ಟ್ರೋಲ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ: ಮಂದಣ್ಣ

ಮುಂಬೈ,ಏ.೬-ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಅಭಿನಯದ ‘ಅನಿಮಲ್’ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿದ್ದು ಗೊತ್ತೇ ಇದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಈ ಚಿತ್ರವು ಬಾಲಿವುಡ್ ಮತ್ತು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಭಾವ ಬೀರಿದೆ. ಆದರೆ ಸಿನಿಮಾ ಬಿಡುಗಡೆಯಾದಾಗ ರಶ್ಮಿಕಾ ಮೇಲೆ ಒಂದಷ್ಟು ಟ್ರೋಲ್‌ಗಳು ಬಂದಿದ್ದವು. ಅದರಲ್ಲೂ ಕರ್ವಾಚೌತ್ ಸೀನ್ ನಲ್ಲಿ ರಶ್ಮಿಕಾಗೆ ಸರಿಯಾಗಿ ಡೈಲಾಗ್ ಹೇಳಲು ಬರುವುದಿಲ್ಲ ಎಂದು ವಿರೋಧಿಗಳು ಟ್ರೋಲ್ ಮಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಟ್ರೋಲ್‌ಗಳಲ್ಲಿ ಅನಿಮಲ್ ಚಿತ್ರದ ಕೆಲವು ದೃಶ್ಯಗಳಲ್ಲಿ ನನ್ನ ಮುಖ, ನಟನೆ ಮತ್ತು ಡೈಲಾಗ್ ಡೆಲಿವರಿ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ .ಹೆಚ್ಚಿನವರು ಕರ್ವಾಚೌಟ್ ದೃಶ್ಯದ ಬಗ್ಗೆ ಮಾತನಾಡಿದ್ದು ಆದರೆ ನಾನು ಆ ದೃಶ್ಯದಲ್ಲಿ ತುಂಬಾ ಕಷ್ಟಪಟ್ಟು ನಟಿಸಿದ್ದೇನೆ. ನಾನು ವಿಭಿನ್ನತೆ ತೋರಿಸಬೇಕಾಗಿತ್ತು. ಆ ಒಂದು ದೃಶ್ಯಕ್ಕೆ ಬೇಕಾದ ಭಾವನೆಗಳನ್ನು ಹಂಚಿಕೊಳ್ಳುಲು ನಾನು ೧೦೦ ಪರ್ಸೆಂಟ್ ಪ್ರಯತ್ನ ಮಾಡಿದ್ದೇನೆ.ಆ ದೃಶ್ಯದ ನಂತರ ಇಡೀ ಸೆಟ್ ಚಪ್ಪಾಳೆ ತಟ್ಟಿ ನನ್ನ ಅಭಿನಯವನ್ನು ಮೆಚ್ಚಿದೆ.ಥಿಯೇಟರ್‌ನಲ್ಲಿ ಅದೇ ಪ್ರತಿಕ್ರಿಯೆ ದೊರೆತಿದೆ.ಆದರೆ ಕೆಲವರು ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.ಅವರು ನನ್ನನ್ನು ಟ್ರೋಲ್ ಮಾಡಿದ್ದಾರೆ .೯ ನಿಮಿಷದ ದೃಶ್ಯದಲ್ಲಿ ೧೦ ಸೆಕೆಂಡ್ ಡೈಲಾಗ್ ಇದೆ.ಆದರೆ ಹೆಣ್ಣಿನ ದೇಹವನ್ನು ಟ್ರೋಲ್ ಮಾಡುವವರನ್ನು ನಾನು ದ್ವೇಷಿಸುತ್ತೇನೆ.ಆದರೆ ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ
ಪ್ರತಿಯೊಬ್ಬರಿಗೂ ಅವರವರದೇ ಆದ ಆದ್ಯತೆಗಳಿರುತ್ತವೆ ಎಂದು ಉತ್ತರಿಸಿದ್ದಾರೆ.
ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ನಡುವಿನ ಕೆಲವು ದೃಶ್ಯಗಳಿಗೂ ಆಕ್ಷೇಪ ವ್ಯಕ್ತವಾಗಿದೆ. ಇದರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಉತ್ತೇಜನ ನೀಡಲಾಗಿದೆ ಎಂದು ಮಹಿಳಾ ಸಂಘಟನೆಗಳು ಆರೋಪಿಸಿವೆ. ಆದರೆ ಇದಕ್ಕೆ ಸಂದೀಪ್ ರೆಡ್ಡಿ ತಮ್ಮದೇ ಶೈಲಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅದೇನೇ ಇರಲಿ, ಈ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಸಿನಿಮಾದ ಸೀಕ್ವೆಲ್ ಅನಿಮಲ್ ಪಾರ್ಕ್ ಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಚಿತ್ರವು ೨೦೨೬ ರಲ್ಲಿ ತೆರೆಗೆ ಬರಲಿದೆಯಂತೆ. ಏಕೆಂದರೆ ಸದ್ಯ ಅವರು ಪ್ರಭಾಸ್ ಜೊತೆ ಮುಂಬರುವ ಸ್ಪಿರಿಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಪೂರ್ಣಗೊಂಡ ನಂತರವೇ ಸಂದೀಪ್ ರೆಡ್ಡಿ ಅನಿಮಲ್ ಪಾರ್ಕ್ ಕಡೆಗೆ ಗಮನ ಹರಿಸುವ ಸಾಧ್ಯತೆ ಇದೆ. ಪುಷ್ಪ ೨ ಮತ್ತು ದಿ ಗರ್ಲ್‌ಫ್ರೆಂಡ್ ಸೇರಿದಂತೆ ಇನ್ನೂ ಎರಡು ಚಿತ್ರಗಳನ್ನು ರಶ್ಮಿಕಾ ಪೂರ್ಣಗೊಳಿಸಲಿದ್ದಾರೆ.