ಡಬ್ಬಲ್ ಇಂಜಿನ್ ಸರ್ಕಾರಗಳಿಂದ ಅಭಿವೃದ್ದಿ ಸಾಧ್ಯ :ದೇವೇಂದ್ರ ಪಡ್ನವಿಸ್   


ಸಂಜೆವಾಣಿ ವಾರ್ತೆ        
ಹಗರಿಬೊಮ್ಮನಹಳ್ಳಿ. ಮೇ.07 ಮಹಿಳಾ ಸಬಲೀಕರಣಕ್ಕೆ ರೈತರ ಹಾಗೂ ಬಡವರ ಏಳಿಗೆಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಜನಪರ ಅಭಿವೃದ್ದಿ ಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ರಾಷ್ಟ್ರ ಅಭಿವೃದ್ದಿಯಗಬೇಕಾದರೆ ರಾಜ್ಯ ಅಭಿವೃದ್ಧಿಯಾಗಬೇಕಾದರೆ ಡಬ್ಬಲ್ ಇಂಜಿನ್  ಇರಬೇಕು ಆದ್ದರಿಂದ ಬಿಜೆಪಿ ಪಕ್ಷದ ಕಮಲದ ಗುರುತಿಗೆ ಮತ ನೀಡಿ ರಾಮಣ್ಣ ಅವರನ್ನು ಗೆಲ್ಲಿಸಿ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ತಿಳಿಸಿದರು.  
 ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾ ಪರಿಷತ್ ಸಭಾಂಗಣದಲ್ಲಿ ಶನಿವಾರ  ಹಮ್ಮಿಕೊಂಡಿದ್ದ ಜಾಗೃತಿ  ಮತದಾರ ವೇದಿಕೆಯ ಸಂವಾದ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು ಮುದ್ರಾಯೋಜನೆ ಅಡಿಯಲ್ಲಿ 24 ಕೋಟಿ ಜನರಿಗೆ ಲೋನ್ ದೊರಕಿದೆ ಇದರಲ್ಲಿ ಮನೆ ಮಕ್ಕಳು ಕುಟುಂಬ ನಿರ್ವಹಣೆ ಮಾಡುತ್ತಿರುವ ಮಹಿಳೆಯರಿಗೆ 50% ರಷ್ಟು ಲೋನ್ ಸಿಕ್ಕಿದೆ. ಕೊರೋನ  ಸಂಕಷ್ಟ ಕಾಲದಲ್ಲಿ ಜಗತ್ತಿನ ಹಲವಾರು ರಾಷ್ಟ್ರಗಳು ನಲುಗಿ ಹೋಗಿದ್ದವ್ವು ಭಯದ ಆತಂಕದಲ್ಲಿ ಇರುವಾಗ  ನನ್ನ ದೇಶದ ಜನರು ಯಾರು ಕೂಡ ಉಪವಾಸ ಮಾಡಬಾರದು ಎಂದು ದೇಶದ 80 ಕೋಟಿ ಜನರಿಗೆ  ಅನ್ನ ನೀಡುವಂತ ಕೆಲಸ ಮಾಡಿದರು. ವಿಜ್ಞಾನದಲ್ಲಿ ಮುಂದುವರೆದ ರಾಷ್ಟ್ರಗಳು ಸಹ ವ್ಯಾಕ್ಸೀನ್ ಕಂಡು ಹಿಡಿಯಲು ಹಿಂದೇಬಿದ್ದವು ವ್ಯಾಕ್ಸೀನ್ ಕಂಡು ಹಿಡಿಯಲಿಕ್ಕೆ ದೇಶದ ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ವ್ಯಾಕ್ಸೀನ್ ಬಂತು ದೇಶದ ಜನರ ಜೀವ ಉಳಿಯಿತು.