ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಚೈತ್ರಾ

ಕೋಲಾರ,ಮಾ. ೩೦; ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಅವರು, ಮದುವೆಯಾದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ಕೋಲಾರ ಮೂಲದ ಚೈತ್ರ ತನ್ನ ಬರವಣಿಗೆ ಹಾಗೂ ಹಲವು ಚಿತ್ರಗಳಲ್ಲಿ ನಟನೆ ಮಾಡಿ, ಬಿಗ್ ಬಾಸ್ ಸೀನಸ್ ೭ ರಲ್ಲಿ ಖ್ಯಾತಿ ಪಡೆದುಕೊಂಡಿದ್ದರು. ಅಲ್ಲದೆ ನಿನ್ನೆ ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇವಾಲಯದಲ್ಲಿ, ಮಂಡ್ಯ ಮೂಲದ ನಾಗಾರ್ಜುನ ಎಂಬಾತನನ್ನ ಮದುವೆ ಮಾಡಿಕೊಂಡಿದ್ದರು. ಅಲ್ಲದೆ ಮಂಡ್ಯ ಮೂಲದ ನಾಗಾರ್ಜುನ್ ಜೊತೆಗೆ ಮದುವೆಯಾಗಿ ಸಾಮಾಜಿಕ ಜಾಲಾತಣದಲ್ಲಿ ಮದುವೆ ಬಗ್ಗೆ ಸಂತಸ ತೋಡಿಕೊಂಡಿದ್ದರು,
ಆದರೆ ಚೈತ್ರ ಅವರು ಮದುವೆ ಮಾಡಿಕೊಂಡಿದ್ದ, ಗಂಡನ ಮನೆ ಕಡೆಯವರು, ಕೆಲ ಸಂಘಟನೆಯವರು ಸೇರಿದಂತೆ ಚೈತ್ರ ಕುಟುಂಬಸ್ಥರು ಬಲವಂತವಾಗಿ ನನ್ನ ಮಗನಿಗೆ ಮದುವೆ ಮಾಡಿಸಿದ್ದಾರೆಂದು ಆರೋಪಿಸಿ, ಅದರಂತೆ ನಿನ್ನೆ ರಾತ್ರಿ ಕೋಲಾರ ನಗರದ ಕುರುಬರ ಪೇಟೆಯಲ್ಲಿರುವ ಚೈತ್ರಕೊಟೂರ್ ಅವರ ಮನೆ ಬಳಿ ಬಂದು ತಗಾದೆ ತೆಗೆದಿದ್ದಾರೆ. ಬಲವಂತವಾಗಿ ಸಂಘಟನೆಗಳ ಜೊತೆಗೂಡಿ ನನ್ನ ಮಗನನ್ನ ಕೂಡಿಹಾಕಿ ದೇಗುಲದಲ್ಲಿ ಮದುವೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿ ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನು ನಾಗಾರ್ಜುಗೆ ಈ ಮದುವೆ ಇಷ್ಟ ಇಲ್ಲ ಎಂದರೂ, ಇತ್ತ ಚೈತ್ರ ಕೊಟ್ಟೂರು ನನಗೆ ನಾಗಾರ್ಜುನ್ ಇಷ್ಟ ಅವನ ಜೊತೆ ಹೋಗುವೆ ಅಂತ ಪಟ್ಟುಹಿಡಿದಿದ್ದಾರೆ. ಈ ಸಂಬಂದ ಕೋಲಾರದ ಮಹಿಳಾ ಪೋಲೀಸ್ ಠಾಣೆ ಮೆಟ್ಟಿಲೇರಿದ್ದ, ಇಬ್ಬರು ಕುಟುಂಬಸ್ಥರಿಗೆ, ಎರಡೂ ಕಡೆಯವರಿಗೂ ಬುಧವಾರದವರೆಗೆ ಸಮಯವಕಾಶ ನೀಡಿದ್ದು, ಎರಡು ಕಡೆಯವರು ತೀರ್ಮಾನ ತೆಗೆದುಕೊಂಡು ಬನ್ನಿ ಎಂದು ಪೋಲೀಸರು ತಿಳಿ ಹೇಳಿ ಕಳುಹಿಸಿದ್ದಾರೆ.