ಟ್ವಿಟರ್‌ಗೆ ಟಕ್ಕರ್ ಕೊಡಲು ಫೇಸ್‌ಬುಕ್ ಸಿದ್ಧತೆ

ಲಾಸ್ ಏಂಜಲೀಸ್, ಮಾ.೧೨- ಟ್ವಿಟರ್‌ಗೆ ಟಕ್ಕರ್ ಕೊಡಲು ಫೇಸ್ಬುಕ್ ಮುಂದಾಗಿದ್ದು, ಇದಕ್ಕೆ ಖ್ಯಾತ ಉದ್ಯಮಿ ಎಲೋನ್ ಮಸ್ಕ್ ಕಾಪಿ ಕ್ಯಾಟ್ ಎಂದು ಟೀಕೆ ಮಾಡಿದ್ದಾರೆ.ಫೇಸ್‌ಬುಕ್ ಮಾಲೀಕತ್ವದ ಮೆಟಾ ಟ್ವಿಟರ್ ಮಾದರಿಯ ಆಪ್ಲಿಕೇಶನ್ ಲಾಂಚ್ ಮಾಡುವ ಬಗ್ಗೆ ಕಾರ್ಯನಿರತವಾಗಿದೆ. ಟೆಕ್ಸ್ಟ್ ಮಾದರಿಯ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲು ನಾವು ಸ್ವತಂತ್ರ, ವಿಕೇಂದ್ರೀಕೃತ ಸಾಮಾಜಿಕ ನೆಟ್‌ವರ್ಕ್ ಒಂದನ್ನು ತಯಾರಿಸುತ್ತಿದ್ದೇವೆ ಎಂದು ಮೆಟಾ ವಕ್ತಾರರು ಮಾಹಿತಿ ನೀಡಿದ್ದಾರೆ .
ಕಂಟೆಂಟ್ ಕ್ರಿಯೇಟರ್ಸ್ ಮತ್ತು ಸಾರ್ವಜನಿಕರು ತಮ್ಮ ಆಸಕ್ತಿಗಳ ಬಗ್ಗೆ ಸಮಯೋಚಿತ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲು ಪ್ರತ್ಯೇಕ ವೇದಿಕೆಯೊಂದರ ಅಗತ್ಯವಿದೆ ಎಂದು ಮೆಟಾ ಹೇಳಿಕೊಂಡಿದೆ.
ಟ್ವಿಟರ್ ಈಗ ಪೇಡ್ ಚಂದಾದಾರ ಆರಂಭಿಸಿರುವುದು ತಿಳಿದ ವಿಷಯ. ಎಲೋನ್ ಮಸ್ಕ್ ಅವರ ಈ ಐಡಿಯಾದಿಂದಲೇ ಪ್ರೇರಣೆ ಪಡೆದಿರುವ ಮೆಟಾ ಕೂಡ ಕಳೆದ ತಿಂಗಳು ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಂ ಗಳಿಗೆ ಮೆಟಾ ವೆರಿಫೈಡ್ ಚಂದಾದಾರಿಕೆ ಆರಂಭಿಸಿದೆ. ’ಬ್ಲೂಸ್ಕಿ’ ಎಂಬ ಟ್ವಿಟರ್‌ಗೆ ಪರ್ಯಾಯ ಆಪ್ ಒಂದನ್ನು ಪ್ರಾರಂಭಿಸುವುದರೊಂದಿಗೆ ಸಾಮಾಜಿಕ ಮಾಧ್ಯಮ ಕ್ಷೇತ್ರಕ್ಕೆ ಮರಳಿದ್ದಾರೆ ಎಂದು ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಅದರ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಅವರು ತಿಳಿಸಿದ್ದಾರೆ