ಟ್ರ್ಯಾಕ್ಟರ್ -ಬಸ್ ಮಧ್ಯ ಡಿಕ್ಕಿ:20 ಕ್ಕೂ ಅಧಿಕ ಜನರಿಗೆ ಗಾಯ

ವಿಜಯಪುರ:ಡಿ.3:ಟ್ರ್ಯಾಕ್ಟರ್ ಹಾಗೂ ಸರ್ಕಾರಿ ಬಸ್ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿ 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂಡಿ ತಾಲೂಕಿನ ಝಳಕಿ ಬಳಿ ಸಂಭವಿಸಿದೆ.

ಅಂಬ್ಯುಲೆನ್ಸ್ ಸಕಾಲಕ್ಕೆ ಬಾರದೆ ಗಾಯಾಳುಗಳು ಕೆಲ ಹೊತ್ತು ಘಟನಾ ಸ್ಥಳದಲ್ಲಿಯೇ ನರಳಾಡುವಂತಾಯಿತು. ಸಾರ್ವಜನಿಕರು ಅಂಬ್ಯುಲೆನ್ಸ್ ಸೇವೆ ವಿಳಂಬಕ್ಕೆ ಹಿಡಿ ಶಾಪ ಹಾಕಿದರು.

ಆನಂತರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.

ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.