ಕೋಲಾರ,ಅ,೯-ಕರ್ನಾಟಕ ರಾಜ್ಯದಲ್ಲಿನ ಪೊಲೀಸ ಠಾಣೆಗಳಲ್ಲಿ ಸುಸ್ಥಿತಿ ಸಿ.ಸಿ. ಕ್ಯಾಮೆರಗಳನ್ನು ಅಳವಡಿಸಲು ಸ್ವಯಂ ಪ್ರೇರಿತವಾಗಿ ಕ್ರಮ ವಹಿಸಬೇಕೆಂದು ಕರ್ನಾಟಕ ಮಾಹಿತಿ ಆಯೋಗ ಪೊಲೀಸ್ ಮಹಾ ನಿರ್ದೇಶಕ ಡಾ. ಆಲೋಕ್ ಮೋಹನ್ ಅವರಿಗೆ ಆದೇಶಿಸಿ. ಈ ಕುರಿತು ಅನುಪಾಲನಾ ವರದಿ ಸಲ್ಲಿಕೆ ಮಾಡುವಂತೆ ನಿದೇರ್ಶಿಸಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆಯ ಸಿ.ಸಿ. ಟಿ.ವಿ. ಕ್ಯಾಮೆರ ದೃಶ್ಯವಳಿ ಕೋರಿ ಕೋಲಾರದ ಪತ್ರಕರ್ತ ಎಸ್. ಶಮ್ಗರ್ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಕೆ ಮಾಡಿದ್ದರು, ವಿಚಾರಣೆ ವೇಳೆ ಪ್ರಕರಣದ ಗಂಭೀರತೆ ಅರಿತ ಆಯೋಗ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರನ್ನು ಪ್ರತಿವಾದಿಯನ್ನಾಗಿಸಿ ಕೊಂಡು ಈ ಆದೇಶವನ್ನು ಜಾರಿ ಮಾಡಿದೆ.
ನಂಗಲಿ ಪೊಲೀಸ್ ಠಾಣೆಯಲ್ಲಿ ಆಂದ್ರ ಮೂಲದ ವ್ಯಕ್ತಿ ಮುನಿರಾಜು ಎಂಬುವರನ್ನು ಕಳ್ಳತನದ ಅರೋಪದ ಮೇರೆಗೆ ವಿಚಾರಣೆಗೆ ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ತರಲಾಗಿತ್ತು. ವಿಚಾರಣೆ ವೇಳೆ ಪೊಲೀಸರು ನೀಡಿದ ಹಿಂಸೆಯಿಂದ ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಾಪ್ಪಿದ್ದಾನೆಂದು ಮೃತನ ಪೋಷಕರು ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು,
ಈ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತ ಎಸ್. ಶಮ್ಗರ್ ಮಾಹಿತಿ ಹಕ್ಕಿನಡಿ ಮೊರೆ ಹೋದ ಹಿನ್ನಲೆಯಲ್ಲಿ ಪೊಲೀಸ್ ನಿರೀಕ್ಷಕರು ಕಾಯ್ದೆ ೮(೧) ಜಿ. ಪ್ರಕರಾರ ಮಾಹಿತಿ ನೀಡಲು ಅವಕಾಶವಿರುವುದಿಲ್ಲ ಎಂಬ ಹಿಂಬರಹವನ್ನು ನೀಡಿದ್ದರು, ಇದನ್ನು ಪ್ರಶ್ನಿಸ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದಾಗ ಆಯೋಗವು ವಿಚಾರಣೆಯನ್ನು ಕೈಗೆತ್ತಿ ಕೊಂಡು ಸಾರ್ವಜನಿಕ ಮಾಹಿತಿ ಅಧಿಕಾರಿ ಠಾಣೆಯ ಸಿ.ಸಿ. ಟಿ.ವಿ. ದುರಸ್ಥಿಯಲ್ಲಿತ್ತೇಂದು ಉತ್ತರಿಸಿದರು,
ಆಯೋಗವು ಈ ಸಂದರ್ಭದಲ್ಲಿ ದುರುದ್ದೇಶದಿಂದ ಅರ್ಜಿದಾರರಿಗೆ ಮಾಹಿತಿ ಒದಗಿಸದೆ ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲನೆಯಲ್ಲಿನ ನಿರ್ಲಕ್ಷಕ್ಕೆ ನಂಗಲಿ ಪೊಲೀಸ್ ಉಪನಿರೀಕ್ಷಕ ಜಿ. ಪ್ರದೀಪ್ ಸಿಂಗ್ ಅವರಿಗೆ ೨೫ ಸಾವಿರ ರೂ ದಂಡ ವಿಧಿಸಿದೆ.
ಜೂತೆಗೆ ಸಿ.ಸಿ.ಟಿ.ವಿ.ದೃಶ್ಯವಳಿಗಳನ್ನು ಕನಿಷ್ಟ ಒಂದು ವರ್ಷಗಳ ಕಾಲ ಸುಸ್ಥಿತಿಯಲ್ಲಿ ಕಾಯ್ದಿರಿಸ ಬೇಕೆಂದು ರಾಜ್ಯದಲ್ಲಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲು ತಮ್ಮ ಆದೇಶದಲ್ಲಿ ಉಲ್ಲೇಖಿಸಿದೆ.
ಅರ್ಜಿದಾರರ ಪರ ಹೈ ಕೋರ್ಟ್ ವಕೀಲೆ ಸುದ್ದ ಕಟ್ಟಾ ವಕಾಲತ್ತು ವಹಿಸಿದ್ದರು,