲದೆ ಈ ಅಪ್ಲಿಕೇಶನ್ ತಾಲೀಮು ವೀಡಿಯೊಗಳು, ಪೌಷ್ಠಿಕಾಂಶ ಸಲಹೆಗಳು, ಕ್ಯಾಲೋರಿ ಕ್ಯಾಲ್ಕುಲೇಟರ್ ಅನ್ನು ಒಳಗೊಂಡಿದೆ ಮತ್ತು ಇತರ ಅನೇಕ ಆನ್ಲೈನ್ ಸೇವೆಗಳು ಮತ್ತು ಬುಕಿಂಗ್ಗಳನ್ನು ಒದಗಿಸುತ್ತದೆ.
ಜಿಮ್ ಬಗ್ಗೆ ವಿಶೇಷ ಆಸಕ್ತಿ ಮತ್ತು ಒಲವು ಹೊಂದಿರುವ ಧನಂಜಯ್ ಅವರು ಅರ್ನಾಲ್ಡ್ ಫಿಟ್ನೆಸ್ ಕೇಂದ್ರದೊಂದಿಗೆ ಸಂಬಂಧ ಹೊಂದಲು ಮತ್ತು ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ವ್ಯಾಯಾಮ ಮಾಡುವುದರಿಂದ ಮತ್ತು ಜಿಮ್ ನಲ್ಲಿ ದೇಹ ದಂಡಿಸುವುದರಿಂದ ಆರೋಗ್ಯಕರ ಜೀವನವನ್ನು ನಡೆಸಲು ಉಪಯೋಗವಾಗುತ್ತದೆ ಎಂದಲ್ಲದೆ ಎಲ್ಲ ವರ್ಗದ ಜನರು ಉತ್ತಮ ಆಹಾರ ಯೋಜನೆ ಮತ್ತು ಜೀವನಶೈಲಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ನಾಲ್ಡ್ ಫಿಟ್ನೆಸ್ ಕೇಂದ್ರದ ಮಾಲೀಕ ಎಂ ಎಸ್ ಹರ್ಷ, “ನಮ್ಮ ಫಿಟ್ನೆಸ್ ಕ್ಲಬ್ ಅರಮನೆ ನಗರಿಯಾದ ಮೈಸೂರಿನ ಪ್ರಮುಖ ಫಿಟ್ನೆಸ್ಕೇಂದ್ರವಾಗಿದ್ದು ಗುಣಮಟ್ಟದ ಜಿಮ್ ಉಪಕರಣಗಳು ಮತ್ತು ತರಬೇತಿಯನ್ನು ನೀಡುವುದರ ಜೊತೆಗೆ ಕಡಿಮೆ ವೆಚ್ಚದಲ್ಲೆ ಸದಸ್ಯತ್ವವನ್ನು ನೀಡುತ್ತೇವೆ. ಎಂದರು. “ಕಾರ್ಡಿಯೋ, ಶಕ್ತಿ ತಾಲೀಮುಗಳು, ತೂಕ ಇಳಿಸುವಿಕೆ, ತೂಕ ಹೆಚ್ಚಿಸುವ ಕಾರ್ಯಕ್ರಮಗಳು, ಫಿಟ್ನೆಸ್ ಪರೀಕ್ಷೆ, ಯೋಗ, ಏರೋಬಿಕ್ಸ್, ಎಲ್ಲಾ ವಯಸ್ಸಿನ ಜನರಿಗೆ ವೈಯಕ್ತಿಕ ತರಬೇತಿಯಂತಹ ಸೇವೆಗಳನ್ನು ಒದಗಿಸುತ್ತೇವೆ, ಎಂದರು ಹರ್ಷ.
ಶೀಘ್ರದಲ್ಲೇ ಅರ್ನಾಲ್ಡ್ ಫಿಟ್ನೆಸ್ ಅಕಾಡೆಮಿಯು ಸಹ ಅಸ್ತಿತ್ವಕ್ಕೆ ಬರಲಿದ್ದು ಇದು ಮೈಸೂರಿನಲ್ಲಿ ಮೊದಲ ಪ್ರಯೋಗ ವಾಗಿದ್ದು ತರಬೇತುದಾರರ ಪ್ರಮಾಣಪತ್ರ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದರು.
ಅರ್ನಾಲ್ಡ್ ಫಿಟ್ನೆಸ್ನ ವ್ಯವಹಾರ ಮುಖ್ಯಸ್ಥ ರೋಹಿತ್ ಎಂ ಎಸ್,ಝೋನಲ್ ಹೆಡ್, ಪ್ರಮೋದ್ ಕುಮಾರ್ ಎಂ ವಿ, ಮೋಹಿತ್ ಗೌಡ ಎಂ.ಎನ್. ಇತರರು ಉಪಸ್ಥಿತರಿದ್ದರು.