ಡಾಂಬರೀಕರಣಕ್ಕೆ ಗ್ರಾಮಸ್ಥರ ಒತ್ತಾಯ

ಕೋಲಾರ,ಡಿ,೩೦:ಬೇತಮಂಗಲ ಮುಖ್ಯರಸ್ತೆಯ ಚಾಮರಹಳ್ಳಿ ಗಡಿಯಿಂದ ಹುನುಕುಂದ ಗಡಿಯವರೆಗೆ ಹಾಳಾಗಿರುವ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿ ಜ,೨ ರಂದು ಬೃಹತ್ ಪ್ರತಿಭಟನೆ ನಡೆಸಲು ಅವಕಾಶ ಮಾಡಿ ಸೂಕ್ತ ಸಹಕಾರ ನೀಡುವಂತೆ ಕೋರಿ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದರು.
ಬೇತಮಂಗಲ ಮುಖ್ಯರಸ್ತೆಯ ಚಾಮರಹಳ್ಳಿ ಗಡಿಯಿಂದ ಹುನುಕುಂದ ಗಡಿಯವರೆಗೆ ರಸ್ತೆಯು ಸಂಪೂರ್ಣವಾಗಿ ಹಾಳಾಗಿರುತ್ತದೆ. ಈ ರಸ್ತೆಯು ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ ಈ ರಸ್ತೆಯಲ್ಲಿ ಪ್ರತಿನಿತ್ಯ ಸುಮಾರು ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತದೆ. ರಸ್ತೆಯ ಹಾಳಾಗಿರುವುದರಿಂದ ವಾಹನ ಸವಾರರು ಹಾಗೂ ರೈತರಿಗೆ ತೀವ್ರ ಕಷ್ಟಕರವಾಗಿರುತ್ತದೆ. ಈ ರಸ್ತೆಯಲ್ಲಿ ಯಾರಾದರೂ ರೋಗಿಗಳು ಆಸ್ಪತ್ರೆ ಹೋಗಬೇಕಾದರೆ ತುಂಬಾ ಅನಾನುಕೂಲವಾಗಿರುತ್ತದೆ. ರಸ್ತೆಯನ್ನು ದುರಸ್ಥಿಗೊಳಿಸುವಂತೆ ಸಂಬಂಧ ಪಟ್ಟ ಲೋಕೋಪಯೋಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಇದುವರೆವಿಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಹೀಗಾಗಿ ಬೇತಮಂಗಲ ರಸ್ತೆಯ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಜನವರಿ ೨,ರಂದು ಬೇತಮಂಗಲ ಮುಖ್ಯರಸ್ತೆಯ ಚಾಮರಹಳ್ಳಿ ಮತ್ತು ಗಂಗಾಪುರ ನಡುವೆ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಅನುಮತಿಸಿ ಸಹಕಾರ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.