ಡಣಾಯಕನಕೆರೆ ಎಕೋ ಪಾರ್ಕ್ ಬಳಿ ಚಿರತೆ ಪ್ರತ್ಯಕ್ಷ

ಮರಿಯಮ್ಮನಹಳ್ಳಿ, ಜೂ.01: ಪಟ್ಟಣಕ್ಕೆ ಸಮೀಪದ ಡಣಾಯಕನಕೆರೆ ಮಾಗಣಿ ಪ್ರದೇಶದ ಎಕೋ ಪಾರ್ಕ್ ಬಳಿ ಸೋಮವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನರನ್ನು ಆತಂಕಕ್ಕೀಡು ಮಾಡಿದೆ. ಗ್ರಾಮದ ಪ್ರವೀಣ್ ಹಾಗೂ ಸ್ನೇಹಿತರು ಚಿರತೆ ಓಡಾಡುವುದನ್ನು ಗಮನಿಸಿ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಮಾಗಣಿ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಜೊತಗೆ ನೂರಾರು ಎಕರೆಯ ಕಬ್ಬು ಬೆಳೆದು ನಿಂತಿದೆ. ಅಲ್ಲದೇ ಬಹುತೇಕ ರೈತರು ಹಗಲಿರುಳು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಚಿರತೆ ಪ್ರತ್ಯಕ್ಷವಾದಾಗಿನಿಂದ ರೈತರು ಭಯಭೀತರಾಗಿದ್ದು ಕೂಡಲೇ ಚಿರತೆ ಸೆರೆಗೆ ಬೋನು ಇಡುವಂತೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಎಎಸ್‌ಐ ದುರುಗಪ್ಪ, ಭಾಗ್ಯನಾಯ್ಕ್, ಗ್ರಾ.ಪಂ. ಪಿಡಿಓ ಜಿಲಾನ್, ಸದಸ್ಯರಾದ ಗುಂಡಾ ಸ್ವಾಮಿ, ಗುರುರಾಜ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.