ನರೇಂದ್ರ ಮೋದಿಯ ಈ ಸಾಧನೆಗೆ ಜಗತ್ತಿನ ಹಲವಾರು ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದವು.ಇದುವರೆಗೂ ಚೀನಾ ಇಂಗ್ಲೆಂಡ್ ಸೇರಿದಂತೆ ಕೊರೋನದಿಂದ ನಲುಗುತ್ತಿವೆ ಲಾಕ್ ಡೌನ್ ಆಗುತ್ತಿವೆ ನಮ್ಮ ದೇಶದ ವ್ಯಾಕ್ಸಿನಿಂದ ದೇಶದ ಜನರ ಆರೋಗ್ಯ ಸುರಕ್ಷಿತವಾಗಿದೆ.2014ರ ಬಜೆಟ್ 15 ಲಕ್ಷ ಕೋಟಿ ಇತ್ತು ಪ್ರಸಕ್ತ ಸಾಲಿನ ಬಜೆಟ್ 45 ಲಕ್ಷ ಕೋಟಿ 8 ವರ್ಷದಲ್ಲಿ 3 ಪಟ್ಟು ಬಜೆಟ್ ಗಾತ್ರ ಏರಿಕೆಯಾಗಿದೆ ಅಂದರೆ ಅಭಿವೃದ್ದಿ ಹೊಂದುತಿದ್ದೇವೆ ಅರ್ಥ.ಜಗತ್ತಿನ ಹಲವಾರು ರಾಷ್ಟ್ರಗಳಂತೆ ನಮ್ಮ ದೇಶವು ಸಹ ಆರ್ಥಿಕವಾಗಿ ಸಶಕ್ತವಾಗಿ ಮುನ್ನೇಡದ ರಾಷ್ಟ್ರವಾಗಿದೆ.ಭಜರಂಗ ದಳ ನಮ್ಮ ದೇಶದ ಸಂಸ್ಕೃತಿ  ರಾಮ ,ಹನುಮ ದೇಶದ ಜನರು ಪೂಜಿಸುವ ದೇವರು ನಮ್ಮ ಹೃದಯದಲ್ಲಿರುವ ಭಜರಂಗ ದಳ ಬ್ಯಾನ್ ಮಾಡುವುದು ಸೂಕ್ತವಾದದುದಲ್ಲ.ಕಮಲಕ್ಕೆ ಓಟು ಹಾಕುವ ಮೂಲಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡ್ಯುಯಿರಿ ಎಂದರು.
ಹಿರೇ ಹಡಗಲಿ ಯ    ಹಾಲ ವೀರಪ್ಪಜ್ಜ ಸ್ವಾಮೀಜಿ ಮಾತನಾಡಿ ನರೇಂದ್ರ ಮೋದಿಯಂತ ದೇಶ ಭಕ್ತ ನಮ್ಮ ಜೊತೆಯಲ್ಲಿರುವಾಗ  ತಮ್ಮ ಗೆಲುವಿಗಾಗಿ ವಿವಿಧ ರೀತಿಯ ಅಮಿಷ್ಯಗಳಿಗೆ ಒಳಗಾಗಬೇಡಿ ಅವರು ಕೊಡುವ 1000-2000 ಸಾವಿರಕ್ಕೆ ನಿಮ್ಮ ಮತ ಹಾಕಬೇಡಿ ರಾಷ್ಟ್ರ ನಿರ್ಮಾಣ ರಾಜ್ಯ ನಿರ್ಮಾಣದ ಬಗ್ಗೆ ಚಿಂತನೆಯೂಳ್ಳ ಅಭಿವೃದ್ದಿಯ ಬಗ್ಗೆ ಜನರ ಬಗ್ಗೆ ಕಾಳಜಿ ಇರುವ ಸೂಕ್ತ ವ್ಯಕ್ತಿ ಗೆ ಮತ ನೀಡಿ ಗೆಲ್ಲಿಸಿ ಎಂದರು. ಈ ವೇಳೆ ಭಾಗ್ಯನಗರದ ಸ್ವಾಮೀಜಿ ,ಸ್ವಯಂ ಸೇವಕ ಸಂಘದ ಕೇಶವ್ , ಬಿಜೆಪಿ ಪಕ್ಷದ ಅಭ್ಯರ್ಥಿ ಬಲ್ಲಾ ಹುಣಸಿ ರಾಮಣ್ಣ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಬಿಜೆಪಿ ಪಕ್ಷದ ಮುಖಂಡರು ವಿವಿಧ ತಾಲೂಕುಗಳಿಂದ ಬಂದ ಕಾರ್ಯಕರ್ತರು ಪಾಲ್ಗೊಂಡಿದ್ದರು.