ಟ್ರ್ಯಾಕ್ಟರ್ ಕಳ್ಳರಿಬ್ಬರ ಬಂಧನ

ಕುಂದಗೋಳ,ಏ.13: ಬಹು ದಿನಗಳಿಂದ ರೈತರ ಟ್ರ್ಯಾಕ್ಟರ್ ಹಾಗೂ ಟೈಲರ್‍ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕಳೆದ ಆರು ತಿಂಗಳಿಂದ ಟ್ರ್ಯಾಕ್ಟರ್‍ಗಳನ್ನು ಕಳ್ಳತನ ಮಾಡುತ್ತಿದ್ದರು. ಈ ಕುರಿತು ಒಟ್ಟು 4 ಪ್ರಕರಣಗಳು ದಾಖಲಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕುಂದಗೋಳ ಪೊಲೀಸ್ ಠಾಣೆಯ ಪಿಐ ಶಿವಾನಂದ ಅಂಬಿಗೇರ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದರು.
ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲಾ ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್ಪಿ ಎನ್.ಎ. ಭರಮನಿ, ಡಿವೈಎಸ್ಪಿ ಶಿವಾನಂದ ಕಟಗಿ, ಮಾರ್ಗದರ್ಶನ ನೀಡಿದ್ದಾರೆ. ಸ್ಥಳೀಯ ಠಾಣೆಯ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್‍ಐ ಆರ್.ಸಿ. ದೊಡ್ಡಮನಿ, ಮಂಜುಳಾ ಸದಾರಿಯವರ, ಇಮ್ರಾನ ಪಠಾಣ, ಸಿಬ್ಬಂದಿ ಚಂದ್ರು ಬಡಿಗೇರ, ಬಸವರಾಜ ಶಿರಕೋಳ, ಮಡಿವಾಳ ಜೋಡಗೇರಿ, ಪರಮೇಶ ಗೊಂದಿ, ಶಂಕರ ಮುತ್ತಲಗೇರಿ, ಮಲಗೌಡ ಪಾಟೀಲ, ಮೌನೇಶ ಗಲಗ, ಮಣಿಚಂದ್ರ ಗೋಣೇನವರ, ಅರುಣ ಹಾವಾಡಿ, ಉದಯ ಕಮ್ಮಾರ, ತಾಂತ್ರಿಕ ವಿಭಾಗದ ಅರೀಫ್ ಗೋಲಂದಾಜ, ವಿಠಲ ಡಂಗನವರ ತನಿಖಾ ತಂಡದಲ್ಲಿದ್ದರು.