ಟ್ರ್ಯಾಕ್ಟರ್ ಡಿಕ್ಕಿ: ವ್ಯಕ್ತಿಗೆ ಗಂಭೀರ ಗಾಯ

ಕಲಬುರಗಿ,ಆ.30-ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಪಳಾಂವ ಕ್ರಾಸ್ ಹತ್ತಿರ ನಡೆದಿದೆ.
ಶಿವರಾಜ ಅಟ್ಟೂರಕರ್ ಎಂಬುವವರೆ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದಾರೆ. ಇವರು ದಿನ ನಿತ್ಯದ ಕೆಲಸ ಮುಗಿಸಿಕೊಂಡು ಉಪಳಾಂವ ಕ್ರಾಸ್ ಹತ್ತಿರ ರಸ್ತೆ ಬದಿಗೆ ನಿಂತಿದ್ದ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಶಿವರಾಜ ಅವರ ಪತ್ನಿ ಮಹಾಲಕ್ಷ್ಮೀ ಅಟ್ಟೂರಕರ್ ಅವರು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.