ಟ್ರ್ಯಾಕ್ಟರ್ ಮಾರಿ ಪಂದ್ಯ ವೀಕ್ಷಿಸಿದ ಪಾಕ್ ಅಭಿಮಾನಿಗೆ ನಿರಾಸೆ

ನ್ಯೂಯಾರ್ಕ್.ಜೂ.೧೦- ಪಾಕಿಸ್ತಾನ ಟಿ೨೦ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಲಿದೆ ಎಂದು ಪಾಕ್ ಅಭಿಮಾನಿಯೊಬ್ಬ ತಮ್ಮ ಬಳಿಯಿದ್ದ ಟ್ರ್ಯಾಕ್ಟರ್ ಮಾರಿ ಪಂದ್ಯ ವೀಕ್ಷಿಸಿದ ಅಭಿಮಾನಿಗೆ ನಿರಾಸೆಯಾಗಿದೆ. ನಿನ್ನೆ ನಡೆದ ಏಷ್ಯಾ ಖಂಡದ ಎರಡು ಪ್ರಬಲ ದೇಶಗಳ ನಡುವೆ ನಡೆದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ೬ ರನ್‌ಗಳ ಸೋಲು ಅನುಭವಿಸಿತು. ಇದು ಪಾಕ್ ಅಭಿಮಾನಿಗೆ ಅಪಾರ ನಿರಸೆ ಉಂಟು ಮಾಡಿದೆ.
ತಮ್ಮ ಟ್ರ್ಯಾಕ್ಟರ್ ಮಾರಿ ಭಾರತ- ಪಾಕ್ ಪಂದ್ಯ ನೋಡಲು ಬಂದು ಪಂದ್ಯ ವೀಕ್ಷಿಸಿದ ಪಾಕ್ ಅಭಿಮಾನಿ ನಿರಾಸೆ ಅನುಭವಿಸಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನವೆಂದರೆ ಯಾವಗಲೂ ರೋಚಕತೆಯಿಂದ ಕೂಡಿರುತ್ತದೆ. ಇದಕ್ಕೆ ನಿನ್ನೆ ನಡೆದ ಪಂದ್ಯವೇ ಸಾಕ್ಷಿ ನಿನ್ನೆ ಬದ್ಧವೈರಿಗಳ ಕಾದಾಟ ನೋಡಲು ಎರಡೂ ತಂಡಗಳ ಅಭಿಮಾನಿಗಳು ನಾಸೌ ಕೌಂಟಿ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದರು.
ಪಂದ್ಯ ಆರಂಭದಿಂದಲೂ ಉಭಯ ತಂಡಗಳ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು.
ಪಂದ್ಯ ಸಾಗಿದಂತೆ ಅನಿರೀಕ್ಷಿತಾ ತಿರುವು ಪಡೆಯುತ್ತಾ ಸಾಗಿತು. ಅಂತಿಮವಾಗಿ ಭಾರತೀಯ ಅಭಿಮಾನಿಗಳು ಸಂಭ್ರಮಿಸಿದರು.
ಆದರೆ ಪಾಕ್ ಪಾಳಯದಲ್ಲಿ ನಿರಾಸೆ ಮನೆ ಮಾಡಿತ್ತು. ಅದರಲ್ಲೂ ಓರ್ವ ಪಾಕ್ ಕ್ರಿಕೆಟ್ ಅಭಿಮಾನಿ ಈ ಪಂದ್ಯ ವೀಕ್ಷಿಸುವುದಕ್ಕಾಗಿ ತನ್ನ ಟ್ರ್ಯಾಕ್ಟರ್ ಮಾರಿ ನ್ಯೂಯಾರ್ಕ್‌ಗೆ ಬಂದಿದ್ದರು. ಜತೆಗೆ ಪಂದ್ಯ ವೀಕ್ಷಿಸಲು ೩ ಸಾವಿರ ಡಾಲರ್ (ಪಾಕ್ ರೂ. ಮೌಲ್ಯ ೮ ಲಕ್ಷ ರೂ.) ಬೆಲೆಯ ಟಿಕೆಟ್ ಖರೀದಿಸಿದ್ದರು.
ಪಾಕ್ ಸೋಲಿನ ಕುರಿತು, ನಾನು ೩ ಸಾವಿರ ಯುಎಸ್ ಡಾಲರ್ ಮೌಲ್ಯದ ಟಿಕೆಟ್ ಖರೀದಿಸಲು ನನ್ನ ಟ್ರ್ಯಾಕ್ಟರ್ ಮಾರಿದೆ.
ಭಾರತ ತಂಡದ ಮೊತ್ತ ನೋಡಿದಾಗ ನಾವು ಸೋಲುವುದಿಲ್ಲ ಎಂದು ಭಾವಿಸಿದ್ದೆ. ಇಡೀ ಪಂದ್ಯ ನಮ್ಮ ಕೈಯಲ್ಲಿತ್ತು.
ನಾಯಕ ಬಾಬರ್ ಅಜಂ ಔಟಾದ ನಂತರ ಅಭಿಮಾನಿಗಳು ನಿರಾಸೆ ಅನುಭವಿಸಿದರು. ನಾನು ಭಾರತೀಯ ಅಭಿಮಾನಿಗಳನ್ನು ಅಭಿನಂದಿಸುತ್ತೇನೆ ಎಂದು ಪಾಕ್ ಅಭಿಮಾನಿ ಕಣ್ಣೀರು ಹಾಕುತ್ತಾ ಹೇಳಿದರು.