ಡಬಲ್ ಇಂಜಿನ್ ಸರಕಾರದ ಅಭಿವೃದ್ದಿಗೆ ಶಕ್ತಿ ತುಂಬಲು ಮಾನಪ್ಪ ವಜ್ಜಲ್ ಆಯ್ಕೆ ಮಾಡಲು ಮನವಿ-ಜೆಪಿ ನಡ್ಡಾ

ಲಿಂಗಸೂಗೂರು,ಮೇ.೦೬- ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರದ ಅಭಿವೃದ್ದಿಗೆ ಶಕ್ತಿ ತುಂಬಲು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಭಾರತೀಯ ಜನತಾಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ ನಡ್ಡಾ ಮನವಿ ಮಾಡಿದರು.
ಅವರು ಪಟ್ಟಣದ ಪ್ರಮುಖ ಬೀದಿಯಲ್ಲಿ ರೋಟ್ ಶೋ ನಡೆಸಿ ನಂತರ ಬಸ್ ನಿಲ್ದಾಣ ಬಳಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತ ಇಂತಹ ಉರಿ ಬಿಸಲಿನಲ್ಲಿ ಭಾಗವಹಿಸಿದ ಮಹಿಳೆಯರು ಯುವಕರ ಗ್ರಾಮೀಣ ಜನರ ಉತ್ಸಾಹ ನೋಡಿದಾಗ ಮಾನಪ್ಪ ವಜ್ಜಲ್ ಆಯ್ಕೆ ಖಚಿತ ಎಂದರು.
ಮಾಜಿ ಸಿಎಂ ಯಡಿಯುರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಕರ್ನಾಟಕ ಅಭಿವೃದ್ದಿ ಪಥದಲ್ಲಿದೆ. ಹಲುವಾರು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಪರಿಶಿಷ್ಠ ಜಾತಿ ಪಂಗಡ ಹಾಗೂ ಒಳಮೀಸಲಾತಿ ಬೊಮ್ಮಾಯಿ ದಿಟ್ಟ ನಿರ್ಧಾರದಿಂದ ಜಾರಿಗೆ ಬರಲಿದೆ.
ಆದರೆ ಕಾಂಗ್ರೆಸ್‌ನವರು ಆಡಳಿತಕ್ಕೆ ಬಂದರೆ ಮೀಸಲಾತಿ ರದ್ದುಮಾಡುವದಾಗಿ ಹೇಳುವದಲ್ಲೆ ಧರ್ಮದ ಆಧಾರ ಮೇಲೆ ಮೀಸಲಾತಿ ನೀಡುವದಾಗಿ ತಿಳಿಸುವ ಇವರು ಲಿಂಗಾಯತ ಒಕ್ಕಲಿಗರ ಮೀಸಲಾತಿ ರದ್ದು ಮಾಡುವರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅಡಳಿತದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾg ಜೈಲಿಗೆ ಹೋಗಿ ಬಂದಿದ್ದರೆ ರಾಷ್ಡ್ರೀಯ ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ ರಾಹುಲ ಗಾಂಧಿ ಅನೇಕರು ಮೇಲೆ ಇರುವರು ಎಂದರು.
ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳಿಂದ ಕರ್ನಾಟಕದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದ್ದು ಮಾನಪ್ಪ ವಜ್ಜಲ್ ಶಾಸಕರಾಗುವದು ನಿಶ್ಚಿತ ಎಂದು ಹೇಳಿದರು.
ಜೆಪಿ ನಡ್ಡಾ ರೋಡ್ ಶೋ ತೆರದ ವಾಹನದಲ್ಲಿ ಬಾಜಾ ಭಜಂತ್ರಿ ಸಾವಿರಾರು ಕಾರ್ಯಕರ್ತರ ಜಯ ಘೋಷಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್, ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ರಾಜಾ ಸೋಮನಾಥ ನಾಯಕ, ಡಾ ಶಿವಬಸಪ್ಪ, ಜಗದೀಶ ಹಿರೇಮನಿ, ಗಿರಿಮಲ್ಲನಗೌಡ, ಜಗನ್ನಾಥ ಕುಲಕರ್ಣಿ ಅನೇಕರು ಭಾಗವಹಿಸಿದ್ದರು.