ಠಾಣೆಗೆ ನಿಮ್ಮ ಮಿತ್ರ ಪೊಲೀಸ್ ತುರ್ತು ವಾಹನ- ಕಟ್ಟಿಮನಿ

ಸಿರವಾರ,ಮೇ೧- ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ವಿವಿಧ ಪೊಲೀಸ್ ಠಾಣೆಗೆ ನಿಮ್ಮ ಮೀತ್ರ ತುರ್ತು ವಾಹನಗಳನ್ನು ನೀಢಿದಂತೆ ಸಿರವಾರ ತಾಲೂಕಿಗೆ ೨೪೭ ನಿಮ್ಮ ಮಿತ್ರ ತುರ್ತು ಪೊಲೀಸ್ ವಾಹನ ಮಂಜೂರಾಗಿದ್ದು ಇದು ಹೆದ್ದಾರಿ ರಸ್ತೆಯಲ್ಲಿ ತುರ್ತು ಪರಿಸ್ಥಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಿರವಾರ ಸಿಪಿಐ ಗುರುರಾಜ ಕಟ್ಟಿಮನಿ ಹೇಳಿದರು. ಪಟ್ಟಣದ ಠಾಣೆಗೆ ಶುಕ್ರವಾರ ನೂತನ ನಿಮ್ಮ ಮಿತ್ರ ಪೊಲೀಸ್ ತುರ್ತು ವಾಹನ ಆಗಮಿಸಿದ್ದೂ ಅದರ ಕುರಿತು ಮಾತನಾಡಿದ ಅವರು ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದರೆ, ಗ್ರಾಮಾಂತರ ಪ್ರದೇಶದಲ್ಲಿ ಜನರು ದೊಂಬಿ ಎದ್ದಿದರೆ. ಅಕ್ರಮ ಚಟುವಟಿಕೆ ಜರುಗುತ್ತಿದ್ದರೆ ೧೧೨ ಗೆ ಕರೆ ಮಾಡಿದರೆ ಈ ನಮ್ಮ ಮಿತ್ರ ತುರ್ತು ಪೊಲೀಸ್ ವಾಹನ ತಕ್ಷಣ ಸ್ಥಳಕ್ಕೆ ದಾವಿಸಿ ರಕ್ಷಣೆ ನೀಡುವ, ಅಕ್ರಮ ಚಟುವಟಿಕೆ ತಡೆಯುವ ಕೆಲಸ ಮಾಡುತ್ತದೆ. ಈ ವಾಹನವು ೨೪೭ ಕಾರ್ಯನಿರತವಾಗಿರುತ್ತದೆ ನಿಮ್ಮ ಮಿತ್ರ ವಾಹನ ಸಿರವಾರ ಹಾಗೂ ಕವಿತಾಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು ಇಂದು ರಾಯಚೂರು ಜಿಲ್ಲಾ ಪೊಲೀಸ್ ಕಛೇರಿ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚಾಲನೆ ನೀಡಿದ್ದಾರೆ ಎಂದರು.
ಪಿ.ಎಸ್.ಐ ಸುಜಾತನಾಯಕ, ಸಿಬ್ಬಂದಿವರ್ಗ ಇದ್ದರು.