
ಬೆಂಗಳೂರು,ಆ.೨೩- ಕನ್ನಡ ಚಿತ್ರರಂಗದ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ನಟ ರಾಕ್ಷಸ ಡಾಲಿ ಧನಂಜಯ ಅವರಿಗೆ ಇಂದು ೩೭ನೇ ಹುಟ್ಟುಹಬ್ಬದ ಸಂಭ್ರಮ.ಕೊರೊನಾ ಸೋಂಕು ಸೇರಿದಂತೆ ವಿವಿಧ ಕಾರಣಗಳಿಂದ ಅಭಿಮಾನಿಗಳನ್ನು ೪ ವರ್ಷಗಳಲ್ಲಿ ಭೇಟಿ ಮಾಡಲು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಧನಂಜಯ ಅವರು ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳು ಇಂದು ಮೀಸಲಿಟ್ಟಿದ್ದಾರೆ.
ಮೈಸೂರು ರಸ್ತೆಯ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳ ಸಂಭ್ರಮ, ಜೈಕಾರ, ಹರ್ಷೋದ್ಘಾರದ ನಡುವೆ ಡಾಲಿ ಧನಂಜಯ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಅವರ ಸಂಭ್ರಮದಲ್ಲಿ ತಾವೂ ಸಂಭ್ರಮಿಸಿ ಖುಷಿ ಪಟ್ಟಿದ್ದಾರೆ.ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಡಾಲಿ ಧನಂಜಯ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “ಉತ್ತರ ಖಾಂಡ” ಚಿತ್ರದ ಗಬ್ರು ಸತ್ಯ ಪೋಸ್ಟರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ.ಗಬ್ರು ಸತ್ಯನಾಗಿ ಕಾಣಿಸಿಕೊಂಡಿರುವ ಡಾಲಿ ಧನಂಜಯ ಅವರಿಗೆ ಚಿತ್ರರಂಗದ ಗಣ್ಯರು,ಸ್ನೇಹಿತರು ಅಭಿಮಾನಿ ಬಳಗ ಹುಟ್ಟುಹಬ್ಬದ ಶುಭಕೋರಿದೆ.
ಟೈಮ್ ಸ್ಕ್ವೇರ್ ನಲ್ಲಿ ಗೌರವ
ಅಮೇರಿಕಾದ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಟೈಮ್ ಸ್ಕ್ವೇರ್ ನಲ್ಲಿ ಡಾಲಿ ಧನಂಜಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಅಭಿಮಾನಿಗಳು, ಆಪ್ತರು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ನಂತರ ಭಾರತದ ಎರಡನೆ ನಟನಿಗೆ ಟೈಂ ಸ್ವ್ಕೇರ್ ನಲ್ಲಿ ಗೌರವ ಸಿಕ್ಕಿದೆ, ಮೊದಲ ಕನ್ನಡ ನಟನ ಹುಟ್ಟುಹಬ್ಬದ ವಿಡಿಯೋ ಪ್ರಸಾರ ಮಾಡಿದಿದೆ, ೧೫ ಸೆಕೆಂಡ್‌ನ ವಿಡಿಯೋ ಪ್ರಸಾರ ಮಾಡಿದ್ದು ಡಾಲಿ ಧನಂಜಯ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಕರ್ನಾಟಕದ ಪಿಂಕ್ ಟಿಕೇಟ್ಸ್ ಪಿಆರೋ ತಂಡದಿಂದ ಶುಭಾಶಯ ಕೋರಿಕೆ ಡಾಲಿ ಧನಂಜಯ ಹುಟ್ಟುಹಬ್ಬ ಹಿನ್ನಲೆ ಒಂದು ದಿನ ಮುಂಚಿತವಾಗಿ ಅಮೇರಿಕಾದ ಟೈಂ ಸ್ವ್ಕೇರ್ ನಲ್ಲಿ ಹುಟ್ಟುಹಬ್ಬದ ಶುಭಾಶಯ ಕನ್ನಡಿಗ ನಟನಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಶುಭಾಶಯ ಸಿಕ್ಕಿದೆ.
ಅಭಿಮಾನಿಗಳಿ ವಿಶೇಷ ಆತಿಥ್ಯ
ನಟ ಡಾಲಿ ಧನಂಜಯ ಅವರ ನಾಲ್ಕು ವರ್ಷದ ನಂತರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತಿದ್ದು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವ ಅಭಿಮಾನಿಗಳಿಗೆ ವಿಶೇಷ ಆತಿಥ್ಯ ನೀಡಲಾಗಿದೆ. ರೋ ಡಾಲಿ
ಉತ್ತರ ಕರ್ನಾಟಕ ಹಾಗೂ ಸೌತ್ ಇಂಡಿಯನ್ ಎರಡು ಶೈಲಿಯ ಊಟದ ವ್ಯವಸ್ಥೆಯನ್ನು ರಾಯಚೂರಿನ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದಾರೆ.ರಾಯಚೂರು ಸಿಂದನೂರಿನಿಂದ ಖಡಕ್ ರೊಟ್ಟಿ, ಎಣ್ಣೆ ಬದನೆಕಯಿ ಪುಂಡೆ ಪಲ್ಯೆ, ಬೂಂದಿ ಶೇಂಗ ಹಿಂಡಿ ,ಮೆಣಸಿನಕಾಯಿ ಸೇರಿದಂತೆ ಸುಮಾರು ೨೦೦೦ ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಶಿವರಾಜ್ ಪಾಟೀಲ್ ಗುಂಜಳ್ಳಿ ಅವರು ಅಭಿಮಾನಿಗಳಿಗೆ ವ್ಯವಸ್ಥೆ ಮಾಡಿದ್ದಾರೆ.