ಟ್ರ್ಯಾಕ್ಟರ್ ಆಯತಪ್ಪಿ ಸವಾರ ಸ್ಥಳದಲ್ಲೇ ಸಾವು

ಕೆ.ಆರ್.ಪೇಟೆ:ಏ:04: ಟ್ರಾಕ್ಟರ್ ಚಾಲನೆ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದ ಜೀವನ್ ಎಂಬುವವರೇ ಮೃತ ದುರ್ದೈವಿ. ಗ್ರಾಮದಲ್ಲಿ ಶನಿವಾರ ಮದ್ಯಾಹ್ನ ಜೆಸಿಬಿ ಯಂತ್ರ ಮಣ್ಣು ತುಂಬಿದೆ ಇದನ್ನು ಖಾಲಿ ಮಾಡಲು ತೆರಳುತ್ತಿದ್ದ ವೇಳೇ ಮುಂದಿನ ಇಂಜಿನ್ ಎತ್ತಿಕೊಂಡಿದ್ದು ಘಟನೆಗೆ ಕಾರಣವೆಂದು ಸ್ಥಳೀಯರು ತಿಳಿಸಿದ್ದು ಟ್ರಾಕ್ಟರ್ ಇಂಜಿನ್‍ನ ಸ್ಟೇರಿಂಗ್‍ಗೆ ತಲೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಕಿಕ್ಕೇರಿ ಪಿಎಸ್‍ಐ ನವೀನ್ ಭೇಟಿನೀಡಿ ಪರಿಶೀಲನೆ ನಡೆಸಿದ್ದು ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಾಣಿಕೆ ಮಾಡಲಾಗಿದೆ. ಮೃತ ಕುಟುಂಬದವರ ರೋಧನ ಕರುಳು ಹಿಂಡುವಂತಿತ್ತು.