
ದಾವಣಗೆರೆ.ಮಾ.25 ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು ಎನ್ನುವ ಮೂಲಕ ಕನ್ನಡಲ್ಲಿ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತಿಗೆ ಎಲ್ಲೇಡೆ ಮೋದಿ, ಮೋದಿ ಎನ್ನುವ ಘೋಷಣೆ ಕೇಳಿ ಬಂದವು. ಪ್ರತಿ ಬಾರಿ ನಾನು ದಾವಣಗೆರೆಗೆ ಬಂದಾಗಲೆಲ್ಲೇ ನಿಮ್ಮ ಆರ್ಶಿವಾದದಿಂದ ನನಗೆ ಹೆಚ್ಚಿನ ಬಲ ಬಂದಿದೆ. ಕರ್ನಾಟಕ ರಾಜ್ಯ ಬಿಜೆಪಿಯ ಫಲದಿಂದಾಗಿ ಮತ್ತೆ ನಿಮ್ಮ ದರ್ಶನ ನನಗೆ ದೊರೆತಿದೆ. ಇದು ನನ್ನ ಸೌಭಾಗ್ಯ. ಈ ವಿಜಯ ಸಂಕಲ್ಪ ಯಾತ್ರೆಯನ್ನು ನೋಡಿದರೆ ವಿಜಯ ಮಹೋತ್ಸವ ನಡೆಯುತ್ತಿದೆ ಎಂದು ನನಗೆ ಅನ್ನಿಸುತ್ತಿದೆ ಎಂದರು.ದಾವಣಗೆರೆಯಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಲಬುರುಗಿಯಲ್ಲಿ ಇಂದು ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ಧಾರೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಜಿಲ್ಲೆಯಲ್ಲೇ ಅವರ ಪಕ್ಷ ಸೋತಿದೆ. ಇದು ನಮ್ಮ ಪಕ್ಷಕ್ಕೆ ಚುನಾವಣೆಗೆ ಶುಭ ಸೂಚಕ. ಡಬಲ್ ಇಂಜಿನ್ ಸರ್ಕಾರಕ್ಕೆ ರಾಜ್ಯದ ಎಲ್ಲಾ ವರ್ಗದವರ ಆರ್ಶಿವಾದ ಇದೆ. ಹರಿಹರೇಶ್ವರ, ತಾಯಿ ಭುವನೇಶ್ವರಿ, ಅಲ್ಲದೇ ಈ ಕ್ಷೇತ್ರದ ಎಲ್ಲಾ ಮಠಗಳಿಗೆ ನಮಿಸುತ್ತೇನೆ ಎಂದರು.ದಾವಣಗೆರೆ ಹರಿಹರದ ಮಧ್ಯೆ ಇರುವ ಈ ಸ್ಥಳದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮಾತೆ ತುಂಗಭದ್ರೆಯ ಆರ್ಶಿವಾದ ನಮಗೆ ಸಿಕ್ಕಿದೆ. ಇಂತಹ ಸ್ಥಳದಲ್ಲಿ ಬಿಜೆಪಿಯ 4 ವಿಜಯ ಸಂಕಲ್ಪ ಯಾತ್ರೆಗಳ ಮಹಾ ಸಂಗಮ ನಡೆಯುತ್ತಿದೆ. ಯಾವುದೇ ಯಾತ್ರೆ ಮಾಡಿ ಬಂದವರ ದರ್ಶನ ಮಾಡಿದಾಗ ಪುಣ್ಯ ಬರುತ್ತದೆ ಎಂದು ಹೇಳುತ್ತಾರೆ. ಅದರಂತೆ ನನಗೆ ಇಲ್ಲಿ ನಿಮ್ಮೆಲ್ಲರ ದರ್ಶನದಿಂದ ಪುಣ್ಯ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ ಪಡಿಸಿದರು.