ಠಾಣೆಯಲ್ಲೇ ಗುಂಡಿನ ದಾಳಿ ಬಿಜೆಪಿ ಶಾಸಕ ಗಣಪತ್ ಬಂಧನ

ಥಾಣೆ,ಫೆ.೩:ಭೂವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಏಕ್‌ನಾಥ್‌ಶಿಂಧೆ ಶಿವಸೇನಾ ಬಣದ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್‌ನನ್ನು ಬಂಧಿಸಲಾಗಿದೆ. ಗಣಪತ್ ಗಾಯಕ್‌ವಾಡ್ ಅವರ ಬಂಧನವನ್ನು ಪೊಲೀಸರು ದೃಢಪಡಿಸಿದ್ದಾರೆ.
ಮಹಾರಾಷ್ಟ್ರದ ಥಾಣೆಯ ಉಲ್ಲಾಸನಗರದ ಹಿಲ್‌ಲೈನ್ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್
ಬೆಂಬಲಿಗರು ಶಿಂಧೆ ಬಣದ ನಾಯಕ ಮಹೇಶ್‌ಗಾಯಕ್‌ವಾಡ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.
ಈ ದಾಳಿಯಲ್ಲಿ ಮಹೇಶ್‌ಗಾಯಕ್‌ವಾಡ್ ಮತ್ತು ಅವರ ಬೆಂಬಲಿನಿಗೆ ೫ ಗುಂಡುಗಳು ತಗುಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿಲ್‌ಲೈನ್ ಪೊಲೀಸ್‌ಠಾಣೆಯ ಅನಿಲ್‌ಜಗತಾಪ್ ಸಭಾಂಗಣದಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಮತ್ತು ಮಹೇಶ್‌ಗಾಯಕ್‌ವಾಡ್ ನಡುವೆ ಸಂಭಾಷಣೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಏಕಾಏಕಿ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಮತ್ತವರ ಬೆಂಬಲಿಗರು ಘರ್ಷಣೆಯಲ್ಲಿ ನಿರತರಾದರು.ಬಿಜೆಪಿ ಶಾಸಕರ ಬೆಂಬಲಿಗರು ಏಕಾಏಕಿ ಮಹೇಶ್‌ಗಾಯಕ್‌ವಾಡ್ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮಹೇಶ್‌ಗಾಯಕ್‌ವಾಡ್ ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹೇಶ್ ಮತ್ತು ಗಣಪತ್ ನಡುವೆ ಭಿನ್ನಾಭಿಪ್ರಾಯಗಳಿದ್ದು, ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಸುಧಾಕರ್‌ಪತ್ತಾರೆ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಶಿವಸೇನೆ ನಾಯಕ ಆನಂದ್‌ದುಬೆ ಶಿಂಧೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸ್ ಠಾಣೆಯೊಳಗೆ ಗುಂಡಿನ ದಾಳಿ ನಡೆದಿದೆ. ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಅವರು ಶಿವಸೇನೆ ಶಿಂಧೆ ಬಳಗದ ಮಹೇಶ್‌ಗಾಯಕ್‌ವಾಡ್ ಮೇಲೆಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾದ ಬಿಜೆಪಿಶಾಸಕ ಜನರ ಮೇಲೆಗುಂಡಿನ ದಾಳಿ ನಡೆಸಿರುವುದು ದುರದೃಷ್ಟಕರ,ತ್ರಿಬಲ್ ಇಂಜಿನ್ ಸರ್ಕಾರದಲ್ಲಿ ಎರಡು ಪಕ್ಷದ ನಾಯಕರು ಪರಸ್ಪರ ಬಡಿದಾಡಿಕೊಂಡು ಹತ್ಯೆಗೆ ಯತ್ನಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಈ ಮಧ್ಯೆ ಕಳೆದ ವರ್ಷದಿಂದ ಕಲ್ಯಾಣ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಇಬ್ಬರ ನಡುವೆ ಅಗ್ಗಜಗ್ಗಾಟ ನಡೆದಿತ್ತು. ಒಬ್ಬರನ್ನೊಬ್ಬರನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುತ್ತ ಬಂದಿದ್ದಾರೆ. ದಾಳಿ ನಡುವೆ ಇಬ್ಬರ ನಡುವೆ ಹಳೇ ದ್ವೇಷವೆ ಕಾರಣ ಎಂದು ಹೇಳಲಾಗಿದೆ.