ಡಾಲರ್ ವಿರುದ್ಧ ರೂಪಾಯಿ ೨೮ ಪೈಸೆ ಏರಿಕೆ

ಮುಂಬೈ,ಸೆ೧೩:ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ೨೮ ಪೈಸೆ ಏರಿಕೆಯಾಗಿದೆ. ೩೦ ಶೇರುಗಳ ಬಿಎಸ್‌ಇ ಸೆನ್ಸೆಕ್ಸ್ ೨೯೨.೬೯ ಪಾಯಿಂಟ್ ಅಥವಾ ಶೇ ೦.೪೯ ಏರಿಕೆಯಾಗಿ ೬೦,೪೦೭.೮೨ ಕ್ಕೆ ವಹಿವಾಟು ನಡೆಸುತ್ತಿದೆ.
ದಿನದ ಆರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ೨೮ ಪೈಸೆ ಏರಿಕೆಯಾಗಿ ೭೯.೨೫ ಕ್ಕೆ ತಲುಪಿದೆ. ಅಂತರ್ ಬ್ಯಾಂಕು ವಿದೇಶಿ ಕರೆನ್ಸಿ ವಹಿವಾಟಿನಲ್ಲಿ ಪ್ರತಿ ಡಾಲರ್?ಗೆ ೭೯.೩೦ ರಲ್ಲಿ ಆರಂಭವಾದ ರೂಪಾಯಿ ಮೌಲ್ಯ ೨೮ ಪೈಸೆ ಏರಿಕೆಯಾಗಿ ೭೯.೨೫ಕ್ಕೆ ತಲುಪಿತು. ಆರು ಕರೆನ್ಸಿಗಳನ್ನು ಹೊಂದಿರುವ ಡಾಲರ್ ಇಂಡೆಕ್ಸ್ ಶೇ ೦.೧೨ ರಷ್ಟು ಕುಸಿತವಾಗಿ ೧೦೮.೨೦ ಕ್ಕೆ ತಲುಪಿತು.
ಜಾಗತಿಕ ಕಚ್ಚಾತೈಲ ದರದ ಸೂಚ್ಯಂಕ ಬ್ರೆಂಟ್ ಕ್ರೂಡ್ ಶೇ ೦.೨೧ ಕೆಳಗಿಳಿದು ಪ್ರತಿ ಬ್ಯಾರೆಲ್‌ಗೆ ೯೩.೮೦ ಯುಎಸ್ ಡಾಲರ್ ಆಗಿದೆ.ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ೩೦ ಶೇರುಗಳ ಬಿಎಸ್‌ಇ ಸೆನ್ಸೆಕ್ಸ್ ೨೯೨.೬೯ ಪಾಯಿಂಟ್ ಅಥವಾ ಶೇ ೦.೪೯ ಏರಿಕೆಯಾಗಿ ೬೦,೪೦೭.೮೨ ಕ್ಕೆ ವಹಿವಾಟು ನಡೆಸುತ್ತಿದೆ. ಅದೇ ರೀತಿ, ವಿಶಾಲವಾದ ಎನ್‌ಎಸ್‌ಇ ನಿಫ್ಟಿ ೯೩.೨೫ ಪಾಯಿಂಟ್ ಅಥವಾ ಶೇ ೦.೫೨ ರಷ್ಟು ಏರಿಕೆಯಾಗಿ ೧೮,೦೨೯.೬೦ ಕ್ಕೆ ತಲುಪಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಗಳಲ್ಲಿ ನಿವ್ವಳ ಖರೀದಿದಾರರಾಗಿದ್ದಾರೆ. ಅವರು ಸೋಮವಾರ ೨,೦೪೯.೬೫ ಕೋಟಿ ಮೌಲ್ಯದ ಶೇರುಗಳನ್ನು ಖರೀದಿಸಿದ್ದಾರೆ ಎಂದು ಮಾಹಿತಿ ತಿಳಿಸಿದೆ.ದೇಶೀಯ ಮ್ಯಾಕ್ರೊ ಎಕನಾಮಿಕ್ ರಂಗದಲ್ಲಿ, ಹೆಚ್ಚಿದ ಆಹಾರ ಮತ್ತು ಇಂಧನ ದರಗಳಿಂದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇಕಡಾ ೭ ಕ್ಕೆ ಏರಿಕೆಯಾಗಿದೆ. ಆದರೆ ಕಾರ್ಖಾನೆಗಳ ಉತ್ಪಾದನೆಯು ನಾಲ್ಕು ತಿಂಗಳ ಕನಿಷ್ಠ ೨.೪ ಶೇಕಡಾಕ್ಕೆ ಕುಸಿದಿದೆ.
ಹಣದುಬ್ಬರ ಏರಿಕೆಗೆ ಮೂಲ ಪರಿಣಾಮ ಮತ್ತು ಆಹಾರ ಹಾಗೂ ಇಂಧನ ಬೆಲೆಗಳ ಹೆಚ್ಚಳ ಕಾರಣವಾಗಿವೆ ಎಂದು ಸೋಮವಾರದಂದು ಹಣಕಾಸು ಸಚಿವಾಲಯ ಹೇಳಿದೆ.