ರಾಜ್ಯದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಮಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಯಾತ್ರೆಯಲ್ಲಿ, ಮಹಾ ಸಂಗಮದಲ್ಲಿ ನಾವೆಲ್ಲರೂ ಉತ್ಸಾಹದಲ್ಲಿ ಇದ್ದೇವೋ ಅದೇ ರೀತಿ ಮುಂಬರುವ 3 ತಿಂಗಳ ಕಾಲ ಹಗಲಿರುಳು ಶ್ರಮಿಸಿ, ಪ್ರತಿ ಬೂತ್‍ನಲ್ಲಿ ನಮ್ಮ ಸರ್ಕಾರಗಳ ಸಾಧನೆ ತಿಳಿಸಿ, ಹೊಸ ಶಕ್ತಿ ತುಂಬಿ, ನಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಪ್ರತಿ ಬೂತ್‍ನಲ್ಲಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.ಇಲ್ಲಿನ ಜನ ಸಾಗರ ನೋಡಿ ನನ್ನ ಮನತುಂಬಿ ಬಂದಿದೆ. ನಿಮ್ಮ ದರ್ಶನವೇ ನನಗೆ ಹೊಸ ಉತ್ಸಾಹ ತಂದಿದೆ. ನಿಮ್ಮ ಸಹಕಾರ ನನ್ನ ಬಲ, ಇಲ್ಲಿ ಯಾರು ದೊಡ್ಡವರು, ಸಣ್ಣವರು ಇಲ್ಲ. ಇಲ್ಲಿ ಎಲ್ಲರೂ ಒಂದೇ. ಕರ್ನಾಟಕದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ನನ್ನ ಬಲ, ಪರಮ ಮಿತ್ರ, ಸಹೋದರ ಇದ್ದಂತೆ. ಕರ್ನಾಟಕದ ಕೆಲವು ರಾಜಕೀಯ ಪಕ್ಷಗಳು ಕೇವಲ ಕಣ್ಣಿರು, ಸುಳ್ಳು ಆಶ್ವಾಸನೆ ನೀಡಿದ್ದವು. ಆದರೆ, ಬಿಜೆಪಿ ರಾಜಕೀಯ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ ನೀಡಿತು ಎಂದರು.ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಎಲ್ಲಾ ಹಂತದಲ್ಲಿ ಬೆಳವಣಿಗೆ ತಂದಿದೆ. ಕೇವಲ ಮೂರುವರೆ ವರ್ಷಗಳಲ್ಲಿ ಜಲಕ್ರಾಂತಿ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ. 5300ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ನೀಡಿದೆ. ಕಾಂಗ್ರೆಸ್, ಜೆಡಿಎಸ್ ಸರ್ಕಾರ ಇದ್ದಾಗ ರಾಜ್ಯದ ಜನರನ್ನು ದಿಕ್ಕು ತಪ್ಪಿಸುತ್ತಿದ್ದರು. ಆದರೆ ಬಿಜೆಪಿ ಅದನ್ನು ಸರಿದಾರಿಗೆ ತಂದಿದೆ. ದಾವಣಗೆರೆಯಲ್ಲಿ 2.50ಲಕ್ಷ ಜನಕ್ಕೆ ಪರಿಹಾರ ನೀಡಲಾಗಿದೆ. ಡಬಲ್ ಇಂಜಿನ್ ಸರ್ಕಾರ ಡಬಲ್ ಲಾಭ ನೀಡಿದೆ ಎಂದರು.ನಮ್ಮ ಮಂತ್ರ ಬಡವರು, ಆದಿವಾಸಿಗಳು, ವನವಾಸಿಗಳು, ಮಹಿಳೆಯರು, ಶೋಷಿತರು ಸೇರಿದಂತೆ ಸೌಲಭ್ಯ ವಂಚಿತರಿಗೆ ಸೌಲಭ್ಯಗಳನ್ನು ಕೊಡಿಸುವಲ್ಲಿ ಮುಂದಾಗಿದೆ. ರಾಜ್ಯದಲ್ಲಿ ಅವಸರ ವಾದಿ, ಮೋಸ ಮಾಡುವ ಪಕ್ಷಗಳ ಘಟಬಂಧನ್ ಸರ್ಕಾರ ರಚಿಸಲಾಗಿತ್ತು. ಇದರಿಂದ ರಾಜ್ಯಕ್ಕೆ ನಷ್ಟ ಆಗಿತ್ತು. ರಾಜ್ಯದ ಅಭಿವೃದ್ದಿಗಾಗಿ ರಾಜ್ಯದಲ್ಲಿ ಬಿಜೆಪಿಗೆ ಪೂರ್ಣಪ್ರಮಾಣದ ಅಧಿಕಾರ ನೀಡಬೇಕು. ರಾಜ್ಯದಲ್ಲಿ ಬಲಿಷ್ಠ, ಪೂರ್ಣ ಬಹುಮತದ ಸರ್ಕಾರ ಬೇಕಾಗಿದೆ ಎಂದು ಹೇಳಿದರು.ಕರ್ನಾಟಕವನ್ನು ಕಳ್ಳರು, ಸುಳ್ಳರ ರಾಜಕೀಯದಿಂದ ದೂರ ಇಡಬೇಕಾಗಿದೆ. ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಮತ್ತೆ ನಾನು ನಿಮ್ಮ ಸೇವೆ ಮಾಡಬೇಕಾ ಎಂದು ಕೇಳಿದ ಮೋದಿ, ನನ್ನ ಕೈಲಾಗುವುದಕ್ಕಿಂತ ಹೆಚ್ಚಿನ ಸೇವೆ ಮಾಡುತ್ತೇನೆ. ಕಾರಣ ನಾನು ನಿಮ್ಮ ಸೇವೆ ಮಾಡಬೇಕಾದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಪೂರ್ಣ ಬಹುಮತದ ಸರ್ಕಾರ ತರಬೇಕಿದೆ ಎಂದರು.ಕಾಂಗ್ರೆಸ್ ಗುರಿ ಅವರ ನೇತಾರರ ತಿಜೋತಿ ತುಂಬುವುದು. ಬಿಜೆಪಿ ರಾಜ್ಯದ ಅಭಿವೃದ್ದಿ ಬಗ್ಗೆ ಚಿಂತಿಸುತ್ತಿದೆ. ಕಾಂಗ್ರೆಸ್ ಗ್ಯಾರೆಂಟಿ ಯಾವ ರೀತಿ ಇದೆ ಎಂದರೆ, ನಿರುದ್ಯೋಗ, ಭತ್ಯೆ, ವಿವಿಧ ಗ್ಯಾರೆಂಟಿ ನೀಡುವುದಾಗಿ ಹೇಳುತ್ತಿದೆ. ಈ ಹಿಂದೆ ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ ಗ್ಯಾರೆಂಟಿ ನೀಡಿತ್ತು. ಆದರೆ, ಇದೀಗ ಹೇಳ ಹೆಸರಿಲ್ಲದೇ ಓಡಿ ಹೋಗಿವೆ ಎಂದರು.ಇಂತಹ ಸುಳ್ಳು ಹೇಳುವ ಪಕ್ಷಗಳನ್ನು ರಾಜ್ಯದಲ್ಲಿ ಕಾಲಿಡಲು ಬಿಡಬೇಡಿ. ಚುನಾವಣೆ ಸಮಯದಲ್ಲಿ ಸವಲತ್ತುಗಳನ್ನು ನೀಡುವುದಾಗಿ ಹೇಳಿ ಗ್ಯಾರೆಂಟಿ ನೀಡುವುದಾಗಿ ಹೇಳಿದ್ದ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಬಳಿ ದೇಶದಲ್ಲಿ, ರಾಜ್ಯದ ಬಗ್ಗೆ ಯಾವುದೇ ಸಕಾರಾತ್ಮಕ ಯೋಜನೆ ಇಲ್ಲ. ಅವರು ಕೇವಲ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದಾರೆ. ಮೋದಿ ನಿನಗೆ ಗುಂಡಿ ತೋಡುತ್ತೇನೆ ಎಂದುವರು ತಮಗೆ ತಾವೇ ಗುಂಡಿಯನ್ನು ತೋಡಿಕೊಂಡಿದ್ದಾರೆ. ಅವರ ಮಾತೇ ಅವರಿಗೆ ತಿರುಗುಬಾಣವಾಗಿದೆ ಎಂದು ಹೇಳಿದರು.ಕರ್ನಾಟಕ ಜನರು ಸಂಕಲ್ಪ ಮಾಡಿದ್ದಾರೆ. ಸಮೃದ್ದಿ, ಅಭಿವೃದ್ದಿ ಎಲ್ಲಾ ವರ್ಗದ ಏಳಿಗೆ ಇರುವ ಕಮಲವನ್ನು ಮತ್ತೆ ಅರಳಿಸಬೇಕೆಂದಿದ್ದಾರೆ. ಆಗ ಮಾತ್ರ ಮೋದಿಯ ಮೊಗ ಅರಳುತ್ತಿದೆ. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಆದರೆ, ಭಾರತ ಕರ್ನಾಟಕ ಕಡೆ ನೋಡುತ್ತಿದೆ. ಕರ್ನಾಟಕವನ್ನು ಎಲ್ಲಾ ಕ್ಷೇತ್ರಗಳ ಕೇಂದ್ರ ಬಿಂದುವನ್ನಾಗಿ ಮಾಡಲಾಗಿದೆ ಎಂದರು.ದಾವಣಗೆರೆ ಜವಳಿ ಕೇಂದ್ರವಾಗಿದೆ. ಕೇಂದ್ರ ಸರ್ಕಾರದಿಂದ 7 ಮೆಗಾ ಟೆಕ್ಸ್‍ಟೈಲ್ ಆರಂಭಿಸುತ್ತಿದ್ದು, ಅದರಲ್ಲಿ ಒಂದನ್ನು ಕರ್ನಾಟಕದಲ್ಲಿ ಮಾಡಲಾಗುತ್ತಿದೆ. ಹುಬ್ಬಳಿಗೆಯಲ್ಲಿ ವಿದ್ಯುತ್ ಕೇಂದ್ರಕ್ಕೆ ಮಂಜೂರಾತಿ ನೀಡಲಾಗಿದೆ. ಕೃಷಿ, ಸೇವಾ, ಉತ್ಪಾದನಾ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ದಿ ಹೊಂದಿ ಸಮೃದ್ದಿ ಕರ್ನಾಟಕ ಆಗುತ್ತಿದೆ ಎಂದು ಹೇಳಿದರು. ರಾಜ್ಯವನ್ನು ಮತ್ತಷ್ಟು ಅಭಿವೃದ್ದಿ ಮಾಡಲು ರಾಜ್ಯದ ಜನತೆ ಬಿಜೆಪಿಗೆ ಬೆಂಬಲ ನೀಡಬೇಕಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಇಲ್ಲಿ ಸೇರಿರುವ ಎಲ್ಲರೂ ನನಗೆ ಭರವಸೆ ನೀಡಬೇಕಾಗಿದೆ ಎಂದರು.ಇಡೀ ಜಗತ್ತಿನಲ್ಲೇ ಹಿಂದೂ ಸ್ಥಾನದ ಮಾತು ಕೇಳಿ ಬರುತ್ತಿದೆಯೋ, ಚರ್ಚೆ ಆಗುತ್ತಿದೆಯೋ ಇಲ್ಲವೋ, ಅದಕ್ಕೆ ಯಾರು ಕಾರಣ ನೀವೆ ಹೇಳಿ ಎಂದಾಗ ಎಲ್ಲರೂ ಮೋದಿ ಎಂದಾಗ, ನಿಮ್ಮ ಉತ್ತರ ತಪ್ಪು ಎಂದ ಪ್ರಧಾನಿ ಮೋದಿ, ನೀವು ಓಟು ನೀಡಿದ ಶಕ್ತಿಯಿಂದಲೇ ಇಂದು ವಿಶ್ವದಲ್ಲೇಡೆ ಹಿಂದೂಸ್ಥಾನದ ಘಂಟೆ ಮೊಳಗುತ್ತಿದೆ. ಅದೇ ರೀತಿ ನೀವು ಕರ್ನಾಟಕದ ಘಂಟೆಯನ್ನು ವಿಶ್ವದೆಲ್ಲೆಡೆ ಮೊಳಗಬೇಕಾಗಿದೆ ಎಂದರು. ಕರ್ನಾಟಕದ ರಾಜ್ಯದ ಜನರ ಪ್ರೀತಿ, ಆರ್ಶಿವಾದ ನಮಗೆ ಹೊಸ ಶಕ್ತಿ, ಹುರುಪು, ಹುಮ್ಮಸ್ಸು ನೀಡಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ಅಭಾರಿಯಾಗಿದ್ದೇನೆ. ಮತ್ತೆ ನಾನು ಕರ್ನಾಟಕಕ್ಕೆ ಬರುತ್ತೇನೆ. ಹುಲಿಗಳ ದಿನಾಚರಣೆ ಏಪ್ರಿಲ್‍ನಲ್ಲಿ ಇದೆ. ಆಗ ಮತ್ತೆ ಹುಲಿಗಳನ್ನು ಭೇಟಿ ಮಾಡಲು ರಾಜ್ಯಕ್ಕೆ ಮತ್ತೆ ಬರುತ್ತೇನೆ. ಮತ್ತೆ ನಿಮ್ಮನ್ನು ಕೇಳುತ್ತೇನೆ ಬಿಜೆಪಿಯನ್ನು ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಗೆಲ್ಲಿಸಿ ಎಂದರು. ಕೊನೆಯಲ್ಲಿ ಸಮಾರಂಭದಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಅವರ ಮೊಬೈಲ್ ಟಾರ್ಚ್ ಲೈಟ್ ಆನ್ ಮಾಡುವ ಮೂಲಕ ಇದು ವಿಜಯದ ಬೆಳಕು ಎಂದು ಹೇಳಿ ತಮ್ಮ ಭಾಷಣ ಮುಗಿಸಿದರು.