ಟ್ರ್ಯಾಕ್ಟರ್ ಕಂಪನಿಯಿಂದ ಅನ್ಯಾಯ: ನ್ಯಾಯಕ್ಕಾಗಿ ಕಾರಿಗನೂರು ರೈತರ ಹೋರಾಟ

ದಾವಣಗೆರೆ.ಮೇ.೧; ಟ್ಯಾಕ್ಟರ್ ಕಂಪನಿಯವರಿಂದ ಮೊಸಕ್ಕೊಳಗಾಗಿದ್ದು ಈ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆಯೇ ಕಂಪನಿಯವರು ದೂರು ದಾಖಲಿಸಿದ್ದಾರೆ ಎಂದು ಕಾರಿಗನೂರು ಗ್ರಾಮದ ರೈತ ಪಿ.ಎಂ ಮುರುಗೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿ ವಂಚನೆಗೊಳಗಾದ ಬಗ್ಗೆ ವಿವರಿಸಿದ ಅವರು ದಾವಣಗೆರೆಯ ಪಿ.ಬಿ ರಸ್ತೆಯಲ್ಲಿರುವ ಓಂಕಾರ್ ಮೋಟರ‍್ಸ್ ನಲ್ಲಿ ಸೋಲಿಸ್ ಮತ್ತು ಯಾನ್ಮಾರ್ ಟ್ಯಾಕ್ಟರ್ ಗಳ ಬಿಡಿ ಭಾಗಗಳ ಶೋರೂಂ ನಲ್ಲಿ ಜನವರಿ ೧ ರಂದು ಟ್ಯಾಕ್ಟರ್ ಖರೀದಿಸಿದ್ದೆವು ಆದರೆ ಕೃಷಿಚಟುವಟಿಕೆಗಳನ್ನು ಆರಂಭಿಸಿದಾಗ ಟ್ಯಾಕ್ಟರ್ದೋಷಪೂರಿತವಾಗಿರುವುದು ಕಂಡುಬಂದಿತು. ಅತೀ ಹೆಚ್ಚು ಡಿಸೇಲ್ ವ್ಯಯವಾಗುತ್ತಿತ್ತು ಇದಲ್ಲದೇ ಭತ್ತ ನಾಟಿ ಮಾಡಲು ಗೇಜ್ ವೀಲ್ ನಿಂದ ರೊಳ್ಳೆ ಮಾಡುವಾಗ ನಿಧಾನವಾಗಿ ಕೆಲಸ ಮಾಡುತ್ತಿದೆ.ಈ ಬಗ್ಗೆ ಶೋರೂಂನವರಿಗೆ ತಿಳಿಸಿದಾಗ ಅವರು ಡಿಸೇಲ್ ಪಂಪ್ ಸರಿಪಡಿಸಿಕೊಟ್ಟಿದ್ದರು ಆದರೆ ಪದೇ ಪದೇ ಇದೇ ರೀತಿಯ ತೊಂದರೆಯಾಗಿದ್ದು ಸುಮಾರು ನಾಲ್ಕುಬಾರಿ ರೀಪೇರಿ ಮಾಡಲಾಗಿದೆ.ಕೊನೆಗೆ ಶೋರೂಂನವರು ರೀಪೇರಿ ಮಾಡಿಸಿದ್ದರು. ನಂತರ ಕೆಲ ಪತ್ರಗಳಿಗೆ ಸಹಿ ಮಾಡಲು ತಿಳಿಸಿದರು ಆದರೆ  ನಾವು ನಿರಾಕರಿಸಿದಾಗ ಶೋರೂಂಗೆ ಟ್ಯಾಕ್ಟರ್ ತೆಗೆದುಕೊಂಡು ಬರಲು ಹೇಳಿದರು.ಇದರಿಂದ ಬೇಸತ್ತು ಹೋಗಿದ್ದು ಈಗಾಗಲೇ ೭ ಲಕ್ಷ ರೂ ಸಾಲ ಮಾಡಿರುವುದಾಗಿ ಹೇಳಿದಾಗ ಹಾಗೂ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಹೇಳಿದಾಗ ನಮ್ಮನ್ನು ನಿರ್ಲಕ್ಷಿಸಿದರು ಅಲ್ಲದೇ ನಮ್ಮ ಮೇಲೆಯೇ ದೂರು ದಾಖಲಿಸಿದ್ದಾರೆ.ನಮ್ಮನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು ಇದರಿಂದ ಮಾನಸಿಕವಾಗಿ ಕುಗಿಹೊಗಿದ್ದೇನೆ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಮಗೆ ನ್ಯಾಯ ನೀಡಬೇಕು ಕಂಪನಿಯವರು ನಮಗೆ ಮೋಸ ಮಾಡಿದ್ದಾರೆ. ನಾವು ಸಹ ದೂರು ದಾಖಲಿಸಿದ್ದೇವೆ.ಗ್ರಾಹಕರ ಹಿತರಕ್ಷಣಾ ವೇದಿಕೆಗೂ ದೂರು ನೀಡಲಿದ್ದೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಲ್ಲೇಶ್ ,ರಮೇಶ್, ಚಂದ್ರಶೇಖರ್ ಇದ್ದರು.