ಟ್ವಿಟರ್‌ನಲ್ಲಿ ಯೋಗಿ ಹೊಸ ಸಾಧನೆ

ಲಕ್ನೋ,ಜೂ.೧೪- ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವಿಟರ್‌ನಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದಾರೆ. ಯೋಗಿ ರವರ ಅಧಿಕೃತ ಟ್ವಿಟರ್ ಖಾತೆ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ೨೫ ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಜಾಸ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
ಈ ಮೂಲಕ ಟ್ವಿಟರ್‌ನಲ್ಲಿ ಈ ಸಂಖ್ಯೆಯನ್ನು ದಾಟಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಯೋಗಿ ಆದಿತ್ಯನಾಥ್ ಪಾತ್ರರಾಗಿದ್ದಾರೆ. ಇದು ಉತ್ತರ ಪ್ರದೇಶ ಮಾತ್ರವಲ್ಲದೆ ದೇಶದ ದೊಡ್ಡ ನಾಯಕರು ಮತ್ತು ಸೆಲೆಬ್ರಿಟಿಗಳು ಕೂಡ ಇಷ್ಟು ಮಂದಿ ಫಾಲೋವರ್ಸ್ ಹೊಂದಲು ಸಾಧ್ಯವಾಗಲಿಲ್ಲ.
ಸಿಎಂ ಯೋಗಿ ಆದಿತ್ಯನಾಥ್ ೨೦೧೫ರ ಸೆಪ್ಟೆಂಬರ್‌ನಲ್ಲಿ ಟ್ವಿಟರ್‌ನ್ನು ಖಾತೆಯನ್ನು ಪ್ರಾರಂಭಿಸಿದರು. ೨೦೧೭ರಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡ ನಂತರ, ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅವರು ವ್ಯಾಪಕವಾದ ಸುಧಾರಣೆಗಳನ್ನು ತೋರಿಸಿದ ರೀತಿಯಲ್ಲಿ ಅವರ ಜನಪ್ರಿಯತೆಯು ಗುಣಾತ್ಮಕ ಹೆಚ್ಚಳವನ್ನು ಕಂಡಿದೆ.