ಟ್ವಿಟರ್ ನ ನೂತನ ಸಿಇಒ ಪರಾಗ್ ವೇತನ ಎಷ್ಟು ಗೊತ್ತಾ

ಹೈದರಾಬಾದ್​, ನ.30-ಜನಪ್ರಿಯ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್​​​ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿರುವ ಭಾರತೀಯ ಮೂಲದ ಪರಾಗ್ ಅಗರವಾಲ್ ಸಂಬಳ ಕೇಳಿದರೆ ಯಾರಿಗಾದರೂ ಆಶ್ಚರ್ಯವಾಗದೆ ಇರದು.
ಅಂದಹಾಗೆ ಅವರ ಸಂಬಳ ಎಷ್ಟು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದೈತ್ಯ ಕಂಪನಿಯ ಮುಖ್ಯಸ್ಥರಾಗಿ ಆಯ್ಕೆಯಾಗು ತ್ತಿದ್ದಂತೆ ಅವರು ವಾರ್ಷಿಕವಾಗಿ ಎಷ್ಟು ಸಂಬಳ ಪಡೆದುಕೊಳ್ಳಲಿದ್ದಾರೆಂಬುದು ಇದೀಗ ಬಹಿರಂಗವಾಗಿದೆ .
ಲಭ್ಯವಾಗಿರುವ ಮಾಹಿತಿ ಪ್ರಕಾರ ವಾರ್ಷಿಕವಾಗಿ ಅವರಿಗೆ 1 ಮಿಲಿಯನ್ ಡಾಲರ್​​ ಸಂಬಳ ಹಾಗೂ ಬೋನಸ್​​​ ಸಿಗಲಿದೆ ಎಂದು ತಿಳಿದು ಬಂದಿದೆ.
ಪರಾಗ್​​ ಅಗರವಾಲ್​​ ಅವರಿಗೆ ವಾರ್ಷಿಕವಾಗಿ 7,51,17,500 ಕೋಟಿ ರೂ. ಸಂಬಳ ಸಿಗಲಿದ್ದು, ಪ್ರತಿ ತಿಂಗಳು 62,59,000 ರೂ. ಸಂಬಳದ ಜೊತೆಗೆ ಬೋನಸ್​​​​​ ಪಡೆಯಲಿದ್ದಾರೆ.
ಟ್ವಿಟರ್​​ ಕಂಪನಿಯ ಯುಎಸ್​​ ಸೆಕ್ಯೂರಿಟೀಸ್​ ಆ್ಯಂಡ್​​ ಎಕ್ಸೆಂಜ್​ಗೆ ಸಲ್ಲಿಸಿರುವ ದಾಖಲೆಯಿಂದ ಈ ಮಹತ್ವದ ಅಂಶ ಬಹಿರಂಗಗೊಂಡಿದೆ. ಕಂಪನಿಯ ಸಿಇಒ ಆಗಿ ನೇಮಕಗೊಂಡಿರುವ ಪರಾಗ್​​​ ಅವರಿಗೆ 12.5 ಮಿಲಿಯನ್​​‌ ಅಮೆರಿಕನ್​ ಡಾಲರ್​ ಮೌಲ್ಯದ ಷೇರು ಸಿಗಲಿದೆ ಎಂದು ತಿಳಿದುಬಂದಿದೆ.
ಮುಂಬೈನ ಐಐಟಿಯಲ್ಲಿ ಬಿಟೆಕ್ ಪದವಿ ಪಡೆದ ಪರಾಗ್ ಅಗರವಾಲ್ ಅವರು ಸ್ಟ್ಯಾನ್​ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪಿಹೆಚ್​ಡಿ ಪಡೆದಿದ್ದಾರೆ.
ಮೈಕ್ರೋಸಾಫ್ಟ್, ಯಾಹೂ ಮತ್ತು ಎಟಿ ಆ್ಯಂಡ್ ಟಿ ಲ್ಯಾಬ್ಸ್ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ 2011ರಲ್ಲಿ ಟ್ವಿಟರ್ ಸಂಸ್ಥೆ ಸೇರಿಕೊಂಡಿರುವ 37 ವರ್ಷದ ಪರಾಗ್​ ಇದೀಗ ಟ್ವಿಟರ್​​​ ಸಂಸ್ಥೆಯ ಪ್ರಮುಖ ಹುದ್ದೆಗೆ ಏರಿದ್ದಾರೆ.