ಟ್ವಿಟರ್ ವೇದಿಕೆ ಬಂದ್: ಜಾಕ್ ಬೆದರಿಕೆ

ನವದೆಹಲಿ,ಜೂ.೧೩- ಕೇಂದ್ರ ಸರ್ಕಾರವನ್ನು ಟೀಕಿಸುವ ಮತ್ತು ರೈತರ ಪ್ರತಿಭಟನೆಗಳ ಕುರಿತು ವರದಿ ಮಾಡುವ ಟ್ವಿಟ್ಟರ್ ಖಾತೆಗಳ ಮೇಲೆ ಹದ್ದಿನ ಕಣ್ಣಿಡುವಂತೆ ಕೇಂದ್ರ ಸರ್ಕಾರದಿಂದ ಹಲವು ಮನವಿ ಬಂದಿದ್ದವು.ಇದಕ್ಕೆ ಒಪ್ಪದಿದ್ದಕ್ಕೆ ಟ್ವಟ್ಟರ್ ವೇದಿಕೆ ಬಂದ್ ಮಾಡುವ ಬೆದರಿಕೆ ಹಾಕಲಾಗಿತ್ತು ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಹೊಸ ಬಾಂಬ್ ಸಿಡಿಸಿದ್ದಾರೆ.
ಯಾವ ಯಾವ ಖಾತೆಗಳಿಂದ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಾರೆ ಮತ್ತು ರೈತರ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ ಅಂತಹ ಖಾತೆಗಳನ್ನು ಸೆನ್ಸಾರ್ ಮಾಡಿ ಅವುಗಳನ್ನು ನಿಷ್ಕ್ರಿಯ ಗೊಳಿಸಲು ಕೇಂದ್ರ ಸರ್ಕಾರದಿಂದ ಹಲವು ಭಾರಿ ಮನವಿ ಬಂದಿತ್ತು. ನಾವು ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಭಾರತದಲ್ಲಿ ಟ್ವಿಟ್ಟರ್ ಜಾಲ ತಾಣ ಬಂದ್ ಮಾಡುವುದಾಗಿ ಬೆದರಿಕೆಯನ್ನೂ ಸರ್ಕಾರದಿಂದ ಹಾಕಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಟ್ವಿಟ್ಟರ್ ವಿಷಯದಲ್ಲಿ ವಿದೇಶಿ ಸರ್ಕಾರಗಳಿಂದ ಯಾವುದೇ ಒತ್ತಡವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಅವರು ಈ ವಿಷಯ ಬಹಿರಂಗ ಪಡಿಸಿದ್ದಾರೆ.
ರೈತರ ಪ್ರತಿಭಟನೆಗಳನ್ನು ಬೆಂಬಲಿಸುವ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವ ನಿರ್ದಿಷ್ಟ ಪತ್ರಕರ್ತರ ಮೇಲೂ ಗಮನ ಹರಿಸಬೇಕು ಎನ್ನುವ ವಿನಂತಿ ಬಂದಿದ್ದವು . ಇಂತಹ ವಿನಂತಿ ಬಂದ ದೇಶಗಳಲ್ಲಿ ಭಾರತವೂ ಒಂದಾಗಿದೆ ಮತ್ತು ಅದು ‘ಭಾರತದಲ್ಲಿ ಟ್ವಿಟರ್ ಅನ್ನು ಮುಚ್ಚುತ್ತೇವೆ’ ಎಂಬ ರೀತಿಯಲ್ಲಿ ವ್ಯಕ್ತವಾದು ಆದರೆ ನಾವು ಅದಕ್ಕ ಮನ್ನಣೆ ನೀಡಲಿಲ್ಲ ಎಂದಿದ್ದಾರೆ.
ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ’ ನಾವು ಹೇಳಿದಷ್ಟು ಮಾಡಿ ಇಲ್ಲದಿದ್ದರೆ ಮ್ಮ ಕಚೇರಿಗಳನ್ನು ಮುಚ್ಚುತ್ತೇವೆ’ ಎನ್ನುವ ಬೆದರಿಕೆ ಬಂದಿದ್ದವು ಭಾರತ, ಪ್ರಜಾಪ್ರಭುತ್ವ ದೇಶ.ನಾವು ಅದಕ್ಕೆ ಒಪ್ಪಲಿಲ್ಲ ಎಂದು ೨೦೨೧ ರಲ್ಲಿ ಟ್ವಿಟರ್ ಸಿಇಒ ಆಗಿ ತ್ಯಜಿಸಿದ ಜ್ಯಾಕ್ ಡಾರ್ಸೆ ಹೇಳಿದ್ದಾರೆ.
ಆರೋಪ ನಿರಾಕಣೆ
ಕೇಂದ್ರ ಸರ್ಕಾರದ ಮೇಲೆ ಟ್ವಿಟ್ಟರ್ ಸಂಸ್ಥೆ ಮಾಜಿ ಸಿಇಓ “ಜಾಕ್ ಡಾರ್ಸೆ” ಮಾಡಿರುವ ಆರೋಪವನ್ನು ಕೇಂದ್ರ ವಿದ್ಯುನ್ಮಾನ ಸಚಿವ ರಾಜೀವ್ ಚಂದ್ರಶೇಖರ್ ಅಲ್ಲಗಳೆದಿದ್ಧಾರೆ
“ಜಾಕ್ ಡಾರ್ಸೆ ಅವರು ಮಾಡಿರುವ ಈ ಆರೋಪ ಸಂಪೂರ್ಣ ಸುಳ್ಳು, ಬಹುಶಃ ಟ್ವಿಟರ್‌ನ ಇತಿಹಾಸದ ಸಂಶಯಾಸ್ಪದ ಅವಧಿ ಹೊರಹಾಕುವ ಪ್ರಯತ್ನ” ಎಂದಿದ್ದಾರೆ.