ಟ್ವಿಟರ್ ನಿಧಾನ ಬಳಕೆದಾರರ ಕ್ಷಮೆ ಕೋರಿದ ಎಲೋನ್

ನ್ಯೂಯಾರ್ಕ್,ನ.೧೬- ಭಾರತ ಸೇರಿದಂತೆ ವಿಶ್ವದ ಇತರ ಹಲವು ದೇಶಗಳಲ್ಲಿ ಟ್ವಿಟರ್ “ತುಂಬಾ ನಿಧಾನ”ವಾಗಿರುವುದಕ್ಕೆ ಮೈಕ್ರೋಬ್ಲಾಗಿಂಗ್ ಸಂಸ್ಥೆಯ ಮುಖ್ಯಸ್ಥ ಎಲೋನ್ ಮಸ್ಕ್ ಬಳಕೆದಾರರ ಕ್ಷಮೆ ಕೋರಿದ್ದಾರೆ.
“ಭಾರತ, ಇಂಡೋನೇಷ್ಯಾ ಮತ್ತು ಇತರ ಹಲವು ದೇಶಗಳಲ್ಲಿ ಟ್ವಿಟರ್ ಕಾರ್ಯಾಚರಣೆ ತುಂಬಾ ನಿಧಾನವಾಗಿದೆ. ಹೋಮ್‌ಲೈನ್ ಟ್ವೀಟ್‌ಗಳನ್ನು ರಿಫ್ರೆಶ್ ಮಾಡಲು ೧೦ ರಿಂದ ೧೫ ಸೆಕೆಂಡು ಸಾಮಾನ್ಯವಾಗಿ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಕೆಲವೊಮ್ಮೆ ವಿಶೇಷವಾಗಿ ಆಂಡ್ ರಾಡ್ ಪೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ . ಬ್ಯಾಂಡ್‌ವಿಡ್ತ್, ಲೇಟೆನ್ಸಿ ಅಥವಾ ಆಪ್‌ನಿಂದಾಗಿ ಎಷ್ಟು ವಿಳಂಬವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಅವರು “ಹಲವು ದೇಶಗಳಲ್ಲಿ ಟ್ವಿಟ್ಟರ್ ತುಂಬಾ ನಿಧಾನವಾಗುತ್ತಿರುವುದಕ್ಕೆ ಕ್ಷಮೆಯಾಚಿಸಲು ಬಯಸುವುದಾಗಿ ತಿಳಿಸಿದ್ಧಾರೆ.
೧೦೦೦ ಕಳಪೆ ಬ್ಯಾಚ್ ಆರ್‌ಪಿಸಿಗಳನ್ನು ಹೋಮ್ ಟೈಮ್‌ಲೈನ್ ಅನ್ನು ರೆಂಡರ್ ಮಾಡುತ್ತಿದೆ. ಹಲವಾರು ಇಂಜಿನಿಯರ್‌ಗಳು ಸ್ವತಂತ್ರವಾಗಿ ೧೨೦೦ ಆರ್‍ಪಿಸಿ ಬಗ್ಗೆ ಗಮನಕ್ಕೆ ತಂದಿದ್ದಾರೆ ಎಂದಿದ್ದಾರೆ.

ಅಮೇರಿಕಾದಲ್ಲಿ ಅಪ್ಲಿಕೇಶನ್ ರಿಫ್ರೆಶ್ ಮಾಡಲು ೨ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಆದರೆ ಭಾರತದಲ್ಲಿ ೨೦ ಸೆಕೆಂಡುಗಳನ್ನು ತೆಗೆದುಕೊಳ್ಳಲಿದೆ, ಸರ್ವರ್ ಕಂಟ್ರೋಲ್ ಟೀಮ್ ಪ್ರಕಾರ, “ಮೈಕ್ರೋ ಸರ್ವೀಸ್” ಸರ್ವರ್ ಸೈಡ್ ಇದೆ ಎಂದು ತಿಳಿಸಿದೆ.