ಡಂಗುರ ಸಾರಿ ಗ್ರಾ.ಪಂ ನಿಂದ ಜಾಗೃತಿ

ಸಿರವಾರ. ಮೇ.೦೧-ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಟ್ಟಹಾಸ ಮುಂದುವರೆದಿದ್ದು, ಗ್ರಾಮೀಣ ಭಾಗಕ್ಕೂ ವೈರಸ್ ತಗುಲಬಹುದು ಎಂಬ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ತಾಲೂಕಿನ ಗಣದಿನ್ನಿ ಗ್ರಾಮದಲ್ಲಿ ಡಂಗುರ ಮೂಲಕ ಜಾಗೃತಿ ಸಾರಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಗಣದಿನ್ನಿ ಗ್ರಾಮ ಪಂಚಾಯತ್? ವತಿಯಿಂದ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಚಹಾ ಅಂಗಡಿ ಬಂದ್ ಮಾಡಬೇಕು. ಅನಾವಶ್ಯಕವಾಗಿ ಊರಿನಿಂದ ಯಾರೂ ಹೊರಗೆ ಹೋಗಬೇಡಿ ಅಗತ್ಯ ವಸ್ತುಗಳ ಕೆಲಸವಿದ್ದರೆ ಮಾತ್ರ ಹೊರಗಡೆ ಬರಬೇಕು.
ಬೇಕಾಬಿಟ್ಟಿಯಾಗಿ ಪಟ್ಟಣಗಳಿಗೆ ಹೋಗಬಾರದು. ಗ್ರಾಮದ ಗುಡಿ ಕಟ್ಟೆಯಲ್ಲಿ ಗುಂಪಾಗಿ ಕೂಡಬಾರದು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಡಂಗುರ ಸಾರಲಾಗಿದೆ.