ಡಾಬಾ ಸ್ಟೈಲ್ ಚಿಕನ್ ಕರ್ರಿ

ಬೇಕಾಗುವ ಸಾಮಗ್ರಿಗಳು

*ಚಿಕನ್ – ೧/೪ ಕರ.ಜಿ
*ಚಕ್ಕೆ- ೩ ಪೀಸ್
*ಲವಂಗ – ೩
*ಏಲಕ್ಕಿ – ೨
*ಈರುಳ್ಳಿ – ೨
*ಪಲಾವ್ ಎಲೆ – ೧
*ಟೊಮೆಟೋ – ೧
*ನೀರು – ೧೫೦ ಮಿ.ಲೀ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಜೀರಿಗೆ ಪುಡಿ – ೧/೨ ಚಮಚ
*ಧನಿಯಾ ಪುಡಿ – ೧ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಕಸೂರಿ ಮೇಥಿ – ೧ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೫೦ ಮಿ.ಲೀ

ಮಾಡುವ ವಿಧಾನ :

ಬಾಣಲಿಗೆ ಎಣ್ಣೆ ಹಾಕಿ ಕಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ ಘಂ ಎನ್ನುವವರೆಗೂ ಹುರಿದು ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿದು ತಣ್ಣಗಾದ ನಂತರ ನುಣ್ಣಗೆ ರುಬ್ಬಿಡಿ. ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಪಲಾವ್ ಎಲೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿಕೊಂಡು, ಇದಕ್ಕೆ ಚಿಕನ್ ಪೀಸುಗಳನ್ನು ಹಾಕಿ ಹುರಿಯಿರಿ. ಇದಕ್ಕೆ ಟೊಮೆಟೊ, ಅಚ್ಚಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಹಾಕಿ ಚೆನ್ನಾಗಿ ಬೆರೆಸಿ. ರುಬ್ಬಿಟ್ಟುಕೊಂಡ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ, ಮಿಚ್ಚಳವನ್ನು ಮುಚ್ಚಿ ೧೫ ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಕಸೂರಿ ಮೇಥಿ ಹಾಕಿ ಬೆರೆಸಿದರೆ ಡಾಬಾ ಸ್ಟೈಲ್ ಚಿಕನ್ ಕರ್ರಿ ರೆಡಿ.