ಠ್ಯಾಗೂರ್ ಪಾತ್ರದಲ್ಲಿ ಅನುಪಮ್ ಖೇರ್

ಮುಂಬೈ,ಜು.೯-ಹಿಂದಿ ಚಿತ್ರರಂಗದ ಪ್ರಮುಖ ಪೋಷಕ ನಟರಲ್ಲಿ ಒಬ್ಬರಾಗಿರುವ ೬೮ ವರ್ಷದ ಅನುಪಮ್ ಖೇರ್ ಅವರು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಮತ್ತು ೧೦೦ ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ.
ಅನುಪಮ್ ಖೇರ್ ಈಗ ರವೀಂದ್ರನಾಥ ಠಾಗೋರ್ ಆಗಿ ಅಭಿಮಾನಿಗಳ ಮುಂದೆ ಮಿಂಚಲು ತಯಾರಾಗಿದ್ದು ಅನುಪಮ್ ಖೇರ್ ಅವರ ರವೀಂದ್ರನಾಥ್ ಟ್ಯಾಗೋರ್ ಲುಕ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಇದು ಅವರ ೫೮೩ನೇ ಸಿನಿಮಾ ಆಗಲಿದೆ.
ಬಾಲಿವುಡ್‌ನ ಪ್ರತಿಭಾವಂತ ಪೋಷಕ ನಟ, ನಿರ್ಮಾಪಕ ಮತ್ತು ನಿರ್ದೇಶಕ ಅನುಪಮ್ ಖೇರ್ ಅವರನ್ನು ಇತ್ತೀಚೆಗೆ ಜನಪ್ರಿಯ ವಿದೇಶಿ ನಿಯತಕಾಲಿಕೆ ’ಹಾಲಿವುಡ್ ರಿಪೋರ್ಟರ್ ಏಷ್ಯಾದ ಐದು ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಗುರುತಿಸಿದೆ. ಅಷ್ಟೇ ಅಲ್ಲ, ಈ ಗೌರವ ಪಡೆದ ಭಾರತದ ಏಕೈಕ ನಟ ಅನುಪಮ್ ಖೇರ್.
ಇದೀಗ ಅನುಪಮ್ ಖೇರ್ ತಮ್ಮ ಹೊಚ್ಚ ಹೊಸ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಮನೋಜ್ಞ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದ
ವಿಶೇಷ ಪಾತ್ರದ ಮೂಲಕ ಬಾಲಿವುಡ್ ಲೋಕದಲ್ಲಿ ವಿಶೇಷ ಛಾಪು ಮೂಡಿಸಿರುವ ಅನುಪಮ್ ಖೇರ್ ತಮ್ಮ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಭಾರತದ ರಾಷ್ಟ್ರಗೀತೆಯನ್ನು ರಚಿಸಿದ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಅವರ ಪಾತ್ರದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ, ಖೇರ್ ರವೀಂದ್ರನಾಥ ಟ್ಯಾಗೋರ್ ಅವರ ವೀಡಿಯೊವನ್ನು ಲಗತ್ತಿಸಿದ್ದಾರೆ. ಇದರಲ್ಲಿ ಅವರು ಟ್ಯಾಗೋರರಂತೆ ಕಂಗೊಳಿಸುತ್ತಿದ್ದಾರೆ. ಇದಲ್ಲದೆ, ಅವರು ಟ್ಯಾಗೋರ್ ಅವರ ಸಂಯೋಜನೆಯ ಸೋಖಿಯ ವಾದ್ಯ ಸಂಗೀತವನ್ನು ಹಂಚಿಕೊಂಡಿದ್ದಾರೆ.
ಖ್ಯಾತ ಕವಿ, ಬರಹಗಾರ, ತತ್ವಜ್ಞಾನಿ ರವೀಂದ್ರನಾಥ ಟ್ಯಾಗೋರ್ ಅವರನ್ನು ತೆರೆಯ ಮೇಲೆ ತರುವುದು ಸುಲಭವಲ್ಲ. ಅನುಪಮ್ ಖೇರ್ ಅಂತಹ ಪಾತ್ರವನ್ನು ತೆರೆಯ ಮೇಲೆ ನಟಿಸಲು ಸಿದ್ಧರಾಗಿದ್ದಾರೆ. ಅನುಪಮ್ ಖೇರ್ ರವೀಂದ್ರನಾಥ ಠಾಗೋರ್ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೋಸ್ಟರ್ ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕುರಿತೇ ಸಿಕ್ಕಷ್ಟು ಬದಲಾಗಿದ್ದೀರಿ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೋಸ್ಟರ್ ಶೇರ್ ಮಾಡಿ ಅನುಪಮ್ ಖೇರ್ ಸಂತಸ ಹಂಚಿಕೊಂಡಿದ್ದಾರೆ. ನನ್ನ ೫೩೮ನೇ ಸಿನಿಮಾದಲ್ಲಿ ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರ ಪಾತ್ರ ಮಾಡಲು ಖುಷಿ ಆಗುತ್ತಿದೆ. ಸಮಯ ಬಂದಾಗ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ. ತೆರೆಮೇಲೆ ಇಂಥ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಅನುಪಮ್ ಖೇರ್ ಅವರು ಪೋಸ್ಟ್ ಮಾಡಿದ್ದಾರೆ.