ಟ್ವಿಟ್ಟರ್ ಅವನತಿ ; ಮಾಜಿ ಮುಖ್ಯಸ್ಥ ಮನೀಶ್ ಭವಿಷ್ಯ

ನವದೆಹಲಿ,ನ. 21- ಮೈಕ್ರೋ ಬ್ಲಾಂಗಿಂಗ್ ಸಂಸ್ಥೆ ಟ್ವಿಟ್ಟರ್ ಸಂಸ್ಥೆ ಸದ್ಯಕ್ಕೆ ಸಾಯುವುದಿಲ್ಲ, ಆದರೆ ಕಾಲಾನಂತರದಲ್ಲಿ ಅದು ಅನವತಿ ಹೊಂದಲಿದೆ ಎಂದು ಟ್ಟಿಟ್ಟರ್ ಸಂಸ್ಥೆಯ ಭಾರತದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಭವಿಷ್ಯ ನುಡಿದಿದ್ದಾರೆ.

ಟೆಲ್ಸಾ ಕಂಪನಿಯ ಮುಖ್ಯಸ್ಥ ಎಲನ್ ಮಸ್ಕ್ ಅವರು ಟ್ವಿಟ್ಟರ್ ಸಂಸ್ಥೆಯನ್ನು 44 ಶತಕೋಟಿ ಡಾಲರ್ ಗೆ ತನ್ನದಾಗಿಸಿಕೊಂಡ ಬಳಿಕ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿವಿದ ದೇಶಗಳ ಮುಖ್ಯಸ್ಥರು ಮತ್ತು ಪ್ರಮುಖ ಸ್ಥಾನದಲ್ಲಿದ್ದ ಮಂದಿಯನ್ನು ವಜಾ ಮಾಡಲಾಗಿತ್ತು. ಅದರಲ್ಲಿ ಮನೀಶ್ ಮಹೇಶ್ವರಿ ಕೂಡ ಒಬ್ಬರು.

ಟ್ವಿಟ್ಟರ್ ಸಂಸ್ಥೆಯಿಂದ ವಜಾ ಗೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮನೀಶ್ ಮಹೇಶ್ವರಿ
ಎಲೋನ್ ಮಸ್ಕ್ ಇತ್ತೀಚೆಗೆ ತೆಗೆದುಕೊಂಡ ಕ್ರಮಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗೆ ಏನನ್ನು ಒಳಗೊಂಡಿವೆ ಎಂಬುದರ ಕುರಿತು ವಿವರವಾಗಿ ವಿಷಯ ತಿಳಿಸಿದ್ದಾರೆ‌.

“.ಇಲ್ಲಿಯವರೆಗೆ, ಟ್ವಿಟರ್ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಪ್ರಭಾವಶಾಲಿಯಾಗಿದೆ. ಆದರೆ ಜನರು ಸೇವೆ ಪಡೆಯದಿದ್ದರೆ ಅಥವಾ ಬಳಕೆದಾರರು ಸಂತೋಷವಾಗಿರದಿದ್ದರೆ ಪರ್ಯಾಯವಾಗಿ ಹೊರಹೊಮ್ಮುಲಿದೆ ಎಂದು ಟ್ವಿಟರ್ ಇಂಡಿಯಾ ಸಂಸ್ಥೆಯ ಮಾಜಿ ಮುಖ್ಯಸ್ಥರೂ ಆಗಿರುವ ಮನೀಶ್ ಮಹೇಶ್ವರಿ ಹೇಳಿದ್ದಾರೆ.

ಟ್ವಿಟ್ಟರ್ ಸಂಸ್ಥೆಯ ಇತ್ತಿಚಿನ ಬೆಳವಣಿಗೆಗಳನ್ನು ನೋಡಿದರೆ ಟ್ವಿಟ್ಟರ್ ಸಂಸ್ಥೆಯ ಅವನತಿ ಖಚಿತ ಅದು ಈಗಲೇ ಎಂದು ಹೇಳಲೂ ಸಾದ್ಯವಿಲ್ಲ‌ ಆದರೆ ಕಂಡಿತಾ ಸಮಸ್ಯೆಗೆ ಸಿಲುಕಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ನೂತನ ಮುಖ್ಯಸ್ಥ ಎಲೋನ್ ಮಸ್ಕ್ ಅವರ ಕ್ರಮಗಳು ಅವರ ಹುಚ್ಚು ನಿರ್ಧಾರಗಳು ಸಂಸ್ಥೆಯನ್ನು ಭವಿಷ್ಯದಲ್ಲಿ ಸಂಕಷ್ಟಕ್ಕೆ ದೂಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಮೈಕ್ರೋ-ಬ್ಲಾಗಿಂಗ್ ವೇದಿಕೆಯ ಭಾರತದ ಮುಖ್ಯಸ್ಥರಾಗಿ ಮೂರು ವರ್ಷಗಳ ಅವಧಿಯಲ್ಲಿ ಟ್ವಿಟರ್ ಸಂಸ್ಥೆಯ ಒಳ ಹೊರಗು ಗೊತ್ತಿರುವ ಹಿನ್ನೆಲೆಯಲ್ಲಿ ಈ ವಿಷಯ ತಿಳಿಸಿದ್ದೇನೆ ಎಂದು ಮನೀಶ್ ಮಹೇಶ್ವರಿ ಹೇಳಿದ್ದಾರೆ.