ಡಾಕ್ಟರೇಟ್ ಸ್ವೀಕರಿಸಿದ ಮಾಜಿ ಪ್ರಧಾನಿಗೆ ಸನ್ಮಾನ

ಯಡ್ರಾಮಿ:ಅ.19: ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನೀಡಲಾದ ಡಾಕ್ಟರೇಟಪದವಿ ನೀಡಿದ ಹಿನ್ನೆಲೆ ಮಾಜಿ ಪ್ರಧಾನ ಮಂತ್ರಿಯಾದ ಡಾಕ್ಟರ್ ಎಚ್ ಡಿ ದೇವೇಗೌಡರ ಅವರಿಗೆ ತಾಲೂಕ ಜೆಡಿಎಸ್ ಪಕ್ಷದ ವತಿಯಿಂದಸನ್ಮಾನ ಮಾಡಲಾಯಿತು.ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬಸವರಾಜ ಬಿರ್ಬಿಟ್ಟಿ, ಕಲಬುರ್ಗಿ ಜಿಲ್ಲಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್ ಎಸ್ ಸಲಗಾರ್, ಜೆಡಿಎಸ್ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಹಣ್ಮಯ್ಯ ಗುತ್ತೇದಾರ್, ಜೇವರ್ಗಿ ತಾಲೂಕ ಜೆಡಿಎಸ್ ಅಧ್ಯಕ್ಷ ಮೊಹಮ್ಮದ ರೌಫ ಹವಾಲ್ದಾರ್ ಮತ್ತು ಜೆಡಿಎಸ್ ಜೇವರ್ಗಿ ನಗರ ಘಟಕ ಮೈನಾರಿಟಿ ಅಧ್ಯಕ್ಷ ಬಬ್ಲು ಇನಾಂದಾರ್ ಇದ್ದರು.