ಟ್ರ್ಯಾಕ್ಟರ್ ಪಲ್ಟಿ – 18 ಜನರಿಗೆ ಗಾಯ


ರಾಯಚೂರು.ಡಿ.24- ತಾಲೂಕಿನ ರಬಣಕಲ್ ಗ್ರಾಮದಲ್ಲಿ ಹತ್ತಿ ಬಿಡಿಸಲು ಬಂದ ರೈತರ ಟ್ರ್ಯಾಕ್ಟರ್ ಪಲ್ಟಿಯಾಗಿ 18 ಜನ ಗಾಯಗೊಂಡಿದ್ದು, ಇವರಲ್ಲಿ ಕೆಲವರನ್ನು ರಿಮ್ನ್ ಮತ್ತು ಮಾನ್ವಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನ ನಿರ್ಲಕ್ಷ್ಯೆಯಿಂದ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ ಯಾವ ಕಾರ್ಮಿಕರು ಸಹ ಪ್ರಾಣ ಕಳೆದುಕೊಂಡಿಲ್ಲ. ಟ್ರ್ಯಾಕ್ಟರನಲ್ಲಿ ಸಂಚರಿಸುತ್ತಿದ್ದಾಗ ಚಾಲಕ ನಿರ್ಲಕ್ಷ್ಯತೆಗೆ ಈ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಯಲ್ಲಮ್ಮ, ರತ್ನಮ್ಮ, ಪಾರ್ವತಮ್ಮ, ಮೀನಮ್ಮ, ನಾಗಮ್ಮ, ರಾಘವೇಂದ್ರ, ದುರ್ಗೇಶ, ಈರಮ್ಮ ಸೇರಿದಂತೆ ಇತರರು ಮಾನ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, ರಿಮ್ಸ್ ಆಸ್ಪತ್ರೆಯಲ್ಲಿ ಲಕ್ಷ್ಮೀ, ದೇವಮ್ಮ, ಲಕ್ಷ್ಮೀ, ಹಂಪಮ್ಮ, ಹನುಮಂತಿ, ಸಜ್ಜಮ್ಮ, ಉರುಕಂದಮ್ಮ, ಸೌಜನ್ಯ, ಸರೋಜಮ್ಮ ಲಕ್ಷ್ಮೀ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.