ಡಂಗೂರ ಬಾರಿಸಿ ಕೋವಿಡ್-19 ಜನಜಾಗೃತಿ

ಬೀದರ:ಮೇ.18: ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ವಿನೂತನವಾಗಿ ರೂಪಿಸಿರುವ ಕೋವಿಡ್-19 ಜನಜಾಗೃತಿ ಅಭಿಯಾನದ ನಿಮಿತ್ತ ಮೇ.16ರಂದು ಔರಾದ ಹಾಗೂ ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಕೋವಿಡ್ ಜನಜಾಗೃತಿಯನ್ನು ಆರಂಭಿಸಿದ್ದಾರೆ.

ಕೊರೊನಾ ಮಹಾಮಾರಿಯನ್ನು ನಿಯಂತ್ರಣಕ್ಕೆ ತರಲು ಸರ್ಕಾರವು ಲಾಕ್‍ಡೌನ್ ಜಾರಿಗೊಳಿಸಿದೆ. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಬೂನಿನಿಂದ ಕೈಗಳನ್ನು ಶುಚಿಗೊಳಿಸುತ್ತಿರಬೇಕು ಎಂಬ ತಿಳುವಳಿಕೆಯನ್ನು ಗ್ರಾಮಸ್ಥರಿಗೆ ಸ್ಥಳೀಯ ಭಾಷೆಯಲ್ಲಿ ನೀಡಲಾಯಿತು.

ಔರಾದ ಹಾಗೂ ಕಮಲನಗರ ತಾಲ್ಲೂಕಿನ ವಿವಿಧ 148 ಗ್ರಾಮಗಳಲ್ಲಿ ಡಂಗೂರದ ಮೂಲಕ ಜಾಗೃತಿ ಮೂಡಿಸಲಾಗಿದೆ. ಸಚಿವರ ಕೋವಿಡ್-19 ಜನಜಾಗೃತಿ ಅಭಿಯಾನದ ನಿಮಿತ್ತ ವಿಶೇಷವಾಗಿ ವಿನ್ಯಾಸಗೊಳಿಸಿದ ಎಂಟು ವಾಹನಗಳು ಬೀದರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಚರಿಸಿ, ಕೋವಿಡ್-19 ನಿಯಂತ್ರಣ ಕುರಿತು ಜನಜಾಗೃತಿ ಮೂಡಿಸುತ್ತಿವೆ.