
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.15: ಪಟ್ಟಣದ ಬಾಪೂಜಿ ನಗರದಲ್ಲಿ ತಾಲ್ಲೂಕು ಅಂಬೇಡ್ಕರ್ ಸಂಘದ ವತಿಯಿಂದ (ಭೀಮವಾದ) ಡಾ| ಬಿ.ಆರ್ ಅಂಬೇಡ್ಕರ್ ರವರ 132 ಹಾಗೂ ಬಾಬು ಜಗಜೀವನ್ ರಾಂ ಅವರ 116 ನೆ ಜಯಂತ್ಯುತ್ಸವನ್ನು ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ಸರಳವಾಗಿ ಆಚರಿಸಲಾಯಿತು
ಪ್ರಗತಿ ಪರ ಚಿಂತಕ ಹಿರಿಯ ಪತ್ರಕರ್ತ ಅಲಗಿಲವಾಡದ ಎ.ಎಂ.ವಿಶ್ವನಾಥ್ ಮಾತನಾಡಿ ಬಾಬು ಜಗಜೀವನ್ ರಾಮ್ ಅವರು 1936 ರಿಂದ 1986 ರವರೆಗೆ 50 ವರ್ಷಗಳ ನಿರಂತರ ಸಂಸದರಾಗಿ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.
ಬಾಬೂಜಿ ಎಂದು ಜನಪ್ರಿಯರಾದ ಬಾಬು ಜಗಜೀವನ್ ರಾಮ್ ಅವರು ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದರು. ಅವರು ಏಪ್ರಿಲ್ 5, 1908 ರಂದು ಬಿಹಾರದ ಚಂದ್ವಾ ಗ್ರಾಮದಲ್ಲಿ ಸೋಭಿ ರಾಮ್ ಮತ್ತು ವಸಂತಿ ದೇವಿ ದಂಪತಿಗಳಿಗೆ ಜನಿಸಿದರು.06 ಫೆಬ್ರವರಿ 1977 ರಂದು ನವದೆಹಲಿಯಲ್ಲಿ ನಡೆದ ಜನತಾ ಪಕ್ಷದ ರ್ಯಾಲಿಯಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಜಗಜೀವನ್ ರಾಮ್ (ಬಲ), ಭಾರತದ ಮಾಜಿ ಉಪ ಪ್ರಧಾನ ಮಂತ್ರಿತನ್ನ ಜಾತಿಯ ಕಾರಣದಿಂದ ತಾರತಮ್ಯವನ್ನು ಎದುರಿಸುತ್ತಿದ್ದರೂ, ಅವರು ತನ್ನ ತಾಯಿಯ ಮಾರ್ಗದರ್ಶನದೊಂದಿಗೆ ತನ್ನ ಮೆಟ್ರಿಕ್ಯುಲೇಷನ್ ಅನ್ನು ಪಾಸು ಮಾಡಿದರು. ನಂತರ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ತಮ್ಮ ಅಂತರ ವಿಜ್ಞಾನ ಪರೀಕ್ಷೆಯನ್ನು ಪೂರ್ಣಗೊಳಿಸಿದರು ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಬಾಬು ಜಗಜೀವನ್ ರಾಮ್ ಅವರು ತುಳಿತಕ್ಕೊಳಗಾದ ವರ್ಗಗಳಿಗೆ ಸಮಾನ ಹಕ್ಕುಗಳಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು
ಇಂದು ‘ಸಂವಿಧಾನ ಶಿಲ್ಪಿ’ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ. ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದೇವೆ. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್.
ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಅವರ ಜೀವನ, ಅವರ ತತ್ವಗಳ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.
ಅಂಬೇಡ್ಕರ್ ಅವರು ನೀಡಿದ ಅದ್ಭುತ ಸಂದೇಶಗಳು ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ.
ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ.
ದೊಡ್ಡ ಪ್ರಯತ್ನಗಳನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿಲ್ಲ. ನೀವು ಮನಸ್ಸಿನಿಂದ ಮುಕ್ತರಾಗಿದ್ದರೆ ನೀವು ನಿಜವಾಗಿಯೂ ಸ್ವತಂತ್ರರು.
ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದಕಲು ಪ್ರಯತ್ನಿಸಿ.ಮನಸ್ಸಿನ ಅಭಿವೃದ್ಧಿ ಮಾನವ ಜನಾಂಗದ ಅಂತಿಮ ಗುರಿಯಾಗಿರಬೇಕುಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು. ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು. ಸಂವಿಧಾನ ದುರ್ಬಳಕೆಯಾಗುತ್ತಿದೆ ಎಂದು ಗೊತ್ತಾದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ.
ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ. ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ.
ವಿದ್ಯಾವಂತರಾಗಿ, ಸಂಘಟಿತರಾಗಿರಿ ಎಂದು ಭಾರತ ದೇಶಕ್ಕೆ ಸಂದೇಶ ನೀಡಿದ ಮಹಾನ್ ನಾಯಕ ಎಂದರು
ವರದಿಗಾರ ಎಸ್.ಎನ್. ಸತೀಶ್ ಕುಮಾರ್ ಮಾತನಾಡಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರವರು ಈ ದೇಶದ ರೈತರಿಗಾಗಿ ಹಸಿರು ಕ್ರಾಂತಿಯನ್ನೇ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಹಾಗೂ ಡಾ| ಬಿ.ಆರ್.ಅಂಬೇಡ್ಕರ್ ರವರು ಸಂದೇಶದಂತೆ ಅಸ್ಪೃಶ್ಯತೆ, ಬಡತನ ನಿವಾರಣೆಗಾಗಿ ಆರ್ಥಿಕವಾಗಿ ಸದೃಢವಾಗಿರಿ ತಮ್ಮ ಮಕ್ಕಳನ್ನು ಶಿಕ್ಷಣವಂತರಾನ್ನಾಗಿ ಮಾಡಿ ಎಂದು ಕರೆನೀಡಿದರು
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಸಂಘದ (ಭೀಮವಾದ) ಅಧ್ಯಕ್ಷ ಸುಭಾಷ್, ಪುರಸಭೆ ಅಧ್ಯಕ್ಷ ಎಚ್.ಎಂ.ಅಶೂಕ್, ಬಿಜೆಪಿ ನಂಜನಗೌಡ, ಓಕಾರಗೌಡ
ಕಾರ್ಯದರ್ಶಿ ರಮೇಶ್, ಸಂಘದ ಸಿ.ಪ್ರಕಾಶ್ ಮಾತನಾಡಿದರು
ಈ ಸಂದರ್ಭದಲ್ಲಿ ಪೂಜಾರ್ ಅಭಿಷೇಕ್, ಭಂಗಿ ಚಂದ್ರಪ್ಪ, ಮಲ್ಲಿಕಾರ್ಜುನ್, ಪೂಜಾರ್ ನವೀನ್, ರಮೇಶ್, ಭಂಗಿ ರಮೇಶ್, ಭಂಗಿ ಚಂದ್ರಪ್ಪ , ಬಿದ್ದಾಡಿ ರಮೇಶ್, ಬಿದ್ದಾಡಿ ನಾಗರಾಜ್, ದೊಡ್ಮನೆ ಬಸವರಾಜ್, ಇತರರು ಇದ್ದರು