ಟ್ರ್ಯಾಕ್ಟರ್‍ನಲ್ಲಿದ್ದ ಮೇವಿಗೆ ತಗುಲಿದ ಬೆಂಕಿ: ಅನಾಹುತ ತಪ್ಪಿಸಿದ ಚಾಲಕ

ಕಲಬುರಗಿ.ಮಾ.18: ಪಶುಗಳಿಗಾಗಿ ಕೊಂಡೊಯ್ಯುತ್ತಿದ್ದ ಮೇವಿಗೆ ಬೆಂಕಿ ತಗುಲಿದ್ದ ವೇಳೆ ಚಾಲಕನ ಚಾಣಾಕ್ಷತನದಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಸೇಡಂ ತಾಲ್ಲೂಕಿನ ಕೋಲಕುಂದಾ ಗ್ರಾಮದಲ್ಲಿ ವರದಿಯಾಗಿದೆ.
ಕೋಲಕುಂದಾ ದೊಡ್ಡ ತಾಂಡಾದ ನಿವಾಸಿ ರಾಮು ನಾಯಕ್ ಅವರು ಪಶುಗಳಿಗಾಗಿ ಕಣಕಿ (ಮೇವು) ಟ್ರ್ಯಾಕ್ಟರ್‍ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಟ್ರ್ಯಾಲಿಯಲ್ಲಿದ್ದ ಮೇವಿಗೆ ಬೆಂಕಿ ತಗುಲಿದೆ. ಕೂಡಲೇ ಎಚ್ಚೆತ್ತುಕೊಂಡು ಚಾಲಕ ಮೇವು ಕೆಳಗೆ ಬೀಳುವಂತೆ ಮಾಡಿ, ತನ್ನ ಪ್ರಾಣ ಮತ್ತು ಟ್ರ್ಯಾಕ್ಟರ್‍ಗೆ ಆಗಬಹುದಾದ ಹಾನಿಯನ್ನು ತಪ್ಪಿಸಿದ್ದಾರೆ.
ರೋಚಕ ಸನ್ನಿವೇಶವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಚಾಲಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.