ಡಬ್ಬಲ್ ಮೀನಿಂಗ್ ಇರಲ್ಲ ಕ್ಷಮೆ ಕೋರಿದ ನಿರ್ದೇಶಕ

“ಪೆಟ್ರೋಮ್ಯಾಕ್ಸ್” ಹಾಗೂ “ತೋತಾಪುರಿ” ಚಿತ್ರಗಳ ಮೂಲಕ ಡಬ್ಬಲ್ ಮೀನಿಂಗ್‍ಗಳೇ ಪ್ರಧಾನವಾಗಿದ್ದರಿಂದ ಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಬದಲು ಬಂದದಾರಿಗೆ ಸುಂಕವಿಲ್ಲದಂತೆ ಚಿತ್ರಮಂದಿರದಿಂದ ಬಹುಬೇಗನೇ ನಿರ್ಗಮನಸಿದ್ದವು. ಇದರಿಂದ ಚಿತ್ರತಂಡಕ್ಕೆ ಮಾತ್ರವಲ್ಲದೆ ನಿರ್ದೇಶಕ ವಿಜಯ ಪ್ರಸಾದ್ ಸಿನಿಮಾ ಕೆರಿಯರ್‍ಗೆ ಹೊಡೆತ ಬಿದ್ದಿತ್ತು.

ಇದರಿಂದ ಪಾಠ ಕಲಿತಂತಿರುವ ನಿರ್ದೇಶಕ ವಿಜಯ ಪ್ರಸಾದ್ ಡಬ್ಬಲ್ ಮೀನಿಂಗ್‍ಗೆ ಫುಲ್ ಸ್ಟಾಪ್ ಇಡಲು ನಿರ್ದರಿಸಿದ್ಧಾರೆ. ಈ ಹಿಂದಿನ ಚಿತ್ರಗಳಲ್ಲಿ ಆದ ತಪ್ಪಿಗೆ ಕ್ಷಮೆ ಕೋರಿದ್ಧಾರೆ.

12 ವರ್ಷದ ಬಳಿಕ ಮತ್ತೆ ಸಿದ್ಲಿಂಗು-2 ಚಿತ್ರ ಆರಂಭವಾಗಿದ್ದು  ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಅಂಡಾಳಮ್ಮ ಪಾತ್ರ ಮಾಡಿದ್ದ ಸುಮನ್ ರಂಗನಾಥ್ ಹಾಗು ಆಂಟೊನಿ ಕಮಲ್ ಪಾತ್ರ ಮುಂದುವರಿದಿದೆ, ಉಳಿದಂತೆ ರಮ್ಯಾ ಜಾಗಕ್ಕೆ ನಟಿ ಸೋನುಗೌಡ ಬಂದಿದ್ದಾರೆ.

ಚಿತ್ರದ ಮುಹೂರ್ತದ ಬಳಿಕ ಮಾತಿಗಿಳಿದ ನಿರ್ದೇಶಕ ವಿಜಯ್ ಪ್ರಸಾದ್, ಸಿದ್ಲಿಂಗು 2 ಚಿತ್ರದಲ್ಲಿ ಇಲ್ಲಿ ಬರೀ ಮೀನಿಂಗ್ ಇರಲಿದೆ. ಡಬಲ್ ಮೀನಿಂಗ್ ಇರಲ್ಲ ಎಂದು ಕೈ ಮುಗಿ ತಪ್ಪಾಯಿರು ಎಂದರುಯಾರೂ ನಂಬಲಾರದ ಸ್ಥಿತಿಯಲ್ಲಿದ್ದ ನಮ್ಮನ್ನು ನಂಬಿ ನಿರ್ಮಾಪಕರ ಹಣ ಹಾಕಲು ಮುಂದಾಗಿದ್ದಾರೆ 6 ರಿಂದ 60 ವರ್ಷದ ಎಲ್ಲರೂ ನೋಡಬಹುದಾದ ಚಿತ್ರ ಇದು ಎಂದು ಭರವಸೆ ನೀಡಿದರು.

ನಟ ಲೂಸ್ ಮಾಡ ಯೋಗಿ ಮಾತನಾಡಿ, ನಟಿ ಸೋನು ಗೌಡ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ಸಿದ್ಲಿಂಗು-2 ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಟಿ ಸೋನುಗೌಡ ಪಾತ್ರದಲ್ಲಿ ನಟಿಸಲು ಕಾತುರರಾಗಿರುವುದಾಗಿ ಹೇಳಿದರೆ ನಿರ್ಮಾಪಕ ಶ್ರೀಹರಿ ರೆಡ್ಡಿ  ಚಿತ್ರಕ್ಕೆ ಬಂಡವಾಳ ಹಾಕಿದ್ದು ಸಿದ್ಲಿಂಗು ಚಿತ್ರ ನೋಡಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದರು.

ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯವಿದೆ. ಚಿತ್ರದಲ್ಲಿ ಪದ್ಮಜಾ ರಾಜ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿರಲಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ತಂಡ ನಿರ್ಧರಿಸಿದೆ.