ಡಾಟಾ ಸುರಕ್ಷತೆ ಹೊಂದಿಲ್ಲದಿದ್ದರೆ ೨೦೦ ಕೋಟಿ ದಂಡ

ನವದೆಹಲಿ,ನ.೧೬- ದೇಶದಲ್ಲಿ ಡೇಟಾ ಸಂರಕ್ಷಣಾ ಮಸೂದೆ ಪರಿಷ್ಕರಣೆ ಮಾಡುವ ಮೂಲಕ ಸಂಸ್ಥೆಗಳು ಡಾಟಾ ಸುರಕ್ಷತೆ ಹೊಂದಿಲ್ಲದಿದ್ದರೆ ೨೦೦ ಕೋಟಿ ರೂ.ವರೆಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಆಂತರಿಕವಾಗಿ ’ಡಿಜಿಟಲ್ ಪರ್ಸನಲ್ ಡಾಟಾ ಪೊರಟೆಕ್ಷನ್ ಬಿಲ್’ ಪರಿಷ್ಕೃತ ಮಸೂದೆ ಅಂತಿಮಗೊಳಿಸಲು ಸರ್ಕಾರ ಮುಂದಾಗಿದ್ದು ಈ ವಾರ ಅಂತಿಮ ಕರಡು ಸಿದ್ಧಪಡಿಸುವ ಸಾಧ್ಯತೆಗಳಿವೆ.

ಡೇಟಾ ಸುರಕ್ಷತೆ ಕಾಪಾಡಲು ವಿಫಲವಾದ ಗ್ರಾಹಕರ ವೈಯಕ್ತಿಕ ಡೇಟಾದಲ್ಲಿ ವ್ಯವಹರಿಸುವ ಕಂಪನಿಗಳು ಡೇಟಾ ಸಂರಕ್ಷಣಾ ಮಸೂದೆಯ ಪರಿಷ್ಕೃತ ಆವೃತ್ತಿಯ ಅಡಿಯಲ್ಲಿ ಸುಮಾರು ೨೦೦ ಕೋಟಿ ರೂಪಾಯಿಗಳಷ್ಟು ದಂಡ ಪಾವತಿಸಬೇಕಾಗುತ್ತದೆ. ಎಂದು ಹೇಳಲಾಗಿದೆ.

ದತ್ತಾಂಶ ಸಂರಕ್ಷಣಾ ಮಂಡಳಿ, ಮಸೂದೆಯ ನಿಬಂಧನೆ ಜಾರಿಗೊಳಿಸಲು ಉದ್ದೇಶಿಸಿರುವ ತೀರ್ಪು ನೀಡುವ ಸಂಸ್ಥೆ, ಕಂಪನಿಗಳಿಗೆ ವಿಚಾರಣೆಗೆ ಅವಕಾಶ ನೀಡಿದ ನಂತರ ದಂಡ ವಿಧಿಸಲು ಅಧಿಕಾರ ನೀಡುವ ಸಾಧ್ಯತೆಯಿದೆ.

ಡೇಟಾ ಉಲ್ಲಂಘನೆಯಿಂದ ಪ್ರಭಾವಿತವಾಗಿರುವ ಜನರಿಗೆ ತಿಳಿಸಲು ವಿಫಲವಾದ ಕಂಪನಿಗಳಿಗೆ ಸುಮಾರು ೧೫೦ ಕೋಟಿ ರೂಪಾಯಿ ದಂಡ ವಿಧಿಸಬಹುದು ಮತ್ತು ಮಕ್ಕಳ ವೈಯಕ್ತಿಕ ಡೇಟಾ ರಕ್ಷಿಸಲು ವಿಫಲವಾದರೆ ೧೦೦ ಕೋಟಿ ರೂಪಾಯಿಗಳಷ್ಟು ದಂಡ ವಿಧಿಸಬಹುದು.

ಈ ವರ್ಷದ ಆರಂಭದಲ್ಲಿ ಹಿಂತೆಗೆದುಕೊಳ್ಳಲಾದ ಬಿಲ್‌ನ ಹಿಂದಿನ ಆವೃತ್ತಿಯಲ್ಲಿ, ಕಾನೂನು ಉಲ್ಲಂಘನೆಗಾಗಿ ಕಂಪನಿಯ ಮೇಲೆ ಪ್ರಸ್ತಾಪಿಸಲಾದ ದಂಡ ೧೫ ಕೋಟಿ ರೂಪಾಯಿ ಅಥವಾ ಅದರ ವಾರ್ಷಿಕ ವಹಿವಾಟಿನ ಶೇಕಡಾ ೪, ಯಾವುದು ಹೆಚ್ಚೋ ಅದನ್ನು ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.