ಠಕ್ಕರ್ ಬಳಿಕ ಧರಣಿ ಮನೋಜ್ ಹೊಸ ಅವತಾರ

ಟಕ್ಕರ್ ಚಿತ್ರದ ಮೂಲಕ ನಾಯಕನಾಗಿ  ಪರಿಚಯವಾದ ನಟ  ಮನೋಜ್.  ವಿಭಿನ್ನ ಜಾನರಿನ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಅದುವೇ ಧರಣಿ. ಮನೋಜ್ ಹುಟ್ಟು ಹಬ್ಬದ ಪ್ರಯುಕ್ತ ‘ಧರಣಿ’ ಫಸ್ಟ್ ಲುಕ್ ಲೋಕಾರ್ಪಣೆಗೊಂಡಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ಮನೋಜ್, ಲುಕ್  ಬೇರೆಯದ್ದೇ ರೀತಿಯಲ್ಲಿ ನೋಡಬಹುದು. ಕಟೆಂಟ್ ಇರುವ ಚಿತ್ರಗಳನ್ನು ಜನ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರಣಿ ಹೊಸ ವಿಚಾರಗಳ ಸುತ್ತ ಆವರಿಸಿಕೊಂಡಿದೆ. ಕಮರ್ಷಿಯಲ್ ಆಗಿ ರೂಪಿಸುತ್ತಿದ್ದೇವೆ ಎಂದರು

ನಿರ್ದೇಶಕ ಸುಧೀರ್ ಶಾನುಭೋಗ್ ಮಾಹಿತಿ ನೀಡಿ ಪಕ್ಕಾ ದೇಸೀ ಸೊಗಡಿನ ಕಥೆ ಇದೆ. ಕರ್ನಾಟಕ ಮಾತ್ರವಲ್ಲದೆ  ಇತರೆ ರಾಜ್ಯಗಳಲ್ಲೂ ಕೋಳಿ ಪಂದ್ಯ ಬರಿಯ ಮನರಂಜನೆ ಅಲ್ಲದೆ ಅಪಾರ ಪ್ರಮಾಣದ ವಹಿವಾಟು ನಡೆಸುವ ಜೂಜಾಗಿದೆ. ಇದರ ಸುತ್ತ ಧರಣಿ ಕಥಾ ಹಂದರ ತೆರೆದುಕೊಂಡಿದೆ. ಇದಲ್ಲದೇ ಈವರೆಗೆ ಎಲ್ಲೂ ಹೇಳಿರದ ಒಂದಷ್ಟು ವಿಚಾರಗಳೂ ಇಲ್ಲಿ ದೃಶ್ಯರೂಪದಲ್ಲಿ ಅನಾವರಣಗೊಳ್ಳಲಿದೆ ಎಂದರು. ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ನಿರ್ಮಾಣವಿದೆ.

 ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣವಿದೆ.ಅರುಣೋದಯ ಕಥೆ ಚಿತ್ರಕ್ಕಿದೆ. ಧರಣಿಯ ಕುರಿತ